ಸಾಹಿತ್ಯ, ಜಾನಪದ ಪರಂಪರೆ ಉಳಿಸಿ: ದಮ್ಮೂರು ಮಲ್ಲಿಕಾರ್ಜುನ

KannadaprabhaNewsNetwork |  
Published : Oct 19, 2026, 02:45 AM IST
ಕುರುಗೋಡು  01 ಮುಷ್ಟಗಟ್ಟೆ ರಸ್ತೆಯಲ್ಲಿರುವ ಐತಿಹಾಸಿಕ ಸಂಗಮೇಶ್ವರ ದೇವಾಲಯದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ  ವತಿಯಿಂದ   ದಸರಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ  ಉದ್ಘಾಟಿಸಿ | Kannada Prabha

ಸಾರಾಂಶ

ಸಾಹಿತ್ಯ ಮುಂದಿನ ಪೀಳಿಗೆಗೂ ಪರಸರಿಸುವ ಸಂಕಲ್ಪ ಮಾಡಬೇಕಿದೆ

ಕುರುಗೋಡು: ಸಾಹಿತ್ಯ ಮತ್ತು ಜಾನಪದ ಪರಂಪರೆ ಉಳಿಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತ ನಿಕಟ ಪೂರ್ವ ಅಧ್ಯಕ್ಷ ದಮ್ಮೂರು ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿರುವ ಐತಿಹಾಸಿಕ ಸಂಗಮೇಶ್ವರ ದೇವಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕುರುಗೋಡದಿಂದ ದಸರಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಪದ ಕಲಾವಿದರು ತಮ್ಮ ಅನುಭವ ಮತ್ತು ಜ್ಞಾನದ ಮೂಲಕ ಅಮೂಲ್ಯ ಸಾಂಸ್ಕೃತಿಕ ಸಂಪತ್ತನ್ನು ಉಳಿಸಿಕೊಂಡು ಬಂದಿದ್ದಾರೆ. ಕವಿಗಳ ಕವಿತೆಗೆ ಪ್ರತಿಯೊಬ್ಬರೂ ಕಿವಿಯಾಗಬೇಕು, ಆ ಮೂಲಕ ಸಾಹಿತ್ಯ ಮುಂದಿನ ಪೀಳಿಗೆಗೂ ಪರಸರಿಸುವ ಸಂಕಲ್ಪ ಮಾಡಬೇಕಿದೆ ಎಂದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ ಕವಿ ಅಬ್ದುಲ್ ಹೈ ತೋರಣಗಲ್ಲು ಮಾತನಾಡಿ, ಸಾಹಿತ್ಯಕ್ಕೆ ಹಲವರ ಬದುಕು ಬದಲಿಸುವ ಶಕ್ತಿ ಇದ್ದು, ಉತ್ಸವಗಳಲ್ಲಿ ಲಕ್ಷಾಂತರ ಜನ ಸಾಹಿತ್ಯದ ಸವಿರುಚಿ ಸವಿಯಬೇಕು .ಎಲ್ಲ ಕವಿಗಳು ಅದ್ಭುತವಾಗಿ ತಮ್ಮ ಕವನ ವಾಚಿಸಿದ್ದು ಖುಷಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಹಿತ್ಯ ಸೇವೆ ಮೂಡಿ ಬರಲಿ ಎಂದರು.

ಡಾ.ಶಿವಲಿಂಗಪ್ಪ ಹಂದಿಹಾಳ್ ಮಾತನಾಡಿ, ಕವಿಗಳಿಗೆ ಸಮಕಾಲಿನ ಸಾಹಿತ್ಯದ ಓದು ಬಹಳ ಅವಶ್ಯಕ, ನಿರಂತರ ಅಭ್ಯಾಸ ಹಾಗೂ ಸಾಹಿತ್ಯದ ಬಗ್ಗೆ ಒಲವು ಇದ್ದಾಗ ಮಾತ್ರ ಅದ್ಭುತ ಸಾಹಿತ್ಯ ಹೊರಹೊಮ್ಮಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಸಾಹಿತ್ಯ ನಿಂತ ನೀರಾಗದೆ ಹರಿವ ನದಿಯಂತಿರಬೇಕು. ತಾಲೂಕು ಘಟಕ ಐತಿಹಾಸಿಕ ಸ್ಥಳದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಖುಷಿ ನೀಡಿದೆ ಎಂದರು.

ನಂತರ ಕವಿಗೋಷ್ಠಿಯ ಭಾಗಿಯಾದ 25ಕ್ಕೂ ಹೆಚ್ಚು ಕವಿಗಳು ಕವಿತೆ ವಾಚನ ಮಾತನಾಡಿದರು.

ಉಪನೊಂದಣಾಧಿಕಾರಿ ಸಂತೋಷ್ ಕುಮಾರ್ ಪಾಟೀಲ್ ಹಾಗೂ ನಾಡಗೌಡ್ರು ಮರೆಗೌಡರು ಮತ್ತು ಉಪನ್ಯಾಸಕ ತಿಪ್ಪೇರುದ್ರ ಸಂಡೂರು, ಚಿತ್ರಕಲಾ ಶಿಕ್ಷಕ ಬಸವರಾಜ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ್ ಮಸೂತಿ, ಶಿಕ್ಷಕ ಎನ್ ಬಸವರಾಜ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಕ್ಷಗಾನದಿಂದ ಪ್ರೌಢ ವ್ಯಕ್ತಿತ್ವ ರೂಪು: ರಮೇಶ್ ಭಟ್ ಎಸ್.ಜಿ
ನಾಪೋಕ್ಲು ಸುತ್ತಮುತ್ತ ಬಿರುಸಿನ ಮಳೆ: ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ಅಡಚಣೆ