ಕನ್ನಡಪ್ರಭ ವಾರ್ತೆ ಹುಕ್ಕೇರಿ
ಹಿರಣ್ಯಕೇಶಿ ನದಿಯ ಸುಲ್ತಾನಪುರ ಬ್ಯಾರೇಜ್‌ನಿಂದ 19 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ₹42 ಕೋಟಿ ವೆಚ್ಚದ ಯೋಜನೆಯನ್ನು ವೀಕ್ಷಿಸಿದರು. ಬಳಿಕ ₹ 94 ಕೋಟಿ ವೆಚ್ಚದ ಘಟಪ್ರಭಾ ನದಿಯಿಂದ ಹಿರಣ್ಯಕೇಶಿ ನದಿಯ ಮೇಲಿರುವ 5 ಬ್ರೀಜ್ ಕಂ ಬ್ಯಾರೇಜ್ ತುಂಬಿಸುವ ಕಾಮಗಾರಿ ಪರಿಶೀಲಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಯೋಜನೆ ಲೋಕಾರ್ಪಣೆಗೊಳಿಸುವಂತೆ ಆದೇಶಿಸಿದರು.
ಈ ವೇಳೆ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ನೀರಾವರಿಗೆ ರಾಜ್ಯ ಸರಕಾರ ಹಲವು ಬಹುನಿರೀಕ್ಷಿತ ಯೋಜನೆಗಳನ್ನು ಜಾರಿ ಮಾಡಿದೆ. 19 ಕೆರೆಗಳಿಗೆ ನೀರು ತುಂಬಿಸುವುದರಿಂದ 1200 ಹೆಕ್ಟೇರ್ ಪ್ರದೇಶ ಮತ್ತು ಬ್ರೀಜ್ ಕಂ ಬ್ಯಾರೇಜ್‌ನಿಂದ 1100 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಈ ಕಾಮಗಾರಿ ಮುಕ್ತಾಯಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು.ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಹುಕ್ಕೇರಿ ಕ್ಷೇತ್ರದ ಸಮಗ್ರ ನೀರಾವರಿಗೆ ಸಂಕಲ್ಪ ಮಾಡಲಾಗಿದೆ. ನೀರಾವರಿ ಮತ್ತು ಅಂತರ್ಜಲಮಟ್ಟ ಹೆಚ್ಚಳದಿಂದ ಕೃಷಿಗೆ ಅನುಕೂಲವಾಗಲಿದೆ. ಜೊತೆಗೆ ದಿ.ಉಮೇಶ ಕತ್ತಿ ಅವರ ಕನಸಿನ ಯೋಜನೆಗಳನ್ನು ಮುಕ್ತಾಯಗೊಳಿಸಲು ಪ್ರಯತ್ನ ಮಾಡಲಾಗಿದೆ ಎಂದರು.