ಕನ್ನಡಪ್ರಭ ವಾರ್ತೆ ತುಮಕೂರು80ರ ದಶಕದಿಂದಲೂ ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ಅಂದು ಪ್ರಕಟವಾಗುತ್ತಿದ್ದ ವರದಿಗಳು ಸರ್ಕಾರವನ್ನೇ ಉರುಳಿಸುವ ಮಟ್ಟಿಗೆ ಪ್ರಖರ, ಗಂಭೀರತೆಯಿಂದ ಕೂಡಿರುತ್ತಿದ್ದವು. ಪ್ರಸ್ತುತ ಈ ಗುಣಮಟ್ಟ ಕಡಿಮೆಯಾಗುತ್ತಿರುವುದು ಕಂಡುಬಂದಿದೆ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅಭಿಪ್ರಾಯಟ್ಟರು.ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಪತ್ರಿಕಾಭವನದಲ್ಲಿ ಏರ್ಪಡಿಸಿದ್ಧ ಜಿಲ್ಲೆಯ ಸುದ್ದಿ ಮನೆಯಲ್ಲಿ ಪತ್ರಕರ್ತರಾಗಿ ನಿವೃತ್ತರಾದ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಪತ್ರಿಕೆ, ಮಾಧ್ಯಮಗಳಲ್ಲಿ ಹಿಂದಿನ ಘನತೆ ಶಿಸ್ತು ಮೂಡಬೇಕಿದ್ದು, ಜನಪರವಾದ ವರದಿಗಳು ಹೆಚ್ಚಾಗಬೇಕಿದೆ. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಗಳ ಈ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮಕ್ಕೆ ಎಷ್ಟು ವರ್ಷ ಅಸ್ಮಿತೆಯೆಂಬ ಜಿಜ್ಞಾಸೆಯೂ ನಡೆಯುತ್ತಿದೆ. ಪತ್ರಕರ್ತರಷ್ಟೇ ವಿತರಕರು ಪತ್ರಿಕೆಗೆ ಜೀವಾಳವಾಗಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಕಾವಲು ನಾಯಿಗಳೆಂದು ಕರೆಸಿಕೊಳ್ಳುವ ಪತ್ರಿಕೆಗಳು ವೃತ್ತಿ ಧರ್ಮದುನುಸಾರ ಕಾರ್ಯನಿರ್ವಹಿಸುವ ಅಗತ್ಯತೆ ಹೆಚ್ಚಿದ್ದು, ಸ್ವಯಂ ನಿಯಂತ್ರಣ ರೇಖೆಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಕೆ.ಬಿ.ಚಂದ್ರಮೌಳಿ ಮಾತನಾಡಿ, ಸಂವಿಧಾನದಲ್ಲಿ ಅಗತ್ಯ ಮಾರ್ಪಾಟು ಮಾಡಿ ಮಾಧ್ಯಮಕ್ಕೂ ನಿಯಂತ್ರಣ ನಿರ್ಬಂಧಗಳ ನಿಯಮ ರೂಪಿಸಬೇಕಿದೆ ಎಂದು ಆಶಿಸಿದರು.
ಕಾನಿಪಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿದರು. ನಿವೃತ್ತರಾದ ಹಿರಿಯ ಪತ್ರಕರ್ತರಾದ ಎಚ್ ಜಿ ವೆಂಕಟೇಶಮೂರ್ತಿ, ದಿವಂಗತ ಜಿ ಇಂದ್ರಕುಮಾರ್ ಪರವಾಗಿ ಪತ್ನಿ ಜಯಶ್ರೀ, ತಿಪಟೂರಿನ ಸೋಮಶೇಖರ್, ತುರುವೇಕೆರೆಯ ಕೇಶವಮೂರ್ತಿ ಭಟ್, ಸಂಘದ ಮಾಜಿ ಅಧ್ಯಕ್ಷ ಕೆ. ಬಿ. ಚಂದ್ರಮೌಳಿ, ಹಿರಿಯ ಛಾಯಾಗ್ರಾಹಕ ಟಿ ಎಸ್ ತ್ರಿಯಂಬಕ ಅವರನ್ನು ಸನ್ಮಾನಿಸಲಾಯಿತು.ಮಾಜಿ ಶಾಸಕ ತುಮಕೂರು ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ವರಿರುದ್ರಪ್ಪ, ಸಂಘದ ಉಪಾಧ್ಯಕ್ಷ ಎಲ್ ಚಿಕ್ಕಿರಪ್ಪ ಶಾ.ನಾ.ಪ್ರಸನ್ನಮೂರ್ತಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿದ್ದಲಿಂಗಸ್ವಾಮಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್, ರಾಷ್ಟ್ರೀಯ ಮಂಡಳಿ ಸದಸ್ಯ ಅನುಶಾಂತರಾಜ್, ಟಿ.ಎನ್.ಮಧುಕರ್, ತಾಲೂಕು ಅಧ್ಯಕ್ಷರಾದ ರಂಗನಾಥ್, ಚಂದ್ರಕಾಂತ್, ಜಿಲ್ಲಾ ಸಂಘದ ಕಾರ್ಯದರ್ಶಿ ಸತೀಶ್ ಹಾರೋಗೆರೆ, ನಿರ್ದೇಶರಾದ ಜಯಣ್ಣ, ಪರಮೇಶ್, ಚಿಕ್ಕಣ್ಣ, ಕೃಷ್ಣಮೂರ್ತಿ, ಮಲ್ಲಿಕಾರ್ಜುನಸ್ವಾಮಿ, ಮಂಜುನಾಥ್ ಹಾಲ್ಕುರಿಕೆ, ನಾಗೇಂದ್ರ, ಸುರೇಶ್ ವತ್ಸ, ಸುರೇಶ್‌ಕಾಗ್ಗೇರೆ, ರೇಣುಕಾಪ್ರಸಾದ್, ರವೀಂದ್ರ, ಮಧುಗಿರಿ ಮಹಾರಾಜ್ ಸೇರಿ ಜಿಲ್ಲೆಯ ಪತ್ರಕರ್ತರು, ಹಾಲಿ ಮಾಜಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಹರೀಶ್ ಆಚಾರ್ಯ ಸ್ವಾಗತಿಸಿದರು.