ಉಡುಪಿಯಲ್ಲಿ ಡುಂಡಿರಾಜರ ಹೊಸ ಕವಿತೆಗಳ ಪ್ರಸ್ತುತಿ

KannadaprabhaNewsNetwork |  
Published : Mar 09, 2026, 02:45 AM IST
 'ಡುಂಡಿರಾಜರ ಹೊಸ ಕವಿತೆಗಳ ಪ್ರಸ್ತುತಿ'ಯಲ್ಲಿ ನಗರಸಭಾ ಸದಸ್ಯ ಗಿರೀಶ್ ರಿಗೆ ಸನ್ಮಾನ | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಆಯೋಜನೆಯಲ್ಲಿ ‘ಹನಿ ಕವಿತೆಗಳ ರಾಜ ಡುಂಡಿರಾಜರ ಹೊಸ ಕವಿತೆಗಳು’ ಕಾರ್ಯಕ್ರಮ ಉಡುಪಿಯ ಬುಡ್ನಾರಿನ ಅಂಶು ಮನೆಯಲ್ಲಿ ನಡೆಯಿತು.

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಆಯೋಜನೆಯಲ್ಲಿ ‘ಹನಿ ಕವಿತೆಗಳ ರಾಜ ಡುಂಡಿರಾಜರ ಹೊಸ ಕವಿತೆಗಳು’ ಕಾರ್ಯಕ್ರಮ ಉಡುಪಿಯ ಬುಡ್ನಾರಿನ ಅಂಶು ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕಾಲ ಕವಿ ಡುಂಡಿರಾಜರು ಉಡುಪಿಯ ಸಾಹಿತ್ಯಾಸಕ್ತರರಿಗೆ ತಮ್ಮ ಹೊಸ ಹನಿಗವನಗಳು, ಹೈಕುಗಳ ಮೂಲಕ ಮನಸ್ಸನ್ನು ಮುದಗೊಳಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ಸುಜಿ ಕುರ್ಯ ತಮ್ಮ ಸ್ವರಚಿತ ಹನಿಗವನಗಳನ್ನು ಪ್ರಸ್ತುತ ಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕ. ಸಾ. ಪ. ಉಡುಪಿ ತಾಲೂಕಿನ ಅಧ್ಯಕ್ಷ ರವಿರಾಜ್ ಹೆಚ್. ಪಿ., ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್, ಕ ಸಾ ಪ ದ ನಾರಾಯಣ ಮಡಿ ಭುವನಪ್ರಸಾದ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯ ಮಾಜಿ ನಗರಸಭಾ ಸದಸ್ಯ ಗಿರೀಶ್ ಅಂಚನ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಸಂಧ್ಯಾ ಶೆಣೈ ನಿರೂಪಿಸಿ, ಪೂರ್ಣಿಮಾ ಜನಾರ್ಧನ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀನು ಮಾರಾಟ ಫೆಡರೇಶನ್‌ನಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್‌ರೇ ಯಂತ್ರ ಕೊಡುಗೆ
ಬನ್ನಂಜೆ ಶನಿ ಕ್ಷೇತ್ರ: ಚಂದ್ರಮಂಡಲ ರಥೋತ್ಸವ