- 5 ಖರೀದಿ ಕೇಂದ್ರಗಳಲ್ಲೂ ಕೂಡ ಖರೀದಿ ಮುಂದುವರಿಕೆ
- ಜಿಲ್ಲಾಧಿಕಾರಿ ಮಾರ್ಗದರ್ಶನದಂತೆ ಖರೀದಿ
ಕನ್ನಡಪ್ರಭ ವಾರ್ತೆ, ಕಡೂರುಜಿಲ್ಲಾಡಳಿತದ ಮಾರ್ಗದರ್ಶನದಂತೆ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಣೆ ಮಾಡುವ ಮೂಲಕ ಪಟ್ಟಣದ ರಾಗಿ ಖರೀದಿ ಕೇಂದ್ರಗಳಲ್ಲಿ ಖರೀದಿ ಮುಂದುವರಿಯುತ್ತಿದೆ.
ಈ ಹಿನ್ನೆಲೆಯಲ್ಲಿ ಕಡೂರು ಎಪಿಎಂಸಿ ಪ್ರಾಂಗಣದ ಎರಡು ಖರೀದಿ ಕೇಂದ್ರಗಳಲ್ಲೂ ಖರೀದಿ ಸುಗಮವಾಗಿ ನಡೆಯುತ್ತಿದೆ. ನೊಂದಣಿ ಪ್ರಕ್ರಿಯೆಯಂತೆ ಸೀನಿಯಾರಿಟಿ ಆಧರಿಸಿ 8 ದಿನಗಳ ಬಳಿಕ ರಾಗಿ ತರುವಂತೆ ರೈತರಿಗೆ ಕಾರ್ಡನ್ನು ನೀಡಲಾ ಗುತ್ತಿದೆ. ಲಿಸ್ಟ್ ಹಾಕಿದ ಬಳಿಕ ನೋಡಿ ನಿಗಧಿತ ದಿನಾಂಕದಂದು ರಾಗಿ ತರುವಂತೆ ರೈತರಿಗೆ ತಿಳಿಸಲಾಗುತ್ತಿದೆ.
ಜಿಲ್ಲಾಧಿಕಾರಿಗಳು ಸ್ವತಃ ಭೇಟಿ ಮಾಡಿ ನೀಡಿದ ಮಾರ್ಗದರ್ಶನದಂತೆ ಖರೀದಿ ನಡೆಯುತ್ತಿದೆ. ಪ್ರತಿ ದಿನ ಸುಮಾರು 30 ರಿಂದ 50 ಕ್ವಿಂಟಾಲ್ ರಾಗಿ ಖರೀದಿಸಲಾಗುತ್ತಿದೆ ಎಂದು ತಹಸೀಲ್ದಾರ್ ಪೂರ್ಣೀಮಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿ ನೀಡಿದರು.
ರಾಗಿ ಖರೀದಿ ಫೆಬ್ರವರಿ 23 ರಂದು ಆರಂಭವಾಗಿದ್ದು, ನೋಂದಣಿ ಕಳೆದ 2025 ನವಂಬರ್ ನಿಂದ ಆರಂಭಗೊಂಡಿತ್ತು. 31 ಮಾರ್ಚ್ ವರೆಗೆ ಕಡೂರಿನ ಖರೀದಿ ಘಟಕ 1ರಲ್ಲಿ 1313 ರೈತರಿಂದ ಖರೀದಿ ನಡೆದಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನಿಗಧಿತ ದಿನದಂದು ವೈಯಕ್ತಿಕ ಸಮಸ್ಯೆಯಿಂದ ರೈತರು ರಾಗಿ ತರಲು ಸಾದ್ಯವಾಗದಿದ್ದರೆ ಕೇಂದ್ರದ ಸಿಬ್ಬಂದಿ ಹೇಳುವಂತೆ ಅಂತಹ ರೈತರ ರಾಗಿಯನ್ನು ತೊಂದರೆ ಆಗದಂತೆ ವಾರದ ಕೊನೆ ದಿನವಾದ ಶನಿವಾರ ಖರೀದಿಗೆ ಅವಕಾಶ ನೀಡಲಾಗುತ್ತಿದೆ ಎಂದು ರಾಗಿ ಖರೀದಿ ಕೇಂದ್ರ ಸಿಬ್ಬಂದಿ ತಿಳಿಸಿದ್ದಾರೆ.
ಕಡೂರು ಎಪಿಎಂಸಿ ರಾಗಿ ಖರೀದಿ ಕೇಂದ್ರಕ್ಕೆ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಭೇಟಿ ನೀಡಿ ಪರಿಶೀಲಿಸಿದರು.