ಮುಖ್ಯಶಿಕ್ಷಕಿಯ ವರ್ಗಾವಣೆಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Nov 08, 2023, 01:00 AM IST
ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶಾಲೆಯ ಮುಖ್ಯಶಿಕ್ಷಕಿಯನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶಾಲೆಯ ಮುಖ್ಯಶಿಕ್ಷಕಿ ವರ್ಗಾವಣೆಗೆ ಆಗ್ರಹಿಸಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಲಕ್ಕಲಕಟ್ಟಿ ಗ್ರಾ.ಪಂ. ಮುಂದೆ ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದ ಘಟನೆ ಮಂಗಳವಾರ ನಡೆಯಿತು.

ಶಿಕ್ಷಣಾಧಿಕಾರಿಯಿಂದ ಸಮಸ್ಯೆ ಪರಿಹಾರದ ಭರವಸೆ; ಪ್ರತಿಭಟನೆ ಮೊಟಕು

ಗಜೇಂದ್ರಗಡ: ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶಾಲೆಯ ಮುಖ್ಯಶಿಕ್ಷಕಿ ವರ್ಗಾವಣೆಗೆ ಆಗ್ರಹಿಸಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಲಕ್ಕಲಕಟ್ಟಿ ಗ್ರಾ.ಪಂ. ಮುಂದೆ ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದ ಘಟನೆ ಮಂಗಳವಾರ ನಡೆಯಿತು. ಶಾಲೆಯಲ್ಲಿ ಬಿಸಿಯೂಟ ಹಾಗೂ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಪರಿಣಾಮ ಊಟದಲ್ಲಿ ಅಲ್ಪ ಪ್ರಮಾಣದ ಕಾಯಿಪಲ್ಲೆ ಬಳಸಲಾಗುತ್ತಿದೆ, ಅಕ್ಟೋಬರ್ ತಿಂಗಳಲ್ಲಿ ಶಾಲೆ ಆರಂಭವಾದ ದಿನದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ನೀಡುವಂತೆ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ನೀಡಿಲ್ಲ. ಶಾಲೆಯಲ್ಲಿರುವ ಶೌಚಾಲಯವನ್ನು ಸಹ ಸ್ವಚ್ಛಗೊಳಿಸಲ್ಲ ಎಂದು ದೂರಿನ ಸುರಿಮಳೆಯನ್ನು ಸುರಿಸಿದ ವಿದ್ಯಾರ್ಥಿಗಳು. ಶಾಲೆಗೆ ಮುಖ್ಯಶಿಕ್ಷಕಿ ಬಂದಾಗಿನಿಂದ ಈ ಸಮಸ್ಯೆ ಉದ್ಭವವಾಗಿದೆ ಎಂದು ಆರೋಪಿಸುವುದರ ಜತೆಗೆ ಮುಖ್ಯಶಿಕ್ಷಕಿಯನ್ನು ವರ್ಗಾಯಿಸಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಶಾಲೆಯಲ್ಲಿ ಒಟ್ಟು ೪೪೨ ವಿದ್ಯಾರ್ಥಿಗಳಿದ್ದು ಸಮಯಕ್ಕೆ ಸರಿಯಾಗಿ ಊಟ ನೀಡುವುದಿಲ್ಲ, ಕೆಲವೊಮ್ಮೆ ಮದ್ಯಾಹ್ನ ೩ ಗಂಟೆಗೆ ಬಿಸಿಯೂಟ ನೀಡುತ್ತಾರೆ. ಬಿಸಿಯೂಟದಲ್ಲಿ ತರಕಾರಿಗಳನ್ನು ಬಳಸುವುದಿಲ್ಲ, ಇತ್ತ ಕಾರಪುಡಿ ಹಾಕಿಕೊಂಡು ಮಕ್ಕಳು ಊಟ ಮಾಡಿದ ಘಟನೆಗಳು ನಡೆದಿವೆ. ಇಂತಹ ಪರಿಸ್ಥಿತಿ ಪದೇ ಪದೇ ಶಾಲೆಯಲ್ಲಿ ಆಗುವುದು ಸಾಮಾನ್ಯವಾಗಿದೆ. ಈ ಕುರಿತು ಅಕ್ಷರ ದಾಸೋಹ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಸಹ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಪಾಲಕರಾದ ಶರಣಪ್ಪ ಹೊಸಳ್ಳಿ, ಸೋಮಪ್ಪ ಬೆನಕನವಾರಿ, ಬಸವರಾಜ ಕೊಪ್ಪದ, ಅಳೆಬಸಪ್ಪ ಬೆನಕನವಾರಿ, ಮಲ್ಲಪ್ಪ ಕೊಪ್ಪದ ಹೊನಕೇರಪ್ಪ ಕೊಪ್ಪದ ಆರೊಪಿಸಿದರು.ಪ್ರತಿಭಟನೆ ವಿಷಯ ತಿಳಿದು ಮಧಹ್ನ ೩ ಗಂಟೆಯ ನಂತರ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಹುರಳಿ ಮಕ್ಕಳ ಹಾಗೂ ಪಾಲಕರ ಜೊತೆ ಸಭೆ ನಡೆಸಿ ಮಾಹಿತಿ ಪಡೆದರು. ಮಕ್ಕಳ ಹಾಗೂ ಪಾಲಕರ ಹೇಳಿಕೆಯನ್ನು ಪಡೆದು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿಕೆ ನೀಡಿದಾಗ ಪಾಲಕರು ಪದೇ ಪದೇ ಈ ಸಮಸ್ಯೆ ಆಗುತ್ತಿದೆ ಮುಖ್ಯಶಿಕ್ಷಕಿ ಎ.ಎಸ್.ರಾಠೋಡ ವರ್ಗಾವಣೆ ಮಾಡಿದ ಮೇಲೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ಎಂದು ಪಟ್ಟು ಹಿಡಿದಾಗ ಬಿಇಒ ಹುರಳಿ ಅವರು ಶೀಘ್ರದಲ್ಲಿಯೇ ಸಮಸ್ಯೆಗೆ ಪರಿಹಾರ ಮಾಡಿಕೊಡುತ್ತೇವೆ ಎಂದ ಬಳಿಕ ಪ್ರತಿಭಟನೆ ಮೊಟಕುಗೊಳಿಸಲಾಯಿತು.ಈ ವೇಳೆ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಬೆನಕನವಾರಿ, ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಅಂಗಡಿ, ಶರಣಯ್ಯ ಹಿರೇಮಠ ಸೇರಿ ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ