ಶಿಕ್ಷಕ, ನೌಕರರ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಮಹದೇವಸ್ವಾಮಿ

KannadaprabhaNewsNetwork |  
Published : Nov 18, 2024, 12:08 AM IST
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ :  ಪ್ರಾಥಮಿಕ ಶಾಲಾ  ವಿಭಾಗದಿಂದ ಮಹದೇವಸ್ವಾಮಿ ಹ್ಯಾಟ್ರಿಕ್ ಗೆಲುವು ತಂಡಕ್ಕೆ  ಪ್ರಚಂಡ ಗೆಲುವು | Kannada Prabha

ಸಾರಾಂಶ

ಚಾಮರಾಜನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಿಂದ ಮಹದೇವಸ್ವಾಮಿ ಗೆಲುವು ಸಾಧಿಸಿದ್ದು, ತಂಡದ ನಾಲ್ವರು ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾದರು.

ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಿಂದ ಮಹದೇವಸ್ವಾಮಿ ಗೆಲುವು ಸಾಧಿಸಿದ್ದು, ತಂಡದ ನಾಲ್ವರು ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾದರು.

ನಗರದ ಸಿ.ಆರ್.ಬಾಲಪಟ್ಟಣ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ನಡೆದು ಸಂಜೆ ಫಲಿತಾಂಶ ಪ್ರಕಟಿಸಲಾಯಿತು. ಸಂಘದ ಹಾಲಿ ನಿರ್ದೇಶಕ ಮಹದೇವಸ್ವಾಮಿ ೪೮೭ ಮತಗಳನ್ನು ಪಡೆದು ಮೂರನೇ ಬಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದರೆ, ಅವರ ತಂಡದಲ್ಲಿದ್ದ ಎಚ್. ಡಿ. ಮಹೇಶ್ ೩೯೦, ಎಂ.ಡಿ. ಮಹದೇವಯ್ಯ ೩೬೨, ಕೆ.ಎಸ್. ನಾಗಭೂಷಣ್ ೩೧೨, ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾದರು.

ವಿಜಯೋತ್ಸವ: ಪ್ರಾಥಮಿಕ ಶಾಲಾ ವಿಭಾಗದಿಂದ ಮಹದೇವಸ್ವಾಮಿ ನೇತೃತ್ವದ ತಂಡ ಆಯ್ಕೆಯಾಗುತ್ತಿದ್ದಂತೆ ನಗರದ ಭುವನೇಶ್ವರಿ ವೃತ್ತದಲ್ಲಿ ಶಿಕ್ಷಕರು, ಸಂಘದ ಪದಾಧಿಕಾರಿಗಳು, ಸದಸ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಮಹದೇವಸ್ವಾಮಿ ಮಾತನಾಡಿ, ಕಳೆದ ಎರಡು ಅವಧಿಯಲ್ಲಿ ಶಿಕ್ಷಕರ ಕ್ಷೇತ್ರದಿಂದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾಗಿ ಉತ್ತಮ ಸೇವೆ ಸಲ್ಲಿದ್ದು, ಈ ಬಾರಿ ನಾನು ಸಹ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ನನಗೆ ಮತ ನೀಡಿದ ಶಿಕ್ಷಕ ಬಂಧುಗಳಿಗೆ ಅಭಿಮಾನ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಳೆದ ಎರಡು ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿವು ಅನುಭವ ಅವರ ಪ್ರೀತಿ ವಿಶ್ವಾಸ ಗಳಿಸಿದ್ದರಿಂದ ಹೆಚ್ಚಿನ ಬಹುಮತ ನೀಡಿ ನಮ್ಮ ತಂಡವನ್ನು ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಒಳ್ಳೆಯ ತಂಡವನ್ನು ರಚನೆ ಮಾಡಿಕೊಂಡು ಶಿಕ್ಷಕರು ಹಾಗೂ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿದ ಅವರಿಗೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಸಿ.ಕೆ. ರಾಮಸ್ವಾಮಿ, ಸಿ.ಎಂ. ಮುರುಗೇಶ, ಭವಾನಿದೇವಿ, ಸವಿತಾ ರಾಣಿ, ಪಲ್ಲವಿದೇವಿ, ಪುಟ್ಟಸ್ವಾಮಿ, ಪ್ರಸಾದ್, ಈಶ್ವರ್, ನಂಜುಂಡಸ್ವಾಮಿ, ಎಚ್.ಪಿ. ರಾಜು, ಶ್ವೇತಾ, ಲತಾ ಪುಟ್ಟಸ್ವಾಮಿ, ಸಿ.ಕೆ. ವಾಸು ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ
ರಾಜಕೀಯಕ್ಕಾಗಿ ಪಿಣರಾಯಿ ಮಾತು: ಪ್ರಿಯಾಂಕ್‌ ಆಕ್ರೋಶ