ಸವಾಲು ಎದುರಿಸಲು ಮಕ್ಕಳನ್ನು ಸಿದ್ಧಪಡಿಸಿ: ಶಂಭುಲಿಂಗಪ್ಪ ಯಲಿಗಾರ

KannadaprabhaNewsNetwork |  
Published : Feb 27, 2025, 12:33 AM IST
ಮ | Kannada Prabha

ಸಾರಾಂಶ

ಶಾಲೆಗಳಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನವನ್ನಷ್ಟೇ ನೀಡಲಾಗುತ್ತಿದೆ. ಇದರಿಂದ ಉತ್ತಮ ಅಂಕಗಳನ್ನಷ್ಟೇ ಪಡೆಯಲು ಸಾಧ್ಯವಾಗುತ್ತಿದೆ.

ಬ್ಯಾಡಗಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಾಗುವಂತಹ ಎಲ್ಲ ಸವಾಲುಗಳನ್ನು ಸುಲಭವಾಗಿ ಎದುರಿಸಲು ಶಿಕ್ಷಕರು ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಂಭುಲಿಂಗಪ್ಪ ಯಲಿಗಾರ ಅಭಿಪ್ರಾಯಪಟ್ಟರು.ತಾಲೂಕಿನ ಬಿಸಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನದ ಅಂಗವಾಗಿ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶಾಲೆಗಳಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನವನ್ನಷ್ಟೇ ನೀಡಲಾಗುತ್ತಿದೆ. ಇದರಿಂದ ಉತ್ತಮ ಅಂಕಗಳನ್ನಷ್ಟೇ ಪಡೆಯಲು ಸಾಧ್ಯವಾಗುತ್ತಿದೆ. ಆದರೆ ವ್ಯವಾಹಾರಿಕ ಜ್ಞಾನವಿಲ್ಲದೇ ಬದುಕನ್ನು ಕಟ್ಟಿಕೊಳ್ಳಲಾಗದೇ ವಿಫಲರಾಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. ಭೌತಿಕವಾಗಿದ್ದರಷ್ಟೇ ಸಾಲುವುದಿಲ್ಲ: ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್. ಹುಲ್ಯಾಳ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಸರ್ಕಾರ ಅನುಕೂಲ ಕಲ್ಪಿಸಿದೆ. ಉಚಿತ ಶಿಕ್ಷಣ, ಗುಣಮಟ್ಟದ ಬೋಧನೆ, ಅಕ್ಷರ ದಾಸೋಹ, ಇಂಗ್ಲಿಷ್ ಕಲಿಕೆಗೂ ಆದ್ಯತೆ ನೀಡಿದೆ. ಆದರೆ ಇತ್ತೀಚೆಗೆ ಕೆಲ ಶಿಕ್ಷಕರು ಭೌತಿಕವಾಗಿ ಶಾಲಾ ಕೊಠಡಿಗಳಲ್ಲಿದ್ದರೂ ಪಾಠಗಳನ್ನು ಮಾಡಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ಮೊಬೈಲ್ ಚಾಟಿಂಗ್‌ನಲ್ಲಿ ಕಾಲ ಕಳೆಯುತ್ತಿದ್ದು, ಇನ್ನಾದರೂ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಮುಖ್ಯಶಿಕ್ಷಕ ಐ.ಬಿ. ಜ್ಯೋತಿ ಮಾತನಾಡಿ, ಶಿಕ್ಷಕರು ತರಗತಿಗಳಲ್ಲಿ ಮೊಬೈಲ್‌ಗಳನ್ನು ಬಳಸದೇ, ಪ್ರತಿನಿತ್ಯ ಶಿಕ್ಷಣಕ್ಕೆ ಸಂಬಂದಿಸಿದ ಹೊಸ ವಿಚಾರಗಳನ್ನು ಕಲಿಸಿಕೊಡುವ ಮೂಲಕ ಮಕ್ಕಳ ಜ್ಞಾನವನ್ನು ಹೆಚ್ಚಿಸಬೇಕು ಎಂದರು.ಈ ಸಂದರ್ಭದಲ್ಲಿ ದುರಗಪ್ಪ ಗಟ್ಟಿಮನಿ, ನೀಲಪ್ಪ ಗಟ್ಟಿಮನಿ, ಮಹೇಶ ಕೊತ್ನೇರ, ಗುಡ್ಡಪ್ಪ ದೊಡ್ಡಮನಿ, ಮೌನೇಶ ಕಮ್ಮಾರ, ಟಿಪ್ಪುಸುಲ್ತಾನ ಹುಲ್ಮನಿ, ಶಿಕ್ಷಕರಾದ ರಾಜು ದೇವಗಿರಿಮಠ, ಎ.ಸಿ. ರೂಪಾ, ಎ.ಪಿ. ಪವಾರ, ಮಂಗಳಾ ಕಂಬಿ, ಮಂಜುಳಾ ಶೇದಿಯಣ್ಣನವರ, ಎಸ್.ಆರ್. ಬಡ್ಡಿ, ಹೇಮಲತಾ ಕೊರವರ, ಶಂಕರ ಕಿಚಡಿ, ವಿಜಯ ಶಿಡಗ್ನಾಳ ಇದ್ದರು.ಸಾರ್ವಜನಿಕ ವಿಚಾರಣೆ ಸಭೆ ಸಮಯ ಬದಲಾವಣೆ

ಹಾವೇರಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಆರ್ಥಿಕ ವರ್ಷ 2025- 26ರಿಂದ ಆಥಿರ್ಕ ವರ್ಷ 2027- 28ರ ಅವಧಿಯ ವಿದ್ಯುತ್ ದರ ಪರಿಷ್ಕ್ಕರಣಾ ಅರ್ಜಿಯ ಸಂಬಂಧ ಹುಬ್ಬಳ್ಳಿಯ ನವನಗರದಲ್ಲಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಕಚೇರಿ ನೂತನ ಸಭಾಂಗಣದಲ್ಲಿ ಸಾರ್ವಜನಿಕ ವಿಚಾರಣೆ ಸಭೆ ಫೆ. 27ರಂದು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿರುವುದನ್ನು ಮಾರ್ಪಡಿಸಿ ಅದೇ ದಿನ ಬೆಳಗ್ಗೆ 10.30ಕ್ಕೆ ಜರುಗಲಿದೆ.

ಆಸಕ್ತರು ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿ, ತಮ್ಮ ಸಲಹೆಗಳನ್ನು ಮೌಖಿಕ ಅಥವಾ ಲಿಖಿತ ರೂಪದಲ್ಲಿ ಸಲ್ಲಿಸಬಹುದೆಂದು ಹಾವೇರಿ ಹೆಸ್ಕಾಂ ಕಾರ್ಯ ಮತ್ತು ಪಾಲನ ವೃತ್ತದ ಅಧೀಕ್ಷಕ ಎಂಜಿನಿಯರರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ