ದರ ಏರಿಕೆ: ಬೋರ್‌ವೆಲ್ ಕೊರೆವ ಲಾರಿ ಮಾಲೀಕರ ಪ್ರತಿಭಟನೆ

KannadaprabhaNewsNetwork |  
Published : Apr 08, 2026, 02:00 AM IST
ಫೋಟೋ: 6 ಹೆಚ್‌ಎಸ್‌ಕೆ  1 ಮತ್ತು 21 ಹೊಸಕೋಟೆ ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಬೋರ್‌ವೆಲ್ ರಿಗ್ ಮಾಲೀಕರು ಬೋರ್‌ವೆಲ್ ಕೊರೆಸಲು ದರ ಏರಿಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹೊಸಕೋಟೆ: ಬೋರ್‌ವೆಲ್ ಕೊರೆಸುವ ಅಗತ್ಯ ವಸ್ತುಗಳ ಬೆಲೆಯು ಗಣನೀಯವಾಗಿ ಏರಿಕೆ ಆಗಿರುವ ಕಾರಣ ಬೋರ್‌ವೆಲ್ ಮಾಲೀಕರು ಬೆಲೆ ಏರಿಕೆಗೆ ತತ್ತರಿಸಿದ್ದು ಬೋರ್‌ವೆಲ್ ಮಾಲೀಕರು ವಾಹನಗಳನ್ನು ನಿಲ್ಲಿಸಿ ಪ್ರತಿಭಟಿಸಿದರು

ಹೊಸಕೋಟೆ: ಬೋರ್‌ವೆಲ್ ಕೊರೆಸುವ ಅಗತ್ಯ ವಸ್ತುಗಳ ಬೆಲೆಯು ಗಣನೀಯವಾಗಿ ಏರಿಕೆ ಆಗಿರುವ ಕಾರಣ ಬೋರ್‌ವೆಲ್ ಮಾಲೀಕರು ಬೆಲೆ ಏರಿಕೆಗೆ ತತ್ತರಿಸಿದ್ದು ಬೋರ್‌ವೆಲ್ ಮಾಲೀಕರು ವಾಹನಗಳನ್ನು ನಿಲ್ಲಿಸಿ ಪ್ರತಿಭಟಿಸಿದರು.

ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಗ್ರಾಮೀಣ ರಿಗ್ ಮಾಲೀಕರು ಬೋರ್‌ವೆಲ್ ಲಾರಿಗಳನ್ನು ನಿಲ್ಲಿಸಿ ಏಜೆಂಟರು ಹೊಸ ದರ ನಿಗದಿ ಮಾಡುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಪಟ್ಟು ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಬೋರ್‌ವೆಲ್ ಮಾಲೀಕ ಚನ್ನಕೇಶವ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಬಿಟ್, ಆಯಿಲ್, ಹ್ಯಾಮರ್, ಕಾರ್ಮಿಕ ಹಾಗೂ ನಿರ್ವಹಣಾ ವೆಚ್ಚ ಶೇ.೩೦ರಿಂದ ೫೦ರಷ್ಟು ಹೆಚ್ಚಳವಾಗಿರುವ ಪರಿಣಾಮ ರಿಗ್ ಮಾಲೀಕರು ಬೋರ್‌ವೆಲ್ ಲಾರಿಗಳ ನಿರ್ವಹಣೆ ಮಾಡುವುದೇ ಸವಾಲಾಗಿದೆ. ಪ್ರಮುಖವಾಗಿ 53 ಸಾವಿರ ಇದ್ದ ಬಿಟ್ ಕಳೆದ 15 ದಿನಗಳಲ್ಲಿ 78 ಸಾವಿರಕ್ಕೆ ಏರಿಕೆಯಾಗಿದೆ. ಇದರ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ. ಅಲ್ಲದೆ ಎಂಜಿನ್ ಆಯಿಲ್, ಡೀಸೆಲ್, ಪೈಪ್‌ಗಳು ಸೇರಿದಂತೆ ಎಲ್ಲಾ ವಸ್ತುಗಳು ಏರಿಕೆ ಕಂಡಿದೆ. ಚಾಲಕರಿಗೆ ಸಂಬಳ ಕೊಡಲಿಕ್ಕು ಕಷ್ಟವಾಗಿದೆ. ಇದರಿಂದ ಮಾಲೀಕರು ಲಾರಿಗಳ ಸಾಲ ಕಟ್ಟೋಕು ಆಗ್ತಿಲ್ಲ. ಆದ್ದರಿಂದ ಬೆಲೆ ಏರಿಕೆ ಅನಿವಾರ್ಯ. ಏಜೆಂಟರ ಜೊತೆ ಸಭೆ ನಡೆಸಿ ನಿರ್ಧಾರ ಮಾಡ್ತೇವೆ ಎಂದರು.

ಈ ಸಂದರ್ಭದಲ್ಲಿ ಬೋರ್‌ವೆಲ್ ಮಾಲೀಕರಾದ ಶಾಂತಕುಮಾರ್, ಪ್ರಕಾಶ್, ಎಸ್‌ಎಲ್‌ಆರ್ ರಾಜ, ಷಷ್ಮುಗ, ಶಿವಣ್ಣ, ಕೃಷ್ಣಮೂರ್ತಿ ಇತರರಿದ್ದರು.

ಫೋಟೋ: 6 ಹೆಚ್‌ಎಸ್‌ಕೆ 1 ಮತ್ತು 2

1 ಹೊಸಕೋಟೆ ತಾಲೂಕಿನ ಆಲಪ್ಪನಹಳ್ಳಿ ಬಳಿ ಪೂರ್ವ ಕರ್ನಾಟಕ ಬೋರ್‌ವೆಲ್ ರಿಗ್ ಮಾಲೀಕರು ಬೋರ್‌ವೆಲ್ ಕೊರೆಸಲು ದರ ಏರಿಕೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪಕದನದ ಬಹಿರಂಗ ಪ್ರಚಾರ ಅಂತ್ಯ
ಇಂದಿನಿಂದ ಗ್ರಾಮದೇವತೆ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ