ವನ್ಯಜೀವಿಗಳು ಮತ್ತು ಪ್ರಾಣಿಸಂಕುಲದ ಬಗ್ಗೆ ಅರಿವು ಮೂಡಿಸಲು ಪರಿಸರ ಪ್ರವಾಸೋದ್ಯಮವು ಅತ್ಯವಶ್ಯವಾಗಿದೆ. ಇದನ್ನು ಉತ್ತೇಜಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಕಾರ್ಯ ನಿರ್ವಾಹಕ ಅಧಿಕಾರಿ ಟ್ಟಿವೆ ಎಂದು ತಿಳಿಸಿದರು.
ಶಿವಮೊಗ್ಗ: ವನ್ಯಜೀವಿಗಳು ಮತ್ತು ಪ್ರಾಣಿಸಂಕುಲದ ಬಗ್ಗೆ ಅರಿವು ಮೂಡಿಸಲು ಪರಿಸರ ಪ್ರವಾಸೋದ್ಯಮವು ಅತ್ಯವಶ್ಯವಾಗಿದೆ. ಇದನ್ನು ಉತ್ತೇಜಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಕಾರ್ಯ ನಿರ್ವಾಹಕ ಅಧಿಕಾರಿ ಟ್ಟಿವೆ ಎಂದು ತಿಳಿಸಿದರು.
ಕುಲಪತಿ ಪ್ರೊಫೆಸರ್ ಶರತ್ ಅನಂತಮೂರ್ತಿ ಮಾತನಾಡಿ, ಸಫಾರಿ ಇಂದು ಜನಪ್ರಿಯ ಚಟುವಟಿಕೆ ಆಗಿದೆ. ಸಫಾರಿ ಹೋದಾಗ ಪ್ರಾಣಿ ಪಕ್ಷಿಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ, ಕೆಲವೇ ಘಂಟೆಯಲ್ಲಿ ಎಲ್ಲವನ್ನೂ ನೋಡುವ ಹಂಬಲ ಜನರಿಗಿರುತ್ತದೆ. ಆದರೆ ಇದೊಂದು ಧ್ಯಾನ. ಮಾನವ-ಪ್ರಕೃತಿ-ಪ್ರಾಣಿ ಸಂಕುಲದ ನಂಟು-ಸೂಕ್ಷ್ಮತೆಗಳನ್ನು ಅರಿತು ನಂತರ ನೋಡಲು ತೆರಳಬೇಕು. ಸಾಕಷ್ಟು ತಾಳ್ಮೆ ಬೇಕು, ನಿರಂತರ ಅಲೋಚನೆಗೆ ಅಲ್ಲಿಂದ ಪ್ರಕ್ರಿಯೆ ಆರಂಭ ಆಗಬೇಕು. ಕೇವಲ ಮನರಂಜನೆ ಅಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಯಶ್ಪಾಲ್ ಕ್ಷೀರ ಸಾಗರ್, ಕಾರ್ಯಯೋಜನೆ ಅಧಿಕಾರಿಯಾದ ಸೋನಾಲ್ ವ್ರುಷ್ಟಿ, ಶಿವಮೊಗ್ಗ ವಲಯದ ಉಪ ಅರಣ್ಯಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್, ನಂದೀಶ್ ಎಲ್, ಆನಂದ್ ಕೆ.ಸಿ., ರಮೇಶ್ ಬಾಬು, ಕುಲಸಚಿವರಾದ ಮಂಜುನಾಥ್ ಎ.ಎಲ್., ಪರೀಕ್ಷಾಂಗ ಕುಲಸಚಿವ ಪ್ರೊ.ಗೋಪಿನಾಥ್ ಎಸ್.ಎಂ., ವನ್ಯಜೀವಿ ವಿಭಾಗದ ಅಧ್ಯಕ್ಷ ಪ್ರೊ.ವಿಜಯ್ ಕುಮಾರ್ ಉಪಸ್ಥಿತರಿದ್ದರು.
ಕಪ್ಪು ತಲೆಯ ಹೊನ್ನಕ್ಕಿ ರಾಯಭಾರಿ
ಕರ್ನಾಟಕದ ಪಕ್ಷಿ ಪ್ರಭೇದಗಳನ್ನು ನೆನೆಯಲು, ಸಂರಕ್ಷಿಸಲು 2015ರಿಂದ ಪ್ರತಿವರ್ಷ ಪಕ್ಷಿ ಹಬ್ಬ ಆಚರಿಸಲಾಗುತ್ತಿದೆ. ಹಕ್ಕಿಗಳ ಕಾಡುಗಳ ವೃದ್ಧಿಗೆ, ಅಧಿಕವಾಗುವ ಕೀಟಗಳ ನಾಶಕ್ಕೆ ಕಾರಣವಾಗುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಸಮತೋಲನ ಮಾಡುತ್ತವೆ. ಭದ್ರಾ ಹುಲಿ ಸಂರಕ್ಷಿತ ಅರಣ್ಯದ 25ನೇ ವರ್ಷದ ಸಲುವಾಗಿ ಇಲ್ಲಿ ಪಕ್ಷಿ ಹಬ್ಬ ಏರ್ಪಡಿಸಲಾಗಿದೆ. ಆಗ ಇದ್ದ 5 ಹುಲಿಗಳ ಸಂಖ್ಯೆ ಈಗ 35ಕ್ಕೆ ಏರಿದೆ ಎಂದು ಪುಷ್ಕರ್ ತಿಳಿಸಿದರು.
ಈ ಬಾರಿ ‘ಕಪ್ಪು ತಲೆಯ ಹೊನ್ನಕ್ಕಿ’ 11ನೇ ಹಕ್ಕಿ ಹಬ್ಬದ ರಾಯಭಾರಿ ಹಕ್ಕಿ ಎಂದು ಕರ್ನಾಟಕ ಅರಣ್ಯ ಇಲಾಖೆ ಘೋಷಿಸಿದೆ. ಈ ಹಕ್ಕಿಯ ಕುರಿತು ಅರಿವು ಮೂಡಿಸಲು ಪುಸ್ತಕವೊಂದನ್ನು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಪ್ರಕಟಿಸಿದ್ದು, ಇಲ್ಲಿ ಬಿಡುಗಡೆಗೊಳಿಸಿತು. ಪ್ರತಿ ವರ್ಷ ಒಂದೊಂದು ಹಕ್ಕಿಯನ್ನು ರಾಯಭಾರಿ ಹಕ್ಕಿಯಾಗಿ ಘೋಷಿಸಲಾಗಿತ್ತು.