ಹನ್ಯಾಳು ಶಾಲೆ ಹಿರಿಯ ವಿದ್ಯಾರ್ಥಿಗಳ ಜನಪರ ಕೆಲಸ

KannadaprabhaNewsNetwork |  
Published : Oct 25, 2026, 01:45 AM IST
24ಎಚ್ಎಸ್ಎನ್12 : ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ಪೌಢಶಾಲೆಯಲ್ಲಿ ಮಕ್ಕಳ ಮನೆ ಕಾರ್ಯಕ್ರಮದಲ್ಲಿ ಶಾಸಕರು ಎ. ಮಂಜು ಮಾತನಾಡಿದರು. | Kannada Prabha

ಸಾರಾಂಶ

ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಮನೆ ನಡೆಯುತ್ತಿರುವ ಶಾಲೆಯಲ್ಲಿ ಭಾಗವಹಿಸಿ ಮಾತನಾಡಿ, ಹನ್ಯಾಳಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಪತ್ನಿ ತಾರಾಮಂಜು ಅವರ ಕಲ್ಪನೆಯಂತೆ ಪ್ರಾರಂಭವಾದ ಎಲ್.ಕೆ.ಜಿ. ಯು.ಕೆ.ಜಿ. ಮಕ್ಕಳ ಮನೆ ಇಂದು ಅರಕಲಗೂಡು ಕ್ಷೇತ್ರದಲ್ಲಿ 21 ಶಾಲೆಗಳಲ್ಲಿ ಮಕ್ಕಳ ಮನೆ ಎಲ್.ಕೆ.ಜಿ. ಯು.ಕೆ.ಜಿ. ಶಾಲೆಗಳು ಉತ್ತಮವಾಗಿ ನಡೆಯುತ್ತಿರುವುದಕ್ಕೆ ಪ್ರೇರಣೆಯಾಗಿದ್ದು, ಅದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಹನ್ಯಾಳು ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಹಲವಾರು ಜನಪರ, ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದಕ್ಕೆ ಹನ್ಯಾಳು ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ಗೌರವಾಧ್ಯಕ್ಷ ಹಾಗೂ ಶಾಸಕ ಎ. ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಮನೆ ನಡೆಯುತ್ತಿರುವ ಶಾಲೆಯಲ್ಲಿ ಭಾಗವಹಿಸಿ ಮಾತನಾಡಿ, ಹನ್ಯಾಳಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಪತ್ನಿ ತಾರಾಮಂಜು ಅವರ ಕಲ್ಪನೆಯಂತೆ ಪ್ರಾರಂಭವಾದ ಎಲ್.ಕೆ.ಜಿ. ಯು.ಕೆ.ಜಿ. ಮಕ್ಕಳ ಮನೆ ಇಂದು ಅರಕಲಗೂಡು ಕ್ಷೇತ್ರದಲ್ಲಿ 21 ಶಾಲೆಗಳಲ್ಲಿ ಮಕ್ಕಳ ಮನೆ ಎಲ್.ಕೆ.ಜಿ. ಯು.ಕೆ.ಜಿ. ಶಾಲೆಗಳು ಉತ್ತಮವಾಗಿ ನಡೆಯುತ್ತಿರುವುದಕ್ಕೆ ಪ್ರೇರಣೆಯಾಗಿದ್ದು, ಅದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. ತಾಲೂಕಿನಲ್ಲಿ ಸುಮಾರು 2 ಲಕ್ಷ ರು. ವೆಚ್ಚದಲ್ಲಿ ಹನ್ಯಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ದಿವಂಗತ ಎಚ್ ಎನ್ ನಂಜೇಗೌಡರ ಸ್ಮರಣಾರ್ಥ ಸ್ಮಾರ್ಟ್‌ ಕ್ಲಾಸ್ ಪ್ರಾರಂಭಿಸಲಾಗಿದೆ. ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಸುಮಾರು 2000 ರೋಗಿಗಳಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎಂಬ ಉಚಿತ ಮಾರ್ಗದರ್ಶನ ಕಾರ್ಯಾಗಾರವನ್ನು ಅರಕಲಗೂಡು ತಾಲೂಕಿನಲ್ಲಿ ಆಯೋಜಿಸಲಾಯಿತು. ಅರಕಲಗೂಡು ತಾಲೂಕಿನ ಎಲ್ಲಾ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ರಸಪ್ರಶ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಎಂಆರ್‌ಪಿಎಲ್ ವತಿಯಿಂದ ಸುಮಾರು 14 ಲಕ್ಷ ರೂ ವೆಚ್ಚದಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ಕೊಠಡಿಯನ್ನು ನಿರ್ಮಿಸಲಾಗಿದೆ. ಐ ಟಿ ಸಿ ಸಂಸ್ಥೆ ವತಿಯಿಂದ ಹೈಟೆಕ್ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ.

ಅಮೆರಿಕಾದ ಪ್ರತಿಷ್ಠಿತ ಯೂಟ್ಯೂಬ್ ಕಮ್ ಚಾನೆಲ್ ಆದ ಟೆಟ್ ಎಕ್ಸ್‌ನಲ್ಲಿ ರೈತರ ಸಂವಾದ ನಡೆಸಿ ರೈತರ ಯಶೋಗಾಥೆಯನ್ನು ಹಂಚಿಕೊಂಡಿರುವುದು.

ಶಾಲಾ ವಾರ್ಷಿಕೋತ್ಸವ ಗುರುವಂದನಾ ಕಾರ್ಯಕ್ರಮಗಳು ರಕ್ತದಾನ ಶಿಬಿರ ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಹೀಗೆ ಪ್ರತಿ ವರ್ಷವೂ ಶೈಕ್ಷಣಿಕ ಉದ್ದೇಶಗಳ ಕಾರ್ಯಕ್ರಮಗಳಿಗೆ ಸಹಕಾರ ಮತ್ತು ಉತ್ತೇಜನ ನೀಡುತ್ತಿರುವುದು ಸಂತೋಷಕರ ವಿಷಯ. ಇನ್ನೂ ಹೆಚ್ಚಿನ ರೀತಿಯಲ್ಲಿ ಹನ್ಯಾಳು ಹಿರಿಯ ವಿದ್ಯಾರ್ಥಿಗಳ ಬಳಗ ಕೆಲಸ ಮಾಡಲಿ ಎಂದು ಶಾಸಕರು ಎ. ಮಂಜು ಹಾರೈಸಿದರು. ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಲರಾಮ್, ಹಾಸನ ಜಿಲ್ಲಾ ಲೆಕ್ಕಪತ್ರ ಇಲಾಖೆಯ ಹಿರಿಯ ಉಪನಿರ್ದೇಶಕರಾದ ಡಾ. ಅಶೋಕ್ ಹನ್ಯಾಳು, ಹಾಸನ ಜಿಲ್ಲಾ ಡಯಟ್ ಪ್ರಾಂಶುಪಾಲರಾದ ರುದ್ರೇಶ್, ಅರಕಲಗೂಡು ತಾಲೂಕಿನ ತಹಸೀಲ್ದಾರ್ ಸೌಮ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ದಿಲೀಪ್, ಹನ್ಯಾಳು ಗ್ರಾಮ ಪಂಚಾಯಿತಿ ಪಿಡಿಒ ಸುಷ್ಮಾ, ಲಕ್ಕೂರು ಪಿಡಿಒ ಮೋಹನ್, ರಾಮನಾಥಪುರ ಪಿಡಿಒ ಕುಮಾರಸ್ವಾಮಿ, ಪ್ರೌಢಶಾಲಾ ಸಂಘದ ಅಧ್ಯಕ್ಷರಾದ ಮಧುಕರ್ ಜಿ.ಟಿ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಮಾರ್ ಎಚ್. ಪಿ. , ಹನ್ಯಾಳು ಶಾಲೆಯ ನಿವೃತ್ತ ಶಿಕ್ಷಕರಾದ ಮಲ್ಲೇಶ್ ಹಾಗೂ ಕಾಳಾಬೋಯಿ, ಗ್ರಾಮದ ಮುಖ್ಯಸ್ಥರಾದ ಈಶ್ವರೇಗೌಡ, ಗುಂಡಣ್ಣ, ಮಂಜುನಾಯಕ್, ಪ್ರವೀಣ್, ಶ್ರೀನಿವಾಸ್, ಸೈನಿಕ ಗಣೇಶ್, ಯತೀಶ್, ಸೀತಾರಾಮ್, ಹನುಮೇಶ್, ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ರವಿಕುಮಾರ್ ಹಾಗೂ ಸಹ ಶಿಕ್ಷಕರು, ನವೀನ್, ಸಂತೋಷ್, ಶಾಲಾ ಎಸ್‌ಡಿಎಂಸಿ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಮತ್ತು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿ ಪತ್ರಕರ್ತರ ಕೊಡುಗೆ ಅಪಾರ: ಬಸವಂತಪ್ಪ
ದಲಿತ ಸಚಿವರ ತಡೆದ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ