ಕನ್ನಡಪ್ರಭ ವಾರ್ತೆ ಶಿರಾ
ಅವರು ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಕೈಗಾರಿಕಾ ಪ್ರದೇಶದಲ್ಲಿ ರೈತರ ಜಮೀನು ಪಡೆದುಕೊಳ್ಳುವ ಸಮಯದಲ್ಲಿ ರೈತರಿಗೆ ಹಾಗೂ ದಿನಗೂಲಿ ರೈತರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು, ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಕೈಗಾರಿಕೆಗಳು ರೈತರ ಮೇಲೆ ದಬ್ಬಾಳಿಗೆ, ದರ್ಪ ತೋರುತ್ತಾ ಬರುತ್ತಿದ್ದು, ಗುತ್ತಿಗೆದಾರರನ್ನು ಸಹ ಬೇರೇ ರಾಜ್ಯದಿಂದ ಕರೆತಂದು ಪಾರುಪತ್ಯ ಮೆರೆಯುತ್ತಿದೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಯಲ್ಲಿ ಕೆಲ ಸ್ಥಳೀಯರಿಗೆ ಉದ್ಯೋಗ ನೀಡಿ ಸಂಬಳ ನೀಡುವಲ್ಲಿ ಸಹ ತಾರತಮ್ಯ ತೋರುತ್ತಾ ಅನ್ಯಾಯ ವ್ಯಸಗುತ್ತಿದೆ. ನಾಮಕವಸ್ತೆಗೆ ಮಾತ್ರ ಕೆಲ ಸ್ಥಳೀಯರಿಗೆ ಉದ್ಯೋಗ ನೀಡಿದ್ದು ಇವರನ್ನು ಸಹ ಯಾವ ಸಮಯದಲ್ಲಿ ಬೇಕಾದರೂ ಕೆಲಸದಿಂದ ವಜಾಗೊಳಿಸಬಹುದು. ಖಾಸಗಿ ಕಂಪನಿಗಳು ತಾವೇ ಸ್ವಂತಿಕೆಗೆ ಕಾನೂನು ಮಾಡಿಕೊಂಡುತ್ತಿದೆ. ಸ್ಥಳೀಯ ರೈತರಿಗೆ ಹಾಗೂ ಉದ್ಯೋಗಳಿಗೆ ಅನ್ಯಾಯ ಮಾಡುತ್ತಿದ್ದು, ಧರಣಿ ನಿರತರಿಗೆ ಪ್ರಭಲ ನಾಯಕರು ಹಾಗೂ ಬಂಡವಾಳ ಶಾಹಿಗಳಿಂದ ಒತ್ತಡ ಹೇರುತ್ತಿದ್ದಾರೆ. ಇವೆಲ್ಲದಕ್ಕೂ ನಾವು ಮಣಿಯುವುದಿಲ್ಲ. ಈ ಎಲ್ಲಾ ಗೊಂದಲಗಳು ಬಗೆಹರಿಯುವವರಿಗೂ ಹಾಗೂ ರೈತರಿಗೆ ನ್ಯಾಯ ಸಿಗುವವರೆಗೂ ಈ ಧರಣಿ ಸತ್ಯಾಗ್ರಹವನ್ನು ಮುಂದುವರೆಸಲಾಗುವುದು ಎಂದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಅಂಜನ್ ಕುಮಾರ್, ಮುಖಂಡ ನರೇಶ್ ಗೌಡ ಅವರು ಧರಣಿ ಸತ್ಯಾಗ್ರಹ ನಿರತರ ಜೊತೆ ಮಾತುಕತೆ ನಡೆಸಿ ಈ ಸಮಸ್ಯೆಯ ಕುರಿತಾಗಿ ಸ್ಥಳೀಯ ಶಾಸಕ ಟಿ.ಬಿ.ಜಯಚಂದ್ರ ಅವರೊಂದಿಗೆ ದೂರವಾಣಿ ಕರೆ ಮಾಡಿ ಸಂಭಾಷಣೆ ನಡೆಸಿ ಶಾಸಕರ ಸಲಹೆ ಹಾಗೂ ಸೂಚನೆ ಪಡೆದು ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದರು. ಶ್ರೀಘ್ರವೇ ಈ ಎಲ್ಲಾ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿ ನ್ಯಾಯ ಒದಗಿಸಿ ಕೊಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಕಳ್ಳಂಬೆಳ್ಳ ಕುಮಾರ, ಮೇಕೇರಹಳ್ಳಿ ರವಿಕುಮಾರ್, ರಾಮಣ್ಣ, ಯೋಗೀಶ್, ಯತೀಶ್, ಶ್ರೀನಿವಾಸ್, ನರಸಿಂಹಮೂರ್ತಿ, ಗುಮ್ಮನಹಳ್ಳಿ ಗೊಲ್ಲರಹಟ್ಟಿ ಈರಣ್ಣ, ಸಿದ್ದು, ಲೋಕೇಶ್ ನಾಯಕ್, ಸಾಯಿಪ್ರಕಾಶ್, ಕಲ್ಲಿಗಾನಹಟ್ಟಿ ಶಿವಕುಮಾರ್, ಮದ್ದಕ್ಕನಹಳ್ಳಿ ಅಶೋಕ್ ಸೇರಿದಂತೆ ಹಲವರು ಹಾಜರಿದ್ದರು.