- ಅಣಜಿ ಗ್ರಾಮದಲ್ಲಿ ‘ಚಿಕ್ಕಕೆರೆ’ ಕೆರೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕೆರೆಗಳು ರೈತರ ಜೀವನಾಡಿಯಾಗಿವೆ. ಜನ- ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಅಣಜಿ ಗ್ರಾಮದಲ್ಲಿ ಮಂಗಳವಾರ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾಗಿರುವ ₹1 ಕೋಟಿ ವೆಚ್ಚದ ಕುರುಡಿ-ಕಿತ್ತೂರು ರಸ್ತೆಯಲ್ಲಿರುವ ‘ಚಿಕ್ಕಕೆರೆ’ ಕೆರೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬೇಸಿಗೆ ಕಾಲದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಅಷ್ಟೇ ಅಲ್ಲದೇ, ಅಂತರ್ಜಲಮಟ್ಟ ಕುಸಿತದಿಂದ ರೈತರ ಜಮೀನುಗಳಿಗೂ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಊರಿನ ಕೆರೆಗಳನ್ನು ಸಂರಕ್ಷಣೆ ಮಾಡಿದರೆ, ಅಂತರ್ಜಲಮಟ್ಟ ಹೆಚ್ಚಿಸುವ ಜೊತೆಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎಂದರು.ಈ ಸಂದರ್ಭ ಎಪಿಎಂಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಎಸ್.ಕೆ.ಚಂದ್ರಣ್ಣ, ಮುಖಂಡರಾದ ರಾಜಣ್ಣ, ಬಸವಲಿಂಗಪ್ಪ, ದೇವೇಂದ್ರಪ್ಪ, ಪರಮೇಶ್ವರಪ್ಪ, ಲೋಕೇಶ್, ಜಯಪ್ಪ, ಹಾಲೇಶ್, ಮಲ್ಲಣ್ಣ, ಅಣ್ಣೇಶ್, ಗ್ರಾಮಸ್ಥರು ಇದ್ದರು.
ರಸ್ತೆ ಕಾಮಗಾರಿಗೆ ಚಾಲನೆ:ಕ್ಷೇತ್ರದ ವ್ಯಾಪ್ತಿಯ ಅಣಬೇರು ಗ್ರಾಮದಲ್ಲಿ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಮಂಜೂರಾಗಿರುವ ₹50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಚಾಲನೆ ನೀಡಿದರು. ಈ ಸಂದರ್ಭ ಕೆಆರ್‌ಐಡಿಎಲ್ ಎಇಇ ನಿತಿನ್ ಜಾಧವ್, ಅಣಬೇರು ಗ್ರಾಮ ಪಂಚಾಯಿತಿ ಪಿಡಿಒ ವಿದ್ಯಾ, ಮುಖಂಡರಾದ ಬುಡೆನ್ ಸಾಬ್, ರಾಜಣ್ಣ, ಶಿವಜ್ಜ, ರುದ್ರಣ್ಣ, ಜಾಫರ್, ಶೌಕತ್, ಅನಿಲ್, ಓಂಕಾರಪ್ಪ, ನಾಗೇಂದ್ರಪ್ಪ, ಜಕ್ರಿಲ್, ವಾಗೇಶಪ್ಪ ಹಾಗೂ ಗ್ರಾಮಸ್ಥರು ಇದ್ದರು.
- - --15ಕೆಡಿವಿಜಿ35:
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಅಣಜಿ ಗ್ರಾಮದಲ್ಲಿ ಆಯೋಜಿಸಿದ್ದ ಕುರುಡಿ-ಕಿತ್ತೂರು ರಸ್ತೆಯ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಸ್. ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು.