ಹಲಗೂರು ಲಯನ್ಸ್ ಭವನದಲ್ಲಿ ಪತ್ರಿಕಾ ದಿನಾಚರಣೆ

KannadaprabhaNewsNetwork |  
Published : Aug 31, 2026, 01:30 AM IST
30ಕೆಎಂಎನ್ ಡಿ11 | Kannada Prabha

ಸಾರಾಂಶ

ಈ ಎಲ್ಲ ಸಾಮಾಜಿಕ ಸೇವೆಗಳು ಜನಮಾನಸಕ್ಕೆ ತಲುಪುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಗೌರವಿಸುವ ಉದ್ದೇಶದಿಂದ ಪತ್ರಿಕಾ ದಿನ ಆಚರಿಸುತ್ತಿದ್ದೇವೆ.

ಹಲಗೂರು:

ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್‌ನಿಂದ ಪತ್ರಿಕಾ ದಿನವನ್ನು ಆಚರಿಸಿ ಪತ್ರಕರ್ತರನ್ನು ಅಭಿನಂದಿಸಲಾಯಿತು.

ಅಧ್ಯಕ್ಷ ಗುಣೇಶ್ ಮಾತನಾಡಿ, ಕ್ಲಬ್ ಕಳೆದ 40 ವರ್ಷಗಳಿಂದ ಹಸಿವು ನಿವಾರಣೆ, ಉಚಿತ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರಗಳು, ಕಣ್ಣಿನ ತಪಾಸಣಾ ಶಿಬಿರಗಳು, ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ ಸೇರಿದಂತೆ ಪ್ರತಿ ವರ್ಷ ನೂರಾರು ಜನಪರ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.

ಈ ಎಲ್ಲ ಸಾಮಾಜಿಕ ಸೇವೆಗಳು ಜನಮಾನಸಕ್ಕೆ ತಲುಪುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರನ್ನು ಗೌರವಿಸುವ ಉದ್ದೇಶದಿಂದ ಪತ್ರಿಕಾ ದಿನ ಆಚರಿಸುತ್ತಿದ್ದೇವೆ ಎಂದರು.

ಇದೇ ವೇಳೆ ಪತ್ರಕರ್ತರಾದ ಎಚ್.ಎನ್.ಪ್ರಸಾದ್, ಎಚ್.ಎಂ.ಯೋಗೇಶ್, ಎ.ಬಿ.ಚೇತನ್ ಕುಮಾರ್, ಎಸ್.ಉಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ನಾಗೇಶ್, ಡಾ.ಶಂಷುದ್ದೀನ್, ಎ.ಎಸ್.ದೇವರಾಜು, ಪದ್ಮನಾಭ್, ಎನ್.ಕೆ.ಕುಮಾರ್, ಆನಂದಕುಮಾರ್, ಎ.ಟಿ.ಶ್ರೀನಿವಾಸ, ಮುನಿರಾಜು, ಶಿವರಾಜು, ಸ್ವಾಮಿ, ಮನೋಹರ್, ಎನ್.ಯೋಗೇಶ್, ಡಿ ವೈ ನಾಗರಾಜು (ಬಾಬು), ಎಚ್.ವಿ.ರಾಜು, ಗುರುಸಿದ್ದು, ಸಿದ್ದಲಿಂಗ ಸ್ವಾಮಿ, ಸಿ.ಪ್ರವೀಣ, ಡಿ.ಎಲ್ . ಮಾದೇಗೌಡ ಸೇರಿದಂತೆ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಸಿ.ಪಿ.ಶಿವರಾಜು ಚಾಲನೆ

ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಚಿಕ್ಕಬ್ಯಾಡರಹಳ್ಳಿ-ತಿರುಮಲಾಪುರ ಗ್ರಾಮದಲ್ಲಿ ನಡೆದ ಪ್ರಥಮ ವರ್ಷದ ಟಿಪಿ ಕಪ್ ಸೀಜನ್-1 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಜೆಡಿಎಸ್ ಯುವ ಮುಖಂಡ ಸಿ.ಪಿ.ಶಿವರಾಜು ಚಾಲನೆ ನೀಡಿದರು.

ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಬಳಿಕ ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಮಾತನಾಡಿ, ಎರಡು ಗ್ರಾಮಗಳ ಯುವಕರು ಮೊದಲ ವರ್ಷದ ಟಿಪಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದರು.ಇದೇ ವೇಳೆ ಸಿ.ಪಿ.ಶಿವರಾಜು ಅವರನ್ನು ಅಭಿನಂದಿಸಲಾಯಿತು. ಸಿ.ಎ.ನಿಂಗೇಗೌಡ, ಚಿಕ್ಕಾಡೆ ಚೇತನ್, ಪಾಂಡು, ಡೇರಿ ಮಾಜಿ ಅಧ್ಯಕ್ಷ ಸಿ.ಎನ್.ಚಂದನ್, ಸಿ.ಎಸ್.ಚೇತನ್, ಅಂಗಡಿ ಚನ್ನೇಗೌಡ, ಕುಳ್ಳೇಗೌಡ, ಡಿ.ಎನ್.ರವಿ, ಅಗಟಹಳ್ಳಿ ರವಿ, ತಿಮ್ಮನಕೊಪ್ಪಲು ರವಿ, ಬ್ರಹ್ಮ, ಶ್ರೀಧರ್, ಆನಂದ್, ಸಂತೋಷ, ಮನು, ಕುಮಾರಸ್ವಾಮಿ, ರಾಮಚಂದ್ರು, ಅಂಗಡಿಧರ್ಮ, ಆಯೋಜಕರಾದ ದಿವಾಕರ್, ಚಿರಂಜೀವಿ, ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಕ್ರೀಡಾಸಕ್ತಿ ಬೆಳೆಸಬೇಕು: ಚಲುವರಾಯಸ್ವಾಮಿ
ಯುವಕರೇ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಶಂಕರಲಿಂಗೇಗೌಡ