ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಪ್ರಧಾನಿ ಕೆಲಸ

KannadaprabhaNewsNetwork |  
Published : Jul 28, 2025, 12:30 AM IST
ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿಯ ವಿಷಯದಲ್ಲಿ ಮುಂದಿನ ಪೀಳಿಗೆಗೂ ಕೊಡುಗೆಯಾಗುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿಯ ವಿಷಯದಲ್ಲಿ ಮುಂದಿನ ಪೀಳಿಗೆಗೂ ಕೊಡುಗೆಯಾಗುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಹೇಳಿದರು.

ತಾಲೂಕಿನ ಶೆಟ್ಟೀಕೆರೆ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸಾಸಲು ಗ್ರಾಮದ ಶ್ರೀ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ಬಳಿಕ ಗೌರವ ಸಮರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನಿಯವರು ನೀಡುತ್ತಿರುವ ಕೊಡುಗೆಯಲ್ಲಿ ಹೆಸರಹಳ್ಳಿ ,ಶೆಟ್ಟೀಕೆರೆ ಸಾಸಲು ಗ್ರಾಮಗಳು ಸೇರಿವೆ. ಕೇಂದ್ರ ಸಚಿವರೊಂದಿಗೆ ಸಮಾಲೋಚನೆಯನ್ನು ಐದು ವರ್ಷದ ಅವಧಿಯಲ್ಲಿ ಐವತ್ತು ತಿಂಗಳು ಅಭಿವೃದ್ಧಿಗೆ ಒತ್ತು ನೀಡಿ ಒಂದು ತಿಂಗಳು ಮಾತ್ರ ಚುನಾವಣೆಗೆ ಕೆಲಸಮಾಡಬೇಕೆಂದು ತಿಳಿಸಿದ್ದಾರೆ.

ನಾನು ರಾಜ್ಯದಲ್ಲಿ ಎರಡು ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸೋಲು ಕಂಡಿದ್ದ ನನ್ನನ್ನು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರು. ನಾನು ಗೆದ್ದಾದ ಮೇಲೆ ನನಗೆ ಗೊತ್ತಿಲ್ಲದೆ . ಕೇಂದ್ರ ಸಚಿವ ಸ್ಥಾನವನ್ನು ಸಹ ನೀಡಲಾಯಿತು. ಮುಂದಿನ ಚುನಾವಣೆಗೆ ಮತದಾರರರು ನನ್ನನ್ನು ಗುರುತಿಸುವಂತೆ ಕೆಲಸ ಮಾಡಿ ತೋರಿಸುತ್ತೇನೆ ಎಂದರು.

ಗೋಡೇಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಸಾಸಲು ಗ್ರಾಮಕ್ಕಿಂತ ಸಾಸಲು ಹಟ್ಟಿಯಲ್ಲಿ ಹೆಣ್ಣು ಮಕ್ಕಳುಶಿಕ್ಷಣದಲ್ಲಿ ಮುಂದುವರೆದಿದ್ದಾರೆ. ಹಟ್ಟಿಯಲ್ಲಿ ಗುಡಿಸಲಿದ್ದರೂ ಬೆಂಗಳೂರಿನಲ್ಲಿ ಭವ್ಯ ಬಂಗಲೆ ಕಟ್ಟಿಸಿಕೊಂಡುಮಾದರಿಯಾಗಿದ್ದಾರೆ. ಆದಿ ದೇವತೆ ಬನಶಂಕರಮ್ಮನ ಜಾತ್ರೆ , ಉತ್ಸವ, ಧಾರ್ಮಿಕ ಕಾರ್ಯಗಳನ್ನು ಗ್ರಾಮಸ್ಥರು ಸಂಘಟಿತರಾಗಿ ನಡೆಸಿಕೊಂಡು ಹೋಗಬೇಕೆಂದು ನುಡಿದರು. ಮಾದಿಹಳ್ಳಿ ಮಠದ ಶ್ರೀಶೈಲ ಶಾಖಾಮಠ ಗಿರಿರಾಜ ಹಿರೇಮಠದ ಶ್ರೀ ಚನ್ನ ಮಲ್ಲಿಕಾರ್ಜುನಶಿವಾಚಾರ್ಯಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ದೇವರಲ್ಲಿ ಭಕ್ತಿ ಶ್ರದ್ಧೆ ಇಟ್ಟುಕೊಂಡು ಸಂಸ್ಕಾರವನ್ನು ಬೆಳಸಿಕೊಳ್ಳಬೇಕೆಂದರು.

ವಾಣಿಜ್ಯ ಇಲಾಖೆ ಅಪರ ನಿರ್ದೇಶಕಿ ಸೌಮ್ಯ ಸುಧಾಕರ್ ಮಾತನಾಡಿದರು. ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ. ತಹಸೀಲ್ದಾರ್ ಕೆ.ಪುರಂದರ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್. ಶಶಿಧರ್. ಕುಪ್ಪೂರು ಗದ್ದಿಗೆ ಮಠದ ಆಡಳಿತಾಧಿಕಾರಿ ವಾಗೀಶ್, ಶಮಂತಾ ಅಜೇಯ , ಎಸ್ ಆರ್. ಮರುಳಸಿದ್ಧೇಶ್ವರಸ್ವಾಮಿ, ಮರುಳಸಿದ್ದಪ್ಪ, ದೇವೇಂದ್ರಪ್ಪ, ನಿರಂಜನ್, ಶಿವಾನಂದಯ್ಯ, ಪ್ರಕಾಶ್, ಹೇಮಲತಾ, ರಂಗಸ್ವಾಮಿ, ವಿಜಯಮಣಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''