ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕಳೆದ 10 ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಸಿಕ್ಕಿದೆ. 2014ರಲ್ಲಿ 723ರಷ್ಟಿದ್ದ ವಿಶ್ವವಿದ್ಯಾಲಯಗಳ ಸಂಖ್ಯೆ 1113ಕ್ಕೆ ಏರಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಐಐಟಿ, ಐಐಎಂ ಹಾಗೂ ತತ್ಸಮಾನ ಕಾಲೇಜುಗಳ ಸಂಖ್ಯೆ 2014ರಲ್ಲಿ 38,498ರಷ್ಟಿತ್ತು. 2023ರಲ್ಲಿ ಅವುಗಳ ಸಂಖ್ಯೆ 43,796ಕ್ಕೇರಿದೆ.
ಕುಕನೂರು: ಪ್ರಧಾನಿ ನರೇಂದ್ರ ಮೋದಿ ಹೆಸರು ಭಾರತೀಯರ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಹೇಳಿದರು.
ತಾಲೂಕಿನ ಚಂಡೂರು ಗ್ರಾಮದಲ್ಲಿ ಬಿಜೆಪಿ ಗ್ರಾಮ ಚಲೋ ಅಭಿಯಾನದಲ್ಲಿ ಶನಿವಾರ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಗೋಡೆ ಬರಹ ಹಾಗೂ ಮನೆ ಮನೆಗೆ ಕೇಂದ್ರ ಬಿಜೆಪಿ ಸರ್ಕಾರದ ಯೋಜನೆಗಳ ಕರ ವಿತರಣೆ ವೇಳೆ ಅವರು ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕಳೆದ 10 ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಸಿಕ್ಕಿದೆ. 2014ರಲ್ಲಿ 723ರಷ್ಟಿದ್ದ ವಿಶ್ವವಿದ್ಯಾಲಯಗಳ ಸಂಖ್ಯೆ 1113ಕ್ಕೆ ಏರಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಐಐಟಿ, ಐಐಎಂ ಹಾಗೂ ತತ್ಸಮಾನ ಕಾಲೇಜುಗಳ ಸಂಖ್ಯೆ 2014ರಲ್ಲಿ 38,498ರಷ್ಟಿತ್ತು. 2023ರಲ್ಲಿ ಅವುಗಳ ಸಂಖ್ಯೆ 43,796ಕ್ಕೇರಿದೆ. ಇವುಗಳಲ್ಲಿ ಶೇ.43 ಗ್ರಾಮೀಣ ಪ್ರದೇಶಗಳಲ್ಲಿವೆ. ದೇಶದಲ್ಲಿ 63.73 ಲಕ್ಷ ಕಿ.ಮೀ.ನಷ್ಟು ರಸ್ತೆ ನಿರ್ಮಾಣ ಮಾಡಲಾಗಿದೆ. ಅತಿ ದೊಡ್ಡ ರಸ್ತೆಸಾರಿಗೆ ಹೊಂದಿರುವ ರಾಷ್ಟ್ರಗಳಲ್ಲಿ ಭಾರತಕ್ಕೀಗ 2ನೇ ಸ್ಥಾನ ಲಭ್ಯವಾಗಿದೆ. ಆಯುಷ್ಮಾನ್ ಭಾರತ ಯೋಜನೆ ಮೂಲಕ ತುರ್ತು ಔಷಧಿಗಳು ಅಥವಾ ಅತ್ಯವಶ್ಯಕ ಔಷಧಿಗಳು ಜನರ ಕೈಗೆಟುಕುವ ಬೆಲೆಯಲ್ಲಿ ಸಿಗುವಂತೆ ಮಾಡಲು ದೇಶಾದ್ಯಂತ ಜನೌಷಧಿ ಕೇಂದ್ರಗಳನ್ನು ತರೆಯಲಾಗಿದೆ. ಅಲ್ಲಿ ಸಿಗುವಂಥ ಔಷಧಿಗಳ ಬೆಲೆಗೂ ಹೊರಗೆ ಸಿಗುವಂಥ ಅದೇ ಔಷಧೀಯ ಗುಣಗಳಿರುವ ಮಾತ್ರೆ, ಟಾನಿಕ್ ಬೆಲೆಗೂ ಶೇ.30ರಿಂದ 40ರಷ್ಟು ಕಡಿಮೆ ಇರಲಿದೆ ಎಂದರು.ಕೊರೋನ ಕಾಲಘಟ್ಟದಲ್ಲಿ ದೇಶದ ಕೋಟ್ಯಂತರ ಜನತೆಗೆ ಉಚಿತವಾಗಿ ಎರಡು ಬಾರಿ ಲಸಿಕೆ ಹಾಕಿಸಿದ ಹೆಗ್ಗಳಿಕೆಗೆ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಡಿಜಿಟಲ್ ಮಾದರಿಯ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಕೇಂದ್ರದ ದೂರದೃಷ್ಟಿತ್ವಕ್ಕೆ ಮತ್ತೊಂದು ಸಾಕ್ಷಿ. ಹಣ್ಣು, ಸೊಪ್ಪು, ತರಕಾರಿ ಖರೀದಿಸುವುದರಿಂದ ಹಿಡಿದು ಕಾರು ಮುಂತಾದ ಐಶಾರಾಮಿ ವಸ್ತುಗಳನ್ನು ಖರೀದಿಸುವ ವ್ಯವಹಾರಗಳವರೆಗೆ ಡಿಜಿಟಲ್ ಪೇಮೆಂಟ್ ಮಾಡುವ ಸೌಲಭ್ಯವನ್ನು ಜಾರಿಗೆ ತಂದಿದ್ದು ಜನರಿಗೆ ಹೆಚ್ಚು ಉಪಯೋಗವಾಗಿದೆ ಎಂದರು.ಶುಕ್ರವಾರ ರಾತ್ರಿ ಗ್ರಾಮ ಚಲೋ ಅಭಿಯಾನ ಪ್ರಯುಕ್ತ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಜೋಪಡಿಯ ಮನೆಯಲ್ಲಿ ಮಲಗಿದ್ದರು. ಶನಿವಾರ ಬೆಳಗ್ಗೆ ಗ್ರಾಮದ ಆಂಜನೇಯ ದೇವರಿಗೆ ಅಭಿಷೇಕ ಪೂಜೆ ಸಲ್ಲಿಸಿದರು. ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.