- ದತ್ತಾತ್ರೇಯ ಬಡಾವಣೆ ಸಾಯಿಮಂದಿರ, ಉದ್ಯಾನವನದಲ್ಲಿ ನರೇಂದ್ರ ಮೋದಿ 75 ನೇ ಜನ್ಮದಿನ
ಕನ್ನಡಪ್ರಭ ವಾರ್ತೆ, ಕಡೂರುಭಾರತವನ್ನು ಬಲಿಷ್ಠಗೊಳಿಸಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ಪಟ್ಟಣದ ದತ್ತಾತ್ರೇಯ ಬಡಾವಣೆ ಸಾಯಿಮಂದಿರ ಮತ್ತು ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 75 ನೇ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕಕ್ಕೆ ಸ್ವಚ್ಛತೆ ಶ್ರಮದಾನದ ಮೂಲಕ ಚಾಲನೆ ನೀಡಿ ಮಾತನಾಡಿದರು. ಭಾರತವನ್ನು ವಿಶ್ವಮಾನ್ಯ ಮಾಡುವಲ್ಲಿ ಮೋದಿಯವರ ಶ್ರಮ ಅಪಾರವಾಗಿದೆ. ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದಲೂ ಹಲವಾರು ಸವಾಲುಗಳನ್ನು ಎದುರಿಸಿ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವ ಮೂಲಕ ದೇಶ ಕಟ್ಟುವಲ್ಲಿ ತಮ್ಮದೇ ಆದ ಮಾದರಿ ರೂಪಿಸಿದವರು. ಪ್ರಧಾನಿಯಾದ ಬಳಿಕ ಕೋವಿಡ್‌ಗೆ ಉಚಿತ ಲಸಿಕೆ,ಆಯುಷ್ಮಾನ್ ಭಾರತ, ಜನಧನ್, ಫಸಲ್ ಭೀಮಾ, ನೇರ ನಗದು ವರ್ಗಾವಣೆ, ಸ್ವಚ್ಛ ಭಾರತ್ ಅಭಿಯಾನ, ಸ್ವಾವಲಂಬನೆಗೆ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಪಿಎಂ, ಕಿಸಾನ್ ಮೂಲಕ ಕೋಟ್ಯಂತರ ರೈತರಿಗೆ ನೆರವು, ತ್ರಿವಳಿ ತಲಾಖ್ ಮತ್ತು 370ನೇ ವಿಧಿ ರದ್ದತಿ ಮೂಲಕ ಅಲ್ಪ ಸಂಖ್ಯಾತರಲ್ಲಿ ಭರವಸೆ, 80 ಕೋಟಿ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ವಿತರಣೆ, ಭೇಟಿ ಬಚಾವೋ ಭೇಟಿ ಪಡಾವೋ, ಉಜ್ವಲ ಯೋಜನೆ ಮೂಲಕ ಮಹಿಳೆಯರಿಗೆ ಗೌರವ ಹೀಗೆ ದೇಶದ ಎಲ್ಲ ವರ್ಗದ ಜನರಿಗೂ ತಲುಪುವಂತಹ ಕಾರ್ಯಕ್ರಮ ರೂಪಿಸಿ, ಸಂಕಷ್ಟದ ಸಮಯದಲ್ಲಿ ಸೈನಿಕರ ಆತ್ಮಗೌರವ ಎತ್ತಿ ಹಿಡಿಯಲು ಸರ್ಜಿಕಲ್ ಸ್ಟೆಕ್, ಆಪರೇಷನ್ ಸಿಂಧೂರಕ್ಕೆ ಬಲ ತುಂಬಿ ದೇಶವನ್ನು ಸಜ್ಜುಗೊಳಿಸಿದ ನಾಯಕ ಎಂದು ಬಣ್ಣಿಸಿದರು. ವಿಶ್ರಾಂತಿ ಬಯಸದ ಮೋದಿಯವರಿಂದ ವಿದೇಶಗಳಲ್ಲಿ ಭಾರತ ಹಿರಿಮೆ ಹೆಚ್ಚಿದೆ, ವಿದೇಶಗಳ ಜತೆ ಅವರು ಬೆಸೆದ ಬಾಂಧವ್ಯ ದಿಂದ ವಿಶ್ವವೇ ಭಾರತವನ್ನು ಗೌರವ ಭಾವದಿಂದ ನೋಡುತ್ತಿದೆ. ಅವರ 75ನೇ ಜನ್ಮದಿನಾಚರಣೆ ಸಲುವಾಗಿ ತಾಲೂಕಿನಲ್ಲಿ ಸೆ.17 ರಿಂದ ಅ.2ರವರೆಗೆ ಸೇವಾ ಪಾಕ್ಷಿಕ ಆಚರಿಸುತ್ತಿದ್ದು ರಕ್ತದಾನ ಶಿಬಿರ, ಸಾಮರಸ್ಯ ಮತ್ತು ಐಕ್ಯತೆಗೆ ವಾಕಥಾನ್, ಸಸಿ ನೆಡುವುದು, ಶ್ರಮದಾನಕ್ಕೆ ಚಾಲನೆ ನೀಡಲಾಗಿದೆ. ರಕ್ತದಾನ ಶಿಬಿರದಲ್ಲಿ ಕನಿಷ್ಠ 75 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಇದೆ, ಇದೇ 25 ರಂದು ಜನಸಂಘದ ನಾಯಕ ಹಾಗೂ ಬಿಜೆಪಿ ಮುಂದಾಳು ಪಂ.ದೀನ್‌ದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಬೂತ್‌ಮಟ್ಟದಲ್ಲಿ ಅವರ ವಿಚಾರಧಾರೆ ಮಂಡನೆ, ಅವರ ದೇಶಪ್ರೇಮ ಹಾಗು ಚಿಂತನೆ ಬಗ್ಗೆ ವಿಚಾರ ಮಂಥನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಬಿಜೆಪಿ ಕಡೂರು ಮಂಡಲ ಅಧ್ಯಕ್ಷ ದೇವಾನಂದ್, ಸಿದ್ದಪ್ಪ, ಟಿ.ಆರ್.ಲಕ್ಕಪ್ಪ, ಡಾ.ಉಮೇಶ್‌ರಾವ್, ಟಿ.ಡಿ.ಸತ್ಯನ್, ವಕ್ತಾರ ಶಾಮಿಯಾನ ಚಂದ್ರು, ಮಾರ್ಗದ ಮಧು, ಕೆ.ವಿ.ಪೃಥ್ವಿ, ಮಲ್ಲಿ ಕಾರ್ಜುನ್. ಸಿ, ಕೆ.ಎನ್.ಬೊಮ್ಮಣ್ಣ, ಪುರಸಭೆ ಸದಸ್ಯರಾದ ಗೋವಿಂದರಾಜು, ವಿಜಯಾ ಚಿನ್ನರಾಜು, ಸುಬ್ಬಣ್ಣ, ಮೋಹನ್ ನಾಯ್ಕ, ಮುಖಂಡರಾದ ರಾಜಾನಾಯ್ಕ, ರೋಟರಿ ರಾಘವೇಂದ್ರ, ನಾಗೇಶ್, ಎಚ್.ಉಮೇಶ್, ರೋಟೇರಿಯನ್ ರಾಘವೇಂದ್ರ, ಹುಲ್ಲೇಹಳ್ಳಿ ಲಕ್ಷ್ಮ ಣ್, ಸುದರ್ಶನ್, ಗಿರೀಶ್ ಗುರುಕುಲ, ವೀಣಾ, ಕಾವೇರಿ ಲಕ್ಕಪ್ಪ ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು.18ಕೆಕೆಡಿಯು1. ಕಡೂರಿನ ಸಾಯಿಮಂದಿರ ಆವರಣದಲ್ಲಿ ಪ್ರಧಾನಿ ನರೇಂದ್ರಮೋದಿ 75ನೇ ಹುಟ್ಟುಹಬ್ಬದ ಅಂಗವಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶ್ರಮದಾನದ ಮೂಲಕ ಸೇವಾ ಪಾಕ್ಷಿಕಕ್ಕೆ ಚಾಲನೆ ನೀಡಿದರು.