ಕನ್ನಡಪ್ರಭ ವಾರ್ತೆ ಮೈಸೂರು
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಭಿನಂದಿಸುವರು.
ಮುಖ್ಯಅತಿಥಿಗಳಾಗಿ ಸಾಹಿತಿ ಪ್ರೊ. ಪ್ರಧಾನ ಗುರುದತ್ತ, ಸಮಾಜ ಸೇವಕ ಮ. ವೆಂಕಟರಾಮ್, ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್. ರಂಗಪ್ಪ, ಪ್ರೊ.ಕೆ.ಆರ್. ವೇಣುಗೋಪಾಲ್, ಪ್ರೊ.ವಿ. ವಿಜಯಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಭಾಗವಹಿಸುವರು. ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸುವರು ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಎಸ್. ಬೆಂಜಮಿನ್, ಗೌರವಾಧ್ಯಕ್ಷ ಡಾ.ಕೆ.ಬಿ. ಕೆಂಪೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೊ.ಎನ್. ಸತೀಶ್ಗೌಡ ತಿಳಿಸಿದ್ದಾರೆ.ಪ್ರೊ.ಸಿ. ಬಸವರಾಜು ಅವರು ಕಾನೂನು ವಿವಿ ಕುಲಪತಿಯಾಗಿ ಮುಂದುವರೆದಿದ್ದು, ಮೈವಿವಿ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿ ಆಗುತ್ತಿರುವುದರಿಂದ ಈ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೈಸೂರಿನ ಅಶೋಕಪುರಂನ ಬಡಕುಟುಂಬಕ್ಕೆ ಸೇರಿದ ಸಿ. ಚಿಕ್ಕಬಸವಯ್ಯ ಹಾಗೂ ಡಿ. ಜಯಮ್ಮ ಅವರ ಪುತ್ರರಾಗಿ 1962 ರ ಮೇ 15 ರಂದು ಜನಿಸಿದ ಪ್ರೊ.ಬಸವರಾಜು ಅವರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ಮೈಸೂರು ವಿವಿಯಿಂದ ಚಿನ್ನದ ಪದಕದೊಂದಿಗೆ ಬಿ.ಎ ಪಡೆದರು. ನಂತರ ಆಂಗ್ಲ ಸಾಹಿತ್ಯದಲ್ಲಿ ಎಂ.ಎ, ಎಲ್ಎಲ್ಬಿ, ಎಲ್ಎಲ್ಎಂ [ಸಂವಿಧಾನ ಕಾನೂನು] ಹಾಗೂ ಪಿಎಚ್.ಡಿ [ಸಾಮಾಜಿಕ ನ್ಯಾಯ] ಪಡೆದರು.
ಮೈಸೂರು ವಿವಿ ಶತಮಾನೋತ್ಸವ ಆಚರಿಸಿಕೊಂಡ ಸಂದರ್ಭದಲ್ಲಿ ಪ್ರೊ.ಬಸವರಾಜು ಕುಲಸಚಿವರಾಗಿದ್ದರು. ನಂತರ ಪ್ರಭಾರ ಕುಲಪತಿಯೂ ಆಗಿದ್ದರು. ಪ್ರಸ್ತುತ ಕರ್ನಾಟಕ ಕಾನೂನು ವಿವಿಯ ಕುಲಪತಿಗಳಾಗಿದ್ದಾರೆ.
ಇವರ ಮಾರ್ಗದರ್ಶನದಲ್ಲಿ 19 ಮಂದಿ ಪಿಎಚ್.ಡಿ ಪಡೆದಿದ್ದಾರೆ. ಅವರು ವಿವಿಧ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರು, ನ್ಯಾಯಾಧೀಶರು, ವಕೀಲರು ಹಾಗೂ ಸರ್ಕಾರಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರಿಗೆ ಡಾ.ದೇ.ಜವರೇಗೌಡ ಚಿನ್ನದ ಪದಕ, ಬೆಸ್ಟ್ಸಿಟಿಜನ್ಆಫ್ಇಂಡಿಯಾ ಪ್ರಶಸ್ತಿ, ಯಶಸ್ಸಿ ಸಾಧಕ ಪ್ರಶಸ್ತಿ, ರಾಜೀವ್ಗಾಂಧಿ ಎಕ್ಸಲೆನ್ಸ್ಪ್ರಶಸ್ತಿ, ನ್ಯಾಷನಲ್ಆರ್ಟಿಐ ಜಾಗೃತಿ ಪ್ರಶಸ್ತಿ ಮೊದಲಾದವು ದೊರೆತಿವೆ.
ಸಮಾಜದ ಎಲ್ಲಾ ವರ್ಗದವರಿಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಾನೂನು ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 2006 ರಲ್ಲಿ ಕಾನೂನು ಶಾಲೆ ಆರಂಭಿಸಿ, ಪ್ರತ್ಯೇಕ ಕಟ್ಟಡ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾನೂನು ಶಾಲೆಯ ಸಂಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ 600 ವಿದ್ಯಾರ್ಥಿಗಳಿದ್ದು, 30 ಮಂದಿ ಅತಿಥಿ ಬೋಧಕರಿದ್ದಾರೆ.