ಗಣೇಶೋತ್ಸವದಲ್ಲಿ ಸಾಮರಸ್ಯಕ್ಕೆ ಆದ್ಯತೆ ನೀಡಿ: ವೀರೇಶ್‌

KannadaprabhaNewsNetwork |  
Published : Aug 01, 2025, 11:45 PM IST
ಗಣೇಶ ಉತ್ಸವದ ಕರಪತ್ರ ಬಿಡುಗಡೆ | Kannada Prabha

ಸಾರಾಂಶ

ಗಣೇಶೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಸೌಹಾರ್ದ, ಸಾಮರಸ್ಯದಿಂದ ಹಬ್ಬ ನಡೆಯಬೇಕು ಎಂದು ಭಾಜಪಾ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಹೇಳಿದ್ದಾರೆ.

- ಮಲೇಬೆನ್ನೂರು ನೀರಾವರಿ ಇಲಾಖೆ ಆವರಣದಲ್ಲಿ ಹಂದರಗಂಬ- ಗೋ ಪೂಜೆ ಸಮಾರಂಭ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಗಣೇಶೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಸೌಹಾರ್ದ, ಸಾಮರಸ್ಯದಿಂದ ಹಬ್ಬ ನಡೆಯಬೇಕು ಎಂದು ಭಾಜಪಾ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಹೇಳಿದರು.

ಮಲೇಬೆನ್ನೂರಿನ ನೀರಾವರಿ ಇಲಾಖೆ ಆವರಣದಲ್ಲಿ ೪ನೇ ವರ್ಷದ ಹಿಂದೂ ಮಹಾಗಣಪತಿ ಸಮಿತಿಯಿಂದ ಗಣೇಶ ಪ್ರತಿಷ್ಠಾಪನೆಯ ಹಂದರಗಂಬ ಹಾಗೂ ಗೋಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹರಿಹರಕ್ಕಿಂತ ಮಲೇಬೆನ್ನೂರು ಅತಿ ಸೂಕ್ಷ್ಮ ಪ್ರದೇಶ ಎಂದು ಪೊಲೀಸರ ದಾಖಲೆಗಳು ಹೇಳುತ್ತವೆ. ಇದನ್ನು ಸುಳ್ಳು ಮಾಡುವಂತೆ ಜನತೆ ನಡೆದುಕೊಳ್ಳಬೇಕಿದೆ. ಕಾನೂನುಬಾಹಿರ ಚಟುವಟಿಕೆ ನಡೆಸದೇ ತಮಗೇ ತಾವೇ ಕೆಲವು ನಿರ್ಬಂಧ ಹಾಕಿಕೊಂಡು ಕರ್ತವ್ಯ ನಿರ್ವಹಿಸಬೇಕು ಭಕ್ತ ಜನರಿಗೆ ಮನವಿ ಮಾಡಿದರು.

ಪುರಸಭೆಯ ಮುಸಲ್ಮಾನ ಸದಸ್ಯರು ಸಹ ಗಣೇಶ ಪೂಜೆಯಲ್ಲಿ ಭಾಗಿ ಆಗಿರುವುದು ಹೆಮ್ಮ್ಮೆಯ ಸಂಗತಿಯಾಗಿದೆ. ಆಜಾದ್ ನಗರದಲ್ಲಿ ಪೊಲೀಸ್ ಬಂದೋಬಸ್ತ್‌ ಇಲ್ಲದೇ, ಸಾಮರಸ್ಯದಿಂದ ಗಣೇಶನ ಉತ್ಸವ ಮಾಡೋಣ ಎಂದರು.

ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಹಿಂದೂಗಳ ಸಂಘಟನೆ ಸಾಮೂಹಿಕ ಜಾಗೃತಿಯಾಗಿದೆ. ಹಿಂದೂ ಧರ್ಮ ಅಳಿಸಲು ಹೊರಟವರು ನಾಶವಾಗುವರು ಎಂಬುದನ್ನು ಮಹಾಕುಂಭ ಮೇಳ ಮತ್ತು ಆಪರೇಶನ್ ಸಿಂದೂರ ಘಟನೆಗಳು ಸಾಬೀತು ಮಾಡಿವೆ. ಗಣೇಶೋತ್ಸವ ಮೂಲಕ ಶೀಘ್ರವೇ ಭಾರತದ ಉದ್ದಗಲಕ್ಕೂ ಹಿಂದೂಗಳ ಧರ್ಮ ಜಾಗೃತಿ ಗಂಟೆ ಬಾರಿಸಲಿದೆ ಎಂದು ಅಭಿಪ್ರಾಯಪಟ್ಟರು.

ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ್‌ ಸ್ವಾಮಿ ಮಾತನಾಡಿ, ಇಲ್ಲಿನ ಹಬ್ಬಗಳು, ಚುನಾವಣೆಗಳು, ವಿಶೇಷವಾಗಿ ನಡೆಯುತ್ತಲಿವೆ. ಗಣಪತಿ ಹಬ್ಬಕ್ಕೆ ಮುಸ್ಲಿಂ ಯುವಕ ಇನಾಯತ್ ₹೫೦,೦೦೦ ನೀಡಿ ಸಾಮರಸ್ಯ ಮೆರೆದಿದ್ದಾರೆ. ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಹಾಗೂ ಸುತ್ತಲ ೫೦ಕ್ಕೂ ಹೆಚ್ಚು ಗ್ರಾಮಗಳ ಲಕ್ಷಾಂತರ ಅಭಿಮಾನಿಗಳು ಉತ್ಸವದಲ್ಲಿ ಭಾಗವಹಿಸಿ ಮಾನವತೆಯ ಸಂಬಂಧಗಳನ್ನು ಗಟ್ಟಿಮಾಡಿ, ಗಣೇಶನ ಹಬ್ಬ, ಮೂರ್ತಿ ವಿಸರ್ಜನೆ ಆಚರಿಸಬೇಕಿದೆ ಎಂದರು.

ಮುಖಂಡರಾದ ಚಂದ್ರಶೇಖರ್ ಪೂಜಾರ್, ಕೆ.ಜಿ. ಲೋಕೇಶ್, ನಯಾಜ್, ಸೈಯದ್ ಜಾಕೀರ್, ಯೂಸೂಫ್‌ ಖಾನ್, ಷಾ ಅಬ್ರಾರ್, ಸಿರಿಗೆರೆ ರಾಜಣ್ನ, ಸಾಬಿರ್‌ಅಲಿ, ಪರಮೇಶ್ವರಪ್ಪ, ಅಣ್ಣಪ್ಪ, ಸಮಿತಿ ಅಧ್ಯಕ್ಷ ವೈ ಅಶೋಕ್, ಪಿ ರಾಜು, ಮಂಝುನಾಥ್, ಬಂಡೇರ ತಿಮ್ಮಣ್ಣ, ಹರಳಹಳ್ಳಿ ಶ್ರೀನಿವಾಸ್, ಸುನೀಲ್, ದೊರೈ, ಹೊಸಳ್ಳಿ ಕರಿಬಸಪ್ಪ, ಮೇದಾರ್ ರವಿ, ಶಿವನಗೌಡ, ಸುಬ್ಬಿ ರಾಜು, ಮಧು, ಚಂದ್ರಪ್ಪ, ಕರಿಯಪ್ಪ, ಕಿರಣ್, ಕೇಶವ ನೂರಾರು ಅಭಿಮಾನಿಗಳು ಇದ್ದರು.

- - -

(ಕೋಟ್‌) ಹಂದರಗಂಬ ಮತ್ತು ಗೋಪೂಜೆಯಲ್ಲಿ ಮುಸ್ಲಿಂ ಬಾಂಧವರು ಕೈಗೆ ಕಂಕಣ ಧರಿಸಿ ಭಾಗವಹಿಸಿರುವುದು ಜಾತಿ, ಧರ್ಮದ ಆಚೆ ಭಾವೈಕ್ಯೆತೆಯನ್ನು ಬೆಳೆಸಲು ಸಹಕಾರಿಯಾಗಲಿದೆ. ಹಿಂದೂಗಳ ಹುಮ್ಮಸ್ಸು ದುಪ್ಪಟ್ಟಾಗಲಿದೆ.

- ಬಿ.ಚಿದಾನಂದಪ್ಪ, ಜಿಲ್ಲಾಧ್ಯಕ್ಷ, ಜೆಡಿಎಸ್‌

- - -

-ಚಿತ್ರ-೧: ಕಾರ್ಯಕ್ರಮದಲ್ಲಿ ಗಣೇಶ ಉತ್ಸವದ ಕರಪತ್ರ ಬಿಡುಗಡೆಗೊಳಿಸಲಾಯಿತು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ