ನಗರದ ಹೊರವಲಯದ ಬಾಗೇಪಲ್ಲಿ ರಸ್ತೆಯ ಚೊಕ್ಕಹಳ್ಳಿಯ ಸಮೀಪ ಸರ್ಕಾರದ ವತಿಯಿಂದ ಉಪನಗರ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿವಿಧ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ, ಚಿಂತಾಮಣಿ:
ರೈತರು ಸರ್ಕಾರದ ಅಭಿವೃದ್ಧಿಯಲ್ಲಿ ಭಾಗವಾಗುವ ನಿಟ್ಟಿನಲ್ಲಿ ನಗರದ ಹೊರವಲಯದ ಚೊಕ್ಕಹಳ್ಳಿ ಸಮೀಪ ಬಹು ಮಹತ್ವಾಕಾಂಕ್ಷೆಯ ಉಪನಗರವನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು ಈ ಹಿನ್ನೆಲೆಯಲ್ಲಿ ಚೊಕ್ಕಹಳ್ಳಿ ಬಳಿ ಉಪನಗರ ನಿರ್ಮಾಣಗೊಳ್ಳಲಿರುವ ಪ್ರದೇಶವನ್ನು ಉನ್ನತ ನಗರ ಯೋಜನೆಗೆ ಸಂಬಂಧಿಸಿದ ವಿವಿಧ ಅಧಿಕಾರಿ ವೃಂದದೊಂದಿಗೆ ಜಿಲ್ಲಾಧಿಕಾರಿ ಜಿ. ಪ್ರಭು ಭೇಟಿ ನೀಡಿ ವೀಕ್ಷಣೆ ನಡೆಸಿದರು.
ನಗರದ ಹೊರವಲಯದ ಬಾಗೇಪಲ್ಲಿ ರಸ್ತೆಯ ಚೊಕ್ಕಹಳ್ಳಿಯ ಸಮೀಪ ಸರ್ಕಾರದ ವತಿಯಿಂದ ಉಪನಗರ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿವಿಧ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಅಲ್ಲಿ ಗ್ರಾಮೀಣ ರಸ್ತೆಗಳಿದ್ದು ಅವುಗಳಿಂದಲೂ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕವೂ ಇದ್ದು, ಮುಂದಿನ ದಿನಗಳಲ್ಲಿ ಆರ್‌ಟಿಜಿಎಲ್ ರಸ್ತೆ ನಿರ್ಮಿಸುವ ಮೂಲಕ ಉಪನಗರದ ಸಂಪರ್ಕ ಕಲ್ಪಿಸುವಂತಾಗಬೇಕು. ಹಾಗೂ ಕೈಗಾರಿಕಾ ಪ್ರದೇಶದಿಂದ ರಿಂಗ್ ರೋಡ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಇದೆ ಎಂದರು.
ಪ್ರತಿ ಜಮೀನಿಗೆ ತೆರಳಿ ಅವರ ಮೂಲ ದಾಖಲೆಗಳನ್ನು ಪರಿಶೀಲಿಸಿ 1 ತಿಂಗಳಿನೊಳಗೆ ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವಂತೆ ಹಾಗೂ ಅಲ್ಲಿನ ಬೆಟ್ಟ ಪ್ರದೇಶದ ತಪ್ಪಲಿನವರೆವಿಗೂ ಇಳಿಜಾರು ಪ್ರದೇಶದ ಸುತ್ತಳತೆಯನ್ನು ಲೆಕ್ಕಚಾರ ಮಾಡಿ ನಿಖರ ಮಾಹಿತಿಯನ್ನು ಕಲೆ ಹಾಕಿ ಒದಗಿಸುವಂತೆ ತಹಶೀಲ್ದಾರ್ ಸುದರ್ಶನ್ ಯಾದವ್‌ರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಅಭಿವೃದ್ಧಿ ಆಯುಕ್ತ ಶಿವಾನಂದ ಕಾಪಶಿ, ನಗರ ಯೋಜನಾ ನಿರ್ದೇಶಕ ಎನ್.ಕೆ. ತಿಪ್ಪೇಸ್ವಾಮಿ, ನಗರ ಯೋಜನಾ ಸಹಾಯಕ ನಿರ್ದೇಶಕ ಎಂ.ಸಿ.ಶಶಿಕುಮಾರ್, ಚುಡಾ ಸಹಾಯಕ ನಿರ್ದೇಶಕಿ ಮೇಘನಾ ನಾಯ್ಕ್, ಚುಡಾ ಆಯುಕ್ತೆ ಶಾಂತಲಾ ನಾಯ್ಕ್, ತಹಶೀಲ್ದಾರ್ ಸುದರ್ಶನ್ ಯಾದವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್‌ರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಸುರೇಶ್, ಆರ್‌ಎಂಜೆ ಶ್ರೀನಿವಾಸ್, ಉಮೇಶ್ ಸೇರಿದಂತೆ ಮತ್ತಿತರರು ಇದ್ದರು.
ಚಿತ್ರಶೀರ್ಷಿಕೆ:
ನಗರದ ಹೊರವಲಯದ ಬಾಗೇಪಲ್ಲಿ ರಸ್ತೆಯ ಚೊಕ್ಕಹಳ್ಳಿಯ ಸಮೀಪ ಸರ್ಕಾರದ ವತಿಯಿಂದ ಉಪನಗರ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿವಿಧ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.