ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಗೆ ಆಯ್ಕೆ

KannadaprabhaNewsNetwork | Published : Mar 7, 2025 12:49 AM

ಸಾರಾಂಶ

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು 12 ರಲ್ಲಿ 11 ಸ್ಥಾನಗಳನ್ನು ಗಳಿಸಿ ಅಧಿಕಾರ ಪಡೆದುಕೊಂಡಿದ್ದಾರೆ. ಅಧ್ಯಕ್ಷರಾಗಿ ಪ್ರಕಾಶ್ ನಾರಾಯಣ ರಾವ್ , ಉಪಾಧ್ಯಕ್ಷರಾಗಿ ರಾಘವ ಗೌಡ ಕುಡುಮಡ್ಕ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು 12 ರಲ್ಲಿ 11 ಸ್ಥಾನಗಳನ್ನು ಗಳಿಸಿ ಅಧಿಕಾರ ಪಡೆದುಕೊಂಡಿದ್ದಾರೆ.

ಆಡಳಿತ ಮಂಡಳಿಯ ನೂತನ‌ ಅಧ್ಯಕ್ಷರಾಗಿ ಕಳೆದ ಅವಧಿಯ ಉಪಾಧ್ಯಕ್ಷ, ಬೆಳ್ತಂಗಡಿ ರೋಟರಿ ಕ್ಲಬ್ ಪೂರ್ವ ಕಾರ್ಯದರ್ಶಿ,ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಘಟಕ,ಯುವ ನಾಯಕ ಪ್ರಕಾಶ್ ನಾರಾಯಣ ರಾವ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಪ್ರಗತಿಪರ ಕೃಷಿಕ ರಾಘವ ಗೌಡ ಕುಡುಮಡ್ಕ ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರಾಗಿ ಕಜೆ ವೆಂಕಟೇಶ್ವರ ಭಟ್, ಅಜಯ್ ಕಲ್ಲಿಕಾಟ್, ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ಚೆನ್ನಕೇಶವ ಅರಸಮಜಲು, ರವಿ ಪೂಜಾರಿ, ಶಿವಪ್ರಸಾದ್ ಗೌಡ, ಅಶ್ವಿನಿ ಹೆಬ್ಬಾರ್, ಮೋಹಿನಿ ಓಬಯ್ಯ ಗೌಡ ಹಾಗೂ ಸುಮಾ ಗೋಖಲೆ ಆಯ್ಕೆಯಾದರು.

ಜ.19ರಂದು ಚುನಾವಣೆ ನಡೆದಿದ್ದು, 5ರ ಪೈಕಿ2 ಮಹಾಸಭೆಗಳಲ್ಲಿ ಭಾಗವಹಿಸದ ಕೆಲವು ಮಂದಿ ನ್ಯಾಯಾಲಯದ ಮೆಟ್ಟಿಲು ಹತ್ತಿ ಮತದಾನ ಮಾಡಿದ ಕಾರಣ ಅದರ ತೀರ್ಪು ಇತ್ತೀಚೆಗಷ್ಟೆ ಬಂದಿದ್ದು ಬಳಿಕ ಅಧಿಕೃತ ಫಲಿತಾಂಶ ಘೋಷಣೆಯಾಗಿತ್ತು.

ಸಿಡಿಒ ಪ್ರತಿಮಾ ಬಿ.ವಿ.ಚುನಾವಣಾ ಪ್ರಕ್ರಿಯೆ ನಡೆಸಿದರು. ಸಿಇಒ ಪ್ರಸನ್ನ ಪರಾಂಜಪೆ, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಕೋಟ್ಯಾನ್ ಹಾಗೂ ಸಿಬ್ಬಂದಿ ಸಹಕರಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ಚುನಾವಣಾ ಸಂಚಾಲಕ ಕೊರಗಪ್ಪ ಗೌಡ, ಸಹ ಸಂಚಾಲಕಿ ಪೂರ್ಣಿಮಾ, ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ್ ಬಂಗೇರ, ಪ್ರಮುಖರಾದ ನಾರಾಯಣ ಫಡ್ಕೆ, ವೆಂಕಟ್ರಾಯ ಅಡೂರು, ಅನಂತ ಭಟ್ ಮಚ್ಚಿಮಲೆ, ಓಬಯ್ಯ ಗೌಡ, ಪ್ರಾನ್ಸಿಸ್ ವಿ.ಡಿ., ಚಂದ್ರಕಾಂತ ಪ್ರಭು ಮತ್ತಿತರರು ಇದ್ದರು.

................

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಕಾಶ್ ನಾರಾಯಣ ರಾವ್ ಮಾತನಾಡಿ ಮುಂದಿನ 5 ವರ್ಷಗಳಲ್ಲಿ ಉತ್ತಮ ಆಡಳಿತ ನಡೆಸುವ ಇರಾದೆ ಹೊಂದಿದ್ದು, ಮಾದರಿ ಸಂಘವನ್ನಾಗಿ ರೂಪಿಸಲು ಪ್ರಯತ್ನಿಸಲಾಗುವುದು.ರೈತರ ಕಷ್ಟ ಸಂದರ್ಭ ತ್ವರಿತ ಸೇವೆ ನೀಡಲಾಗುವುದು ಕಲ್ಮಂಜ ಮತ್ತು ಚಾರ್ಮಾಡಿಯಲ್ಲಿ ಪೂರ್ಣ ಪ್ರಮಾಣದ ಶಾಖೆಗಳ ನಿರ್ಮಾಣ, ಬಾಂಜಾರು ಮಲೆ ಪ್ರದೇಶಕ್ಕೆ ಬ್ಯಾಂಕಿಂಗ್ ವ್ಯವಸ್ಥೆ,ಸಂಘದ ಒಂದೂವರೆ ಎಕರೆ ಜಾಗದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

Share this article