ಕನ್ನಡಪ್ರಭ ವಾರ್ತೆ ಚೇಳೂರುನಮ್ಮ ಕ್ಷೇತ್ರವು ಸಂಪೂರ್ಣ ಹಳ್ಳಿಗಳಿಂದ ಕೂಡಿದ್ದು ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ರಸ್ತೆ ಸುಧಾರಣೆ ಮೂಲ ಸೌಕರ್ಯ ಒದಗಿಸುವುದು ಅವಶ್ಯಕವಾಗಿರುವದರಿಂದ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಹೇಳಿದರು.ತಾಲೂಕಿನ ರಾಶ್ಚೇರುವು ಗ್ರಾಮದಲ್ಲಿ ೨೦ ಲಕ್ಷ ರು.ಗಳ ವೆಚ್ಚದ ಸಿಸಿ ರಸ್ತೆ, ತಿಮ್ಮಯ್ಯಗಾರಪಲ್ಲಿ ಗ್ರಾಮದ ರಸ್ತೆ ಹಾಗೂ ೫ ಕೋಟಿ ವೆಚ್ಚದ ಚಾಕವೇಲು ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಚೇಳೂರು ತಾಲೂಕು ಕೇಂದ್ರವಾದ ಬಳಿಕ ಈ ತಾಲೂಕಿನ ಬಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ತಾಲೂಕಿನ ಅನೇಕ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಹೊಸ ಹೊಸ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಳ್ಳೂರಿನಿಂದ ಚಾಕವೇಲು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಉಗ್ರಣಂಪಲ್ಲಿ ಗ್ರಾಮದವರೆಗೂ ರಸ್ತೆ ಕಾಮಗಾರಿ ಆಗಲಿದ್ದು ಮುಂದಿನ ದಿನಗಳಲ್ಲಿ ಚಾಕವೇಲು ಗ್ರಾಮದ ವರೆಗೂ ಬಾಕಿ ಇರುವ ರಸ್ತೆ ಕಾಮಗಾರಿ ನಡೆಯಲಿದೆ ಎಂದರು.ಚಾಕವೇಲು ರಸ್ತೆ ಅಗಲೀಕರಣ
ಚಾಕವೇಲು ಗ್ರಾಮದಲ್ಲಿ ರಸ್ತೆ ಅಗಲೀಕರಣ ಮಾಡಲು ಸರ್ಕಾರದ ಆದೇಶದ ಪ್ರಕಾರ ರಸ್ತೆಯ ಎರಡು ಬದಿಯಲ್ಲಿ ೪೨ ಅಡಿ ಬಿಡಬೇಕಾಗಿದೆ. ಇದರಿಂದ ರಸ್ತೆ ಬದಿಯಲ್ಲಿ ಇರುವ ಹಲವು ಮನೆ ಹಾಗೂ ಅಂಗಡಿಗಳನ್ನು ತೆರವುಗೊಳಿಸಬೇಕಿದೆ, ಈ ಕುರಿತು ರಸ್ತೆ ಅಗಲೀಕರಣ ಕಡಿಮೆ ಮಾಡಲು ವರ್ತಕರು ಮನವಿ ಮಾಡಿದ್ದು, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು.ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಂಪ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.