ಭೀಮನ ಅಮಾವಾಸ್ಯೆಗೆ ಚನ್ನಪಟ್ಟಣದ ಗೌಡಗೆರೆಯಲ್ಲಿ ಸಿದ್ಧತೆ

KannadaprabhaNewsNetwork |  
Published : Aug 04, 2024, 01:27 AM IST
ಪೊಟೋ೨ಸಿಪಿಟ೧: ತಾಲೂಕಿನ ಗೌಡಗೆರೆಯಲ್ಲಿನ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಮಲ್ಲೇಶ್ ಗುರೂಜಿ ಮಾತನಾಡಿದರು. | Kannada Prabha

ಸಾರಾಂಶ

ಭೀಮನ ಅಮಾವಾಸ್ಯೆ ಪ್ರಯುಕ್ತ ಆ.4ರಂದು ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ, ರಥೋತ್ಸವ ಏರ್ಪಡಿಸಲಾಗಿದ್ದು, ೨೫ ಅಡಿ ಎತ್ತರದ ಹೊಸ ತೇರು ದೇವಿಗೆ ಸಮರ್ಪಣೆ, ವಸ್ತು ಸಂಗ್ರಹಾಲಯ, ದಾಸೋಹ ಭವನ ಉದ್ಘಾಟಿಸಲಾಗುವುದು ಎಂದು ಮಲ್ಲೇಶ್ ಗುರೂಜಿ ತಿಳಿಸಿದರು. ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

-ಚಾಮುಂಡೇಶ್ವರಿಗೆ ಅಭಿಷೇಕ । ಹೊಸ ತೇರು ಸಮರ್ಪಣೆ । ಮ್ಯೂಸಿಯಂ, ದಾಸೋಹ ಭವನ ಉದ್ಘಾಟನೆಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಭೀಮನ ಅಮಾವಾಸ್ಯೆ ಪ್ರಯುಕ್ತ ಆ.4ರಂದು ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ, ರಥೋತ್ಸವ ಏರ್ಪಡಿಸಲಾಗಿದ್ದು, ೨೫ ಅಡಿ ಎತ್ತರದ ಹೊಸ ತೇರು ದೇವಿಗೆ ಸಮರ್ಪಣೆ, ವಸ್ತು ಸಂಗ್ರಹಾಲಯ, ದಾಸೋಹ ಭವನ ಉದ್ಘಾಟಿಸಲಾಗುವುದು ಎಂದು ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಆಷಾಢದ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಶ್ರೀ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಭೀಮನ ಅಮಾವಾಸ್ಯೆ ದಿನ ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭೀಮನ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಮುಂಜಾನೆ ೪.೨೮ಕ್ಕೆ, ೭.೨೮ಕ್ಕೆ ಮಧ್ಯಾಹ್ನ ೧೨.೨೮ಕ್ಕೆ ಮೂರು ಮಹಾಮಂಗಳಾರತಿ ನೆರವೇರಿಸಲಾಗುವುದು. ನೂರೆಂಟು ಹಾಲರವಿ ಸೇವೆ, ರಥೋತ್ಸವ ನಡೆಯಲಿದೆ ಎಂದರು.

೨೫ ಅಡಿ ಎತ್ತರದ ತೇರು:

ಪ್ರತಿ ವರ್ಷ ಶ್ರೀ ಕ್ಷೇತ್ರದಲ್ಲಿ ಭೀಮನ ಅಮಾವಾಸ್ಯೆ ದಿನ ರಥೋತ್ಸವ ನಡೆಯುತ್ತದೆ. ಈ ಬಾರಿ ರಥೋತ್ಸವಕ್ಕೆ ೨೫ ಅಡಿ ಎತ್ತರದ ಮರದಿಂದ ಕೆತ್ತಿದ ವಿಶೇಷ ತೇರನ್ನು ಸಿದ್ಧಪಡಿಸಿದ್ದು ದೇವಿಗೆ ಸಮರ್ಪಿಸಲಾಗುವುದು. ಒಂದುವರೆ ಸಾವಿರ ಭಕ್ತರ ಊಟಕ್ಕೆ ದಾಸೋಹ ಭವನ ಉದ್ಘಾಟಿಸಲಾಗುವುದು ಎಂದರು.

ಮ್ಯೂಸಿಯಂ ಉದ್ಘಾಟನೆ:

ಕ್ಷೇತ್ರದಲ್ಲಿ ದಕ್ಷಿಣ ಏಷ್ಯಾದಲ್ಲೇ ವಿಶೇಷವಾದ ಮ್ಯೂಸಿಯಂ ನಿರ್ಮಿಸಿದ್ದು, ಇದರಲ್ಲಿ ಇತಿಹಾಸ, ಆಧ್ಯಾತ್ಮ ಇತ್ಯಾದಿ ವಿಷಯಗಳು, ದೇಶದ ಮಹನೀಯರು, ಕೊಡುಗೆಗಳು, ಗಂಗೆ, ಯಮುನೆ, ಗೋದಾವರಿ, ನರ್ಮದಾ ಕಾವೇರಿ ಸೇರಿದಂತೆ ಸಪ್ತನದಿಗಳ ಮಾಹಿತಿ ಇರಲಿದೆ. ಸಪ್ತನದಿಗಳ ಉಗಮ ಸ್ಥಾನ, ಹರಿಯುವ ಹಾದಿ, ಅಣೆಕಟ್ಟುಗಳು, ಕೃಷಿ ಪ್ರದೇಶ ಸೇರಿದಂತೆ ಸಂಪೂರ್ಣ ಮಾಹಿತಿ ಇದೆ. ೧೨ ಜ್ಯೋತಿರ್ಲಿಂಗ, ಹಳೇ ಕಾಲದ ನಾಣ್ಯಗಳು, ವಿದೇಶಿ ಕರೆನ್ಸಿ ಸಂಗ್ರಹ, ಸಪ್ತಋಷಿಗಳು, ಜ್ಞಾನ ಮಂಟಪ ಇದ್ದು, ಗ್ರಂಥಾಲಯ ಸ್ಥಾಪಿಸುವ ಯೋಜನೆ ಇದೆ ಎಂದರು.

ಮಧ್ಯಾಹ್ನ ೧೨.೨೮ಕ್ಕೆ ಅಮ್ಮನವರ ಮೂಲ ವಿಗ್ರಹವನ್ನು ರಥೋತ್ಸವದಲ್ಲಿಟ್ಟು ಮೆರೆವಣಿಗೆ ಮಾಡಲಾಗುವುದು. ಶನಿವಾರ ಮಧ್ಯರಾತ್ರಿ 2 ಗಂಟೆಯಿಂದ ಭಾನುವಾರ ಮಧ್ಯಾಹ್ನ ೨ ಗಂಟೆವರೆಗೆ ಅಮ್ಮನವರ ಮೂಲ ಮೂರ್ತಿಗೆ ಅಭಿಷೇಕ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು. ಭಾನುವಾರ ರಾತ್ರಿ ೯ ಗಂಟೆವರೆಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ