ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ

KannadaprabhaNewsNetwork |  
Published : Sep 19, 2024, 01:47 AM IST
ಪೊಟೋ-ಪಟ್ಟಣದ ಉಪನಾಳ ಪಾರ್ಕನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಕ್ತ ಪರಿಹಾರ ನೀಡುವುದು ಪ್ರಥಮ ಆಧ್ಯತೆಯಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.   | Kannada Prabha

ಸಾರಾಂಶ

ಅಧಿಕಾರಿಗಳು ಹಾಗೂ ಪುರಸಭೆಯ ಆಡಳಿತ ಮಂಡಳಿಯು ಮಾಡಿದ ತಪ್ಪಿನಿಂದ ಈ ರೀತಿಯ ಯಡವಟ್ಟು

ಲಕ್ಷ್ಮೇಶ್ವರ: ಪಟ್ಟಣದ ಉಪನಾಳ ಪಾರ್ಕನಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಸಾಕಷ್ಟು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ನೀರು ಪೂರೈಕೆಯಲ್ಲಿ ಆಗುತ್ತಿರುವ ಲೋಪ ಸರಿಪಡಿಸಲು ಪುರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಉಪನಾಳ ಪಾರ್ಕಗೆ ಭೇಟಿ ನೀಡಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಬುಧವಾರ ಪಟ್ಟಣದ ಸವಣೂರ ರಸ್ತೆಗೆ ಹೊಂದಿಕೊಂಡಿರುವ ಉಪನಾಳ ಪಾರ್ಕಗೆ ಭೇಟಿ ನೀಡಿ ಮಾತನಾಡಿದರು.

ಕಳೆದ ಒಂದು ತಿಂಗಳಿಂದ ಪಟ್ಟಣಕ್ಕೆ ತುಂಗಭದ್ರಾ ನದಿ ನೀರು ಪೂರೈಸುವಲ್ಲಿ ವಿಳಂಬವಾಗಿರುವುದು ನೋವಿನ ಸಂಗತಿಯಾಗಿದೆ. ಮೇವುಂಡಿ ಜಾಕ್‌ವೆಲ್‌ನಲ್ಲಿನ ಮೋಟಾರ್ ದುರಸ್ತಿಗೆ ಬಂದಿವೆ. ಅವುಗಳ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ಜಾಣ ಮೌನವಹಿಸಿದ್ದಾರೆ. ಇದರಿಂದ ಪಟ್ಟಣದ ಜನರು ಕುಡಿಯುವ ನೀರಿನ ಭವಣೆಯಿಂದ ಪರಿತಪಿಸುವಂತಾಗಿದೆ.ಅಧಿಕಾರಿಗಳು ಹಾಗೂ ಪುರಸಭೆಯ ಆಡಳಿತ ಮಂಡಳಿಯು ಮಾಡಿದ ತಪ್ಪಿನಿಂದ ಈ ರೀತಿಯ ಯಡವಟ್ಟು ಆಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಹೇಳಿದ ಅವರು, ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳ ವಿಳಂಬ ನೀತಿ ಹಾಗೂ ದೂರ ದೃಷ್ಟಿಯ ಕೊರತೆ ಕಾರಣವಾಗಿದೆ ಎಂದು ಹೇಳಿದರು.

ಉಪನಾಳ ಪಾರ್ಕ ಅಭಿವೃದ್ಧಿಗೆ ರೂಪಿಸಿದ್ದ ಯೋಜನೆ ರದ್ದುಗೊಳಿಸುವ ಮೂಲಕ ಪುರರಸಭೆಯ ಆಡಳಿತ ಮಂಡಳಿ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಶಾಸಕರು ಪಟ್ಟಣದ ಉಪನಾಳ ಪಾರ್ಕ ಅಭಿವೃದ್ಧಿಗೆ ಸುಮಾರು ₹45 ಲಕ್ಷ ಮೊತ್ತದ ಕ್ರೀಯಾ ಯೋಜನೆ ತಯಾರಿಸಿ ಟೆಂಡರ್ ಕರೆಯಲಾಗಿತ್ತು. ಇತ್ತೀಚೆಗೆ ಪುರಸಭೆಯ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಈ ಟೆಂಡರ್ ರದ್ದು ಪಡಿಸುವಂತೆ ಠರಾವು ಪಾಸ್ ಮಾಡಿದ್ದಾರೆ. ಈ ಕುರಿತು ನಮಗೆ ಬೇಸರವಿಲ್ಲ, ಆದರೆ ಈ ಪ್ರದೇಶವು ಕಳೆದ 30 ವರ್ಷಗಳಿಂದ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಈ ಪ್ರದೇಶದಲ್ಲಿನ ಶಾಲಾ ಕಾಲೇಜು ಹಾಗೂ ಎಪಿಎಂಸಿ ಮಾರುಕಟ್ಟೆಗೆ ಹೋಗಲು ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು ಎನ್ನುವ ಆಶಯ ನಮ್ಮದು ಎಂದು ಹೇಳಿದರು.

ಈ ವೇಳೆ ನೀಲಪ್ಪ ಹತ್ತಿ, ರಮೇಶ ರಿತ್ತಿ, ಮುರಳಿಧರ ಹುಬ್ಬಳ್ಳಿ, ಎಫ್.ದೊಡ್ಡಮನಿ, ಪಿ.ಜಿ.ಯಲವಿಗಿ, ಅಶೋಕ ಕಲ್ಲಣ್ಣವರ, ಎಂ.ಎನ್. ಕುರಹಟ್ಟಿ, ಲೋಕಪ್ಪ ಗಂಟಿ, ಪಿ.ಜಿ. ಯಲುವಿಗಿ, ನಾಗರಾಜ ಓದು, ಮಲ್ಲಿಕಾರ್ಜುನ ದೊಡ್ಡೂರ, ಎನ್.ಡಿ. ಸೂರಣಗಿ, ರಮೇಶ ಮೇಲಗಿರಿ, ಸುರೇಶಸಿಂಗ್ ಇದ್ದರು.

PREV

Recommended Stories

ಮಠದ ಪರಂಪರೆ ರಕ್ಷಣೆಗೆ ಜೀವನ ಮೀಸಲಿಡುವೆ
ನಷ್ಟದಲ್ಲಿರುವ ಸಹಕಾರಿಗಳ ಉಳಿಸಿ, ಬೆಳೆಸಲು ಸಂಕಲ್ಪ