ನಗರದಲ್ಲಿ ಕಲಾ ತಂಡಗಳೊಂದಿಗೆ ಮೆರವಣಿಗೆ

KannadaprabhaNewsNetwork |  
Published : May 01, 2025, 12:53 AM IST
ಜಗದ್ಗುರು ರೇಣುಕಾಚಾರ್ಯರ, ಬಸವೇಶ್ವರರ ಮತ್ತು ಸಿದ್ದರಾಮೇಶ್ವರರ ಜಂಟಿ ಜಯಂತ್ಯೋತ್ಸವ | Kannada Prabha

ಸಾರಾಂಶ

ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಜಂಟಿ ಜಯಂತ್ಯೋತ್ಸವ ಹಾಗೂ ಬಸವಜಯಂತಿ

ಕನ್ನಡಪ್ರಭ ವಾರ್ತೆ ತುಮಕೂರುನಗರ ವೀರಶೈವ ಸಮಾಜ ಸೇವಾ ಸಮಿತಿ, ವೀರಶೈವ ಸಮಾಜದ ಅಂಗ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಜಂಟಿ ಜಯಂತ್ಯೋತ್ಸವ ಹಾಗೂ ಬಸವಜಯಂತಿ ಅಂಗವಾಗಿ ಅರಳೇಪೇಟೆ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಮಹಾಮಂಗಳರಾತಿ, ಪ್ರಸಾದ ವಿನಿಯೋಗ ನಡೆಯಿತು.ಬುಧವಾರ ಸಂಜೆ ಮೆರವಣಿಗೆಯು ಅರಳೇಪೇಟೆ ದೇವಾಲಯದಿಂದ ಹೊರಪೇಟೆ, ಮಂಡಿಪೇಟೆ ಆಯಿಲ್ ಮಿಲ್ ರಸ್ತೆ, ನರಸಿಂಗ ಸ್ಟೋರ್ ಮುಂಭಾಗದಿಂದ ಮಂಡಿಪೇಟೆಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿ ಮುಕ್ತಾಯವಾಯಿತು. ಜಗದ್ಗುರು ಶ್ರೀ ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಜಂಟಿ ಉತ್ಸವ ವಿವಿಧ ಕಲಾ ತಂಡ ಹಾಗೂ ಆನೆ ಲಕ್ಷ್ಮಿ ಪಾಲ್ಗೊಳ್ಳುವಿಕೆಯೊಂದಿಗೆ ವೈಭವವಾಗಿ ನಡೆಯಿತು ನಡೆಯಿತು. ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿಗಳು ಉತ್ಸವದ ಉದ್ಘಾಟನೆ ನೆರವೇರಿಸುವರು. ಚನ್ನಬಸವರಾಜೇಂದ್ರ ಸ್ವಾಮಿಗಳು, ಅಟವೀ ಶಿವಲಿಂಗ ಸ್ವಾಮಿಗಳು, ಡಾ.ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಗಂಗಾಧರ ಸ್ವಾಮಿಗಳು, ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಕಾರದ ವೀರಬಸವ ಸ್ವಾಮಿಗಳು, ಚಂದ್ರಶೇಖರ ಸ್ವಾಮಿಗಳು, ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಬಸವಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಮೆರವಣಿಗೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ವೀರಶೈವ ಸಮಾಜದ ಹಿರಿಯರಾದ ಕೋರಿ ಮಂಜಣ್ಣ, ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಜಿ.ಚಂದ್ರಮೌಳಿ, ಸಮಾಜದ ಉಪಾಧ್ಯಕ್ಷ ಟಿ.ವಿ.ಹರೀಶ್, ಟಿ.ಸಿ.ಓಹಿಲೇಶ್ವರ್, ಡಾ. ಪರಮೇಶ್, ಟಿ.ಆರ್. ಸದಾಶಿವಯ್ಯ, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಕೆ.ವೈ.ಸಿದ್ಧಲಿಂಗಮೂರ್ತಿ, ಮಲ್ಲಿಕಾರ್ಜುನಯ್ಯ, ಬಿ.ಎಸ್.ಮಂಜುನಾಥ್, ದರ್ಶನ್, ಗೌರವ ಕಾರ್ಯದರ್ಶಿ ಡಿ.ಜೆ.ಶಶಿಧರನ್, ಖಜಾಂಚಿಗಳಾದ ಜಿ.ಕೆ.ಸ್ವಾಮಿ, ನಿರ್ದೇಶಕರುಗಳಾದ ಟಿ.ಆರ್.ನಟರಾಜು, ಆರ್.ಪ್ರಭು, ಮಹೇಶ್ ಬಾಬು, ವಿನಯ್, ಉಮೇಶ್, ಕುಮಾರಸ್ವಾಮಿ, ಕೆ.ಯು.ನಿಶ್ಚಲ್, ಕೆ.ಎಸ್.ವಿಶ್ವನಾಥ್, ಎಸ್.ವಿ.ತಿಪ್ಪೇಸ್ವಾಮಿ, ಮೆಳೇಹಳ್ಳಿ ಆನಂದ್, ಶೀಲಾಸೋಮಸುಂದರ್, ಎನ್.ಆರ್.ಶಶಿಧರ್, ಎಸ್.ವಿ. ಅಂಬಿಕ, ಸೇರಿದಂತೆ ಸಮಾಜದ ಬಾಂಧವರು ಭಾಗವಹಿಸಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!