ಮುದ್ರಣ ಮಾಧ್ಯಮ ಸಮಾಜದ ಜೀವನಾಡಿ: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ

KannadaprabhaNewsNetwork |  
Published : Aug 08, 2026, 02:30 AM IST
ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸತ್ಕರಿಸಿದರು. | Kannada Prabha

ಸಾರಾಂಶ

ಯುದ್ಧ ಅಥವಾ ನೈಸರ್ಗಿಕ ವಿಕೋಪಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ತಂತ್ರಜ್ಞಾನ ಅಥವಾ ನೆಟ್‌ವರ್ಕ್ ಸ್ಥಗಿತಗೊಂಡರೂ ಇತಿಹಾಸವನ್ನು ದಾಖಲಿಸಿ ಸಮಾಜಕ್ಕೆ ನೈಜ ಮತ್ತು ಸತ್ಯವಾದ ಮಾಹಿತಿಯನ್ನು ನೀಡುವ ಶಕ್ತಿ ಪ್ರಿಂಟ್ ಮೀಡಿಯಾಕ್ಕಿದೆ.

ಮುಂಡರಗಿ: ಇಂದಿನ ಆಧುನಿಕ ಯುಗದಲ್ಲಿ ಟಿವಿ ಹಾಗೂ ಸೋಶಿಯಲ್ ಮೀಡಿಯಾಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಮುದ್ರಣ ಮಾಧ್ಯಮ ಸಮಾಜದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.ಸ್ಥಳೀಯ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಶಿವಶರಣೆ ಅಕ್ಕಮಹಾದೇವಿ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಯುದ್ಧ ಅಥವಾ ನೈಸರ್ಗಿಕ ವಿಕೋಪಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ತಂತ್ರಜ್ಞಾನ ಅಥವಾ ನೆಟ್‌ವರ್ಕ್ ಸ್ಥಗಿತಗೊಂಡರೂ ಇತಿಹಾಸವನ್ನು ದಾಖಲಿಸಿ ಸಮಾಜಕ್ಕೆ ನೈಜ ಮತ್ತು ಸತ್ಯವಾದ ಮಾಹಿತಿಯನ್ನು ನೀಡುವ ಶಕ್ತಿ ಪ್ರಿಂಟ್ ಮೀಡಿಯಾಕ್ಕಿದೆ ಎಂದರು.ಬಿಜೆಪಿ ಮುಖಂಡ ಐ.ಎಸ್. ಪೂಜಾರ ಮಾತನಾಡಿ, ಇಂದಿನ ತಂತ್ರಜ್ಞಾನದ ವ್ಯಾಮೋಹದಿಂದ ಹೊರಬಂದು ಮನುಷ್ಯನ ಮನಸ್ಸನ್ನು ಪರಿವರ್ತನೆ ಮಾಡಲು ಹಾಗೂ ಪ್ರತಿಯೊಬ್ಬರೂ ಒಳ್ಳೆಯವರಾಗಿ ಬದುಕಲು ಇಂತಹ ಧಾರ್ಮಿಕ ಪ್ರವಚನಗಳು ಅತ್ಯಗತ್ಯ ಎಂದರು.ಕಾರ್ಯಕ್ರಮದಲ್ಲಿ ಡಾ. ಮಹಾಂತ ಸ್ವಾಮೀಜಿ‌ ಅವರು ಬೇಲೂರಿನ ಮಠಕ್ಕೆ ಪೀಠಾಧಿಪತಿಯಾದ ಹಿನ್ನೆಲೆ ಶ್ರೀಮಠದಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ‌ ಮಾತನಾಡಿದ‌ ಅವರು ಸಮಾಜದ ಅನ್ಯಾಯ, ಕುಂದುಕೊರತೆಗಳು ಹಾಗೂ ಜವಾಬ್ದಾರಿಗಳನ್ನು ಎತ್ತಿ ತೋರಿಸುವಲ್ಲಿ ಪತ್ರಿಕೋದ್ಯಮದ ಪಾತ್ರ ಹಿರಿದಾದುದು ಎಂದರು.ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸಿ.ಕೆ. ಗಣಪ್ಪನವರ, ಶರಣು ಸೊಲಗಿ, ಕವಿ ಬಂಕಾಪೂರ, ಸಂತೋಷ ಮುರುಡಿ, ಶಿವಮೂರ್ತಿ ಹೊಂಬಳಗಟ್ಟಿ, ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಎಲ್ಲ ತಾಲೂಕು ಕಾರ್ಯನಿರತ ಪತ್ರಕರ್ತರಿಗೆ ಹಾಗೂ ಪತ್ರಕರ್ತ ಶಿವಾನಂದ ಮೀಟಿಯಾಲ ಅವರಿಗೆ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಯವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ‌ ಪ್ರವಚನಕಾರ ಶರಣಬಸವ ದೇವರು, ಬಸವಾನಂದ ಸ್ವಾಮೀಜಿ, ಬಸಯ್ಯ ಗಿಂಡಿಮಠ, ಶರಣಪ್ಪ ಕುಬಸದ, ಎಸ್.ಎಸ್. ಗಡ್ಡದ, ಸುರೇಶ ಬಣಗಾರ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ನಿರೂಪಿಸಿ, ವಂದಿಸಿದರು. ನಂತರ ಗದುಗಿನ ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ ಇವರಿಂದ ಅಕ್ಕಮಹಾದೇವಿ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3 ವರ್ಷದಿಂದ ಶುದ್ಧ ಕುಡಿವ ನೀರಿನ ಘಟಕ ಬಂದ್
ಜೀವಭಯದಲ್ಲೇ ಬಸ್‌ನಲ್ಲಿ ವಿದ್ಯಾರ್ಥಿಗಳ ಪ್ರಯಾಣ