ಸತ್ಯ ಸಾಯಿ ಗ್ರಾಮದಲ್ಲಿ ಶಾರದಾ ನವರಾತ್ರಿ ಆಚರಣೆಯ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಶಾರದಾ ನವರಾತ್ರಿ ಆಚರಣೆಯ ಮೂರನೇ ದಿನವಾದ ಮಂಗಳವಾರದಂದು ಚಂದ್ರಘಂಟಾ ರೂಪದಲ್ಲಿ ದೇವಿಯನ್ನು ಆರಾಧಿಸಲಾಯಿತು. ಪವಮಾನ ಹೋಮ ಮತ್ತು ಆಶ್ಲೇಷ ಬಲಿಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಹೋಮದ ಪೂರ್ಣಾಹುತಿಯನ್ನು ನೆರವೇರಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಮೂಲಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಜಗತ್ತಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಜೊತೆಗೆ ಇಡೀ ಸಮಾಜ, ದೇಶ ನಿಲ್ಲಬೇಕಾಗಿದೆ ಎಂದು ಕರೆ ನೀಡಿದರು.ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳ ಪೈಕಿ ಕೆಲವನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಪಟ್ಟಿ ಸಿದ್ಧಪಡಿಸಿದ್ದಾರೆ. ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೂ ಸೇರಿದೆ. ಇಲ್ಲಿನ ಚಟುವಟಿಕೆಗಳನ್ನು ಅವರು ಸ್ವತಃ ಪರಿಶೀಲಿಸುತ್ತಿರುತ್ತಾರೆ. ಸದ್ಗುರುಗಳ ಸಂಸ್ಥೆಗಳು ಕಾರ್ಯನಿರ್ವಹಿಸುವ ಮೊದಲಿನ ಪರಿಸ್ಥಿತಿಯನ್ನು ಇಂದಿನ ಸ್ಥಿತಿಗೆ ಹೋಲಿಸಿದರೆ ವ್ಯತ್ಯಾಸ ನಿಚ್ಚಳವಾಗಿ ಗೋಚರಿಸುತ್ತದೆ. ನಮ್ಮ ಸದ್ಗುರುಗಳು ಅಧ್ಯಾತ್ಮವನ್ನು ಸೇವೆಯೊಂದಿಗೆ ಬೆಸೆದಿದ್ದಾರೆ. ಉಚಿತ ವೈದ್ಯಕೀಯ ಶಿಕ್ಷಣ ಕೊಡುವ ಕಾಲೇಜು ಮುದ್ದೇನಹಳ್ಳಿಯಲ್ಲಿ ಮಾತ್ರವೇ ಇದೆ. ಇಂಥ ಪ್ರಯೋಗ ಮಾಡುತ್ತಿರುವ ಜಗತ್ತಿನ ಏಕೈಕ ಗುರು ಇವರೊಬ್ಬರೇ ಎಂದು ಶ್ಲಾಘಿಸಿದರು.
ಜಗತ್ತಿನ ಯಾವುದೇ ಗಂಡಸು ಪ್ರಸವವೇದನೆ ಅನುಭವಿಸಲಾರ, ಮಗುವನ್ನು ಗರ್ಭದಲ್ಲಿ ಹೊತ್ತು ಸಾಕಲಾರ. ಈ ಮಹತ್ವದ ಜವಾಬ್ದಾರಿಯನ್ನು ಮಹಿಳೆಗೆ ನೀಡಿರುವ ದೇವರು ತನ್ನ ಸೃಷ್ಟಿಯಲ್ಲಿಯೇ ಅವಳಿಗೆ ಆದ್ಯತೆ ನೀಡಿದ್ದಾನೆ. ನಿಜವಾದ ಅರ್ಥದಲ್ಲಿ ಸಮಾಜವನ್ನು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ. ಸುಗಮ ಬದುಕಿಗೆ ಸಹಕರಿಸುವ ಎಲ್ಲವನ್ನೂ ದೇವರೆಂದೇ ಗುರುತಿಸಿ ಆರಾಧಿಸುವ ಸಂಸ್ಕೃತಿ ನಮ್ಮದು. ಹಾವುಗಳ ಪಾರಿಸರಿಕ ಮೌಲ್ಯ ಅರಿತಿದ್ದ ನಮ್ಮ ಹಿರಿಯರು ಆಶ್ಲೇಷ ಬಲಿ, ನಾಗರಕಲ್ಲಿನ ಸಂಪ್ರದಾಯಗಳ ಮೂಲಕ ಜನರಿಗೆ ಅವುಗಳ ಮಹತ್ವ ತಿಳಿಸಲು ತಮ್ಮದೇ ಮಾರ್ಗ ಕಂಡುಕೊಂಡಿದ್ದರು ಎಂದರು.
ಪುಟ್ಟ ಬಾಲಕಿಯರು ಭಂಡಾಸುರ ವಧೆ ನೃತ್ಯ ಪ್ರದರ್ಶನ ನೀಡಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ ಇತರರು ಇದ್ದರು.
ಬಾಕ್ಸ್-2
ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಉಪಕ್ರಮಗಳಿಂದ ಕರ್ನಾಟಕದ ರಾಗಿ ಬೆಳೆ ಪದ್ಧತಿಯಲ್ಲಿ ಆಗುತ್ತಿರುವ ಪರಿವರ್ತನೆಯನ್ನು ತಿಳಿದುಕೊಳ್ಳಲು ಜಪಾನ್‌ನ 15 ರೈತರ ನಿಯೋಗವು ''''''''ಅಗ್ ಬಯೊಟೆಕ್'''''''' ಕಂಪನಿಯ ತಾಕಾ ಮಸಾಸನನ್ ನೇತೃತ್ವದದಲ್ಲಿ ಮಂಗಳವಾರ ಸತ್ಯ ಸಾಯಿ ಗ್ರಾಮಕ್ಕೆ ಭೇಟಿ ನೀಡಿತು. ''''''''ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್'''''''' ಮೂಲಕ ದೇಶದ 1 ಕೋಟಿ ಮಕ್ಕಳಿಗೆ ಪ್ರತಿದಿನ ಮುಂಜಾನೆ ''''''''ಸಾಯಿ ಶ್ಯೂರ್'''''''' ಪೌಷ್ಟಿಕ ಆಹಾರ ನೀಡುತ್ತಿರುವ ವಿಚಾರ ತಿಳಿದ ನಿಯೋಗದ ಸದಸ್ಯರು ತಾವೂ ಹೇಗೆ ಈ ಕಾರ್ಯದಲ್ಲಿ ಕೈಜೋಡಿಸಬಹುದು ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡರು. ಸಿಕೆಬಿ-1 ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಶಾರದಾ ನವರಾತ್ರಿ ಆಚರಣೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೋಮಕ್ಕೆ ಪೂರ್ಣಾಹುತಿ ಅರ್ಪಿಸಿದರು