ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: 400 ಶ್ರಮಿಕರಿಗೆ ಉಡುಗೊರೆ

KannadaprabhaNewsNetwork |  
Published : Sep 18, 2025, 01:10 AM IST
17ಕೆಎಂಎನ್‌ಡಿ-9ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನದ ಪ್ರಯುಕ್ತ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಿಜೆಪಿ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ 400 ಕ್ಕೂ ಹೆಚ್ಚು ಮಂದಿ ಶ್ರಮಿಕರಿಗೆ ಉಡುಗೊರೆ ನೀಡಿ ಗೌರವ ಸಲ್ಲಿಸಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತು ಈ ದಿನವನ್ನು ಅತ್ಯಂತ ಪ್ರೀತಿಯಿಂದ, ಗೌರವದಿಂದ ಸ್ಮರಿಸುತ್ತಿದೆ. ಮೋದಿ ಅವರು ಆಧುನಿಕ ಭಾರತದ ರಾಜಕೀಯ ಪರಂಪರೆಗೆ ಹೊಸದೊಂದು ದಿಕ್ಕನ್ನು ಕೊಟ್ಟ ಕೀರ್ತಿ ಅವರಿಗೆ ಸಲ್ಲಲಿದೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನದ ಪ್ರಯುಕ್ತ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ 400ಕ್ಕೂ ಹೆಚ್ಚು ಮಂದಿ ಶ್ರಮಿಕರಿಗೆ ಉಡುಗೊರೆ ನೀಡಿ ಗೌರವ ಸಲ್ಲಿಸಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಎನ್.ಶಂಕರೇಗೌಡ ಹಾಗೂ ಬಿಜೆಪಿಯಿಂದ ಪಟ್ಟಣ ವ್ಯಾಪ್ತಿಯ ಆಟೋ ಚಾಲಕರು, ಪೌರಕಾರ್ಮಿಕರು, ನೀರುಗಂಟಿಗಳು ಸೇರಿದಂತೆ ಇತರೆ 400ಕ್ಕೂ ಹೆಚ್ಚು ಮಂದಿ ಶ್ರಮಿಕರನ್ನು ಸನ್ಮಾನಿಸಿ ಗೌರವಿಸಿದರು.

ನಂತರ ಸಚ್ಚಿದಾನಂದ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತು ಈ ದಿನವನ್ನು ಅತ್ಯಂತ ಪ್ರೀತಿಯಿಂದ, ಗೌರವದಿಂದ ಸ್ಮರಿಸುತ್ತಿದೆ. ಮೋದಿ ಅವರು ಆಧುನಿಕ ಭಾರತದ ರಾಜಕೀಯ ಪರಂಪರೆಗೆ ಹೊಸದೊಂದು ದಿಕ್ಕನ್ನು ಕೊಟ್ಟ ಕೀರ್ತಿ ಅವರಿಗೆ ಸಲ್ಲಲಿದೆ. ಜೊತೆಗೆ ದೇಶದ ವಿದೇಶಾಂಗ ನೀತಿಯ ಬದಲಾವಣೆ ಮೂಲಕ ಜಗತ್ತಿನ ಆರ್ಥಿಕ ಮಾಪನದಲ್ಲಿ ಭಾರತವನ್ನ ನಾಲ್ಕನೇ ಸ್ಥಾನಕ್ಕೇರಿಸುವ ವಿಶೇಷ ಪ್ರಯತ್ನ ಮಾಡಿದ್ದಾರೆ.

ಅಲ್ಲದೇ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಮುಂಬೈನ ಮನೆ ಸೇರಿದಂತೆ ಅವರ ದೀಕ್ಷಾ ಭೂಮಿ ಸೇರಿ ಒಟ್ಟು ಐದು ಸ್ಥಳಗಳನ್ನು ರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾಡುವ ಮೂಲಕ ಅವರಿಗೆ ಶಾಶ್ವತವಾಗಿ ಗೌರವ ಸಲ್ಲುವಂತೆ ಕ್ರಮವಹಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಘಟಕ ಸೂಚನೆ ಮೇರೆಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿರುವ ಪ್ರೀತಿ, ಗೌರವದಿಂದ ಇಂದು ಅವರ ಜನ್ಮದಿನವನ್ನು ಜನಗಳ ಮಧ್ಯೆ ನಿಂತು ಸೇವಾ ಮನೋಭಾವದಿಂದ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಶ್ರೀರಂಗಟಪ್ಟಣ ವಿಧಾನ ಸಭಾಕ್ಷೇತ್ರದಾದ್ಯಂತ ಹಾಗೂ ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ರಕ್ತದಾನ ಶಿಬಿರ, ನಿವೃತ್ತ ಯೋಧರು, ವೈದ್ಯರು, ವಕೀಲರು, ತಾಲೂಕಿನಾದ್ಯಂತ 75ಕ್ಕೂ ಹೆಚ್ಚು ಕುಸ್ತಿ ಪಟುಗಳು, ಪ್ರತಿಭಾ ಪುರಸ್ಕಾರ, 2025-26ನೇ ಸಾಲಿನಲ್ಲಿ ಉಚಿತವಾಗಿ ವೈದ್ಯಕೀಯ ಸೀಟಿ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ತಮ್ಮ ತಮ್ಮ ಗ್ರಾಮಗಳಲ್ಲಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿರುವ ಪ್ರಗತಿ ಪರ ರೈತರು, ವೈದ್ಯರು, ಉತ್ತಮ ಶಿಕ್ಷಕರು, ಸೂಲಗಿತ್ತಿಯರು, ಜಾನಪದ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕಲಾವಿದರು, ಕಬ್ಬು ಹಾಗೂ ಭತ್ತ ನಾಟಿ ಮಾಡಿಸುವ ಮೇಸ್ತ್ರಿಗಳನ್ನು ಗುರುತಿಸಿ, ಅವರಿಗೆ ಗೌರವ ಸಲಿಸುವ ಮೂಲಕ ಅವರ ಕಾಯಕಕ್ಕೆ ಗೌರವ ಕೊಡುವ ಕೆಲಸಗಳನ್ನ ನಾವು ನೀವೆಲ್ಲ ಸೇರಿ ಮಾಡೋಣ ಎಂದರು.

ಈ ವೇಳೆ ಪಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಮಹಿಳಾ ಅಧ್ಯಕ್ಷೆ ಮಾನಸ, ನಗರಘಟಕ ಅಧ್ಯಕ್ಷ ಸುಧಾಕರ್, ಪುರಸಭಾ ಸದಸ್ಯರಾದ ಎಸ್.ಪ್ರಕಾಶ್‌, ಎಸ್.ಟಿ ರಾಜು, ಗಂಜಾಂ ಶಿವು, ಶ್ರೀನಿವಾಸ್, ಮಾಜಿ ಸದಸ್ಯ ಪುಟ್ಟರಾಮು, ಮುಖಂಡರಾದ ಉಮೇಶ್‌ಕುಮಾರ್, ಶಾಮಿಯಾನ ಪುಟ್ಟರಾಜು, ರಾಜೇಶ್, ಕುಮಾರ್, ಹೇಮಂತ, ಪ್ರಭಾಕರ್ ಗುಪ್ತ, ಛಾಯಾದೇವಿ, ವಕೀಲ ಜಯಕುಮಾರ್ ಸೇರಿದಂತೆ ಇತರರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ