ಉಳ್ಳವರ ಪರವಾಗಿರುವ ಬಜೆಟ್: ಎನ್‌,ವೈ.ಚೇತನ್‌

KannadaprabhaNewsNetwork |  
Published : Feb 02, 2025, 01:03 AM IST
ಚಿತ್ರ ಶೀರ್ಷಿಕೆ 31ಎಂ ಎಲ್ ಕೆ4ಮೊಳಕಾಲ್ಮುರು.ಎನ್.ವೈ.ಚೇತನ್ ಭಾವಚಿತ್ರ. | Kannada Prabha

ಸಾರಾಂಶ

ಅತ್ಯಧಿಕ ತೆರಿಗೆ ನೀಡುವ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡದೆ ಅನ್ಯಾಯ ಮಾಡಿದ್ದಾರೆ.ಜನ ಸಾಮಾನ್ಯರನ್ನು ಕೇವಲ ಕಣ್ಣೊರೆಸುವ ತಂತ್ರ ಕೇಂದ್ರ ಸರ್ಕಾರ ಮಾಡಿದೆ ಎಂದು ಮೊಳಕಾಲ್ಮೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್‌,ವೈ.ಚೇತನ್‌ ಹೇಳಿದ್ದಾರೆ.

ಮೊಳಕಾಲ್ಮುರು: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಈ ಬಾರಿಯ ಬಜೆಟ್ ಬಡವರ ಪರವಾಗಿ ಇರದೆ ಕೇವಲ ಉಳ್ಳವರ ಪರವಾಗಿ ಇದ್ದಂತೆ ಕಾಣುತ್ತಿದೆ.ಹೊಸ ತನ ಇಲ್ಲದ ಅಯವಯ ದಲ್ಲಿ ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮ ವಹಿಸಿಲ್ಲ.ಅತ್ಯಧಿಕ ತೆರಿಗೆ ನೀಡುವ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡದೆ ಅನ್ಯಾಯ ಮಾಡಿದ್ದಾರೆ.ಜನ ಸಾಮಾನ್ಯರನ್ನು ಕೇವಲ ಕಣ್ಣೊರೆಸುವ ತಂತ್ರ ಕೇಂದ್ರ ಸರ್ಕಾರ ಮಾಡಿದೆ ಎಂದು ಮೊಳಕಾಲ್ಮೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್‌,ವೈ.ಚೇತನ್‌ ಹೇಳಿದ್ದಾರೆ.

ಆದಾಯ ತೆರಿಗೆ ಹೆಚ್ಚಳ ಮಧ್ಯಮ ವರ್ಗಕ್ಕೆ ಅನುಕೂಲಮೊಳಕಾಲ್ಮುರು: ಕೇಂದ್ರ ವಿತ್ತ ಸಚಿವರು ಮಂಡಿಸಿದ ಬಜೆಟ್‌ನಲ್ಲಿ ಪ್ರಮುಖವಾಗಿ ಆದಾಯ ತೆರಿಗೆ ಮಿತಿ 12 ಲಕ್ಷಕ್ಕೆ ಹೆಚ್ಚಿಸಿದ್ದು ಮಧ್ಯಮ ವರ್ಗಕ್ಕೆ ಅನುಕೂಲವಾಗಲಿದೆ ಎಂದು ವೈದ್ಯ ಡಾ.ಮಂಜುನಾಥ ಪಿ.ಎಂ. ಹೇಳಿದ್ದಾರೆ.ರೈತರ ಕಿಸಾನ್ ಕಾರ್ಡ ಮಿತಿ 3 ರಿಂದ 5 ಲಕ್ಷ ರು.ಗೆ ಏರಿಸಿದ್ದು ರೈತ ಸಮೂಹಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ಎಂಎಸ್ಎಂಇ ಅಡಮಾನವಿಲ್ಲದ ಸಾಲ ಸೌಲಭ್ಯ ಘೋಷಣೆಯು ಬ್ಯಾಂಕ್‌ಗಳು ನೀಡುವಂತಾಗಲಿ. ಒಟ್ಟಿನಲ್ಲಿ ಬಡವರು, ಯುವಕರು, ಅನ್ನದಾತರು ಮತ್ತು ಮಹಿಳೆಯರ ಮೇಲೆ ಕೇಂದ್ರೀಕರಿಸಿದ ವಿಕಸಿತ ಭಾರತದ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿ ಚುನಾವಣೆ ದೃಷ್ಟಿಕೋನದ ಬಜೆಟ್ಮೊಳಕಾಲ್ಮುರು: ಮೇಕ್ ಇನ್ ಇಂಡಿಯಾ ಹೆಸರಲ್ಲಿ ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾಗಿ ಮಂಡಿಸಿದಂತ ಬಜೆಟ್ ಇದಾಗಿದೆ.ದುರ್ಬಲ ವರ್ಗಗಳ ಸಬಲೀಕರಣಕ್ಕೆ ಹೊಸ ಮಾರ್ಗಸೂಚಿಗಳು ಕಾಣದಾಗಿದೆ. ಎದುರಾಗಿರುವ ದೆಹಲಿ ಚುನಾವಣೆ ದೃಷ್ಟಿಕೋನದಲ್ಲಿ ಹಳೆಯ ಕಥೆಗೆ ಹೊಸ ಶೀರ್ಷಿಕೆ ಕೊಟ್ಟಂತಾಗಿದೆ. ಬಜೆಟ್ ನೀರಸವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಜಿಯಾವುಲ್ಲಾ ಹೇಳಿದ್ದಾರೆ.

ರಾಜ್ಯದ ಅಭಿವೃದ್ಧಿಗೆ ವಿಶೇಷ ಯೋಜನೆಗಳಿಲ್ಲಹಿರಿಯೂರು: ಬಯಲು ಸೀಮೆ ನೀರಾವರಿ ಯೋಜನೆಗೆ ಹಣ ಮೀಸಲಿಟ್ಟಿಲ್ಲ. ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾನೂನು ಖಾತ್ರಿ ಇಲ್ಲ ಎಂದು ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆಸಿ ಹೊರಕೇರಪ್ಪ ಹೇಳಿದ್ದಾರೆ. ಕೇಂದ್ರ ಬಜೆಟ್‌ ಕುರಿತು ಪ್ರತಿಕ್ರಿಯಿಸಿ, ಚುನಾವಣಾ ಪೂರ್ವದಲ್ಲಿ ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸುವ ಬಗ್ಗೆ ಜಪ ಮಾಡುವ ಸರ್ಕಾರ ಅಧಿಕಾರಕ್ಕೆ ಬಂದಾಗ ವರದಿ ಜಾರಿಗೊಳಿಸುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಕರ್ನಾಟಕ ರಾಜ್ಯಧ ಅಭಿವೃದ್ಧಿ ಬಗ್ಗೆ ಯಾವುದೇ ವಿಶೇಷ ಯೋಜನೆ ಜಾರಿ ಇಲ್ಲ. ಉಳ್ಳವರಿಗೆ ಮತ್ತು ಕಾರ್ಪೊರೇಟ್ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಇದು ರೈತ ವಿರೋಧಿ ನಿರಾಶದಾಯಕ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಹೆಚ್ಚಳ ಉತ್ತಮಹಿರಿಯೂರು: ರೈತರು ಪಡೆಯುತ್ತಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ 3 ಲಕ್ಷ ದಿಂದ 5 ಲಕ್ಷ ರು.ಗೆ ಏರಿಸಿದ್ದು ಉತ್ತಮ ಬೆಳವಣಿಗೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಜಿಲ್ಲಾ ರೈತ ಸಂಘಗಳ ಒಕ್ಕೂಟದ ಗೌರವ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಹೇಳಿದ್ದಾರೆ.ಬಜೆಟ್‌ ಕುರಿತು ಮಾತನಾಡಿ. ರೈತರ ಧಾನ್ಯ ಕೃಷಿ ಯೋಜನೆ ಹಾಗೂ ಸಂಸ್ಕರಣೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ತಂದಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್‌
ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!