---
ಕನ್ನಡಪ್ರಭ ವಾರ್ತೆ ಮೈಸೂರುತಂತ್ರಜ್ಞಾನ ಬಳಕೆಯು ರಂಗಭೂಮಿಯ ಮೂಲ ಸಂಪ್ರಾದಾಯಕ್ಕೆ ಧಕ್ಕೆ ತರಲಿದೆ ಎಂದು ಕೆಲವರಲ್ಲಿ ಅಸಮಾಧಾನವಿದೆ. ಆದರೆ, ತಂತ್ರಜ್ಞಾನ ಎಂಬುದು ಒಂದು ಸಾಧನ. ಅದು ರಂಗಭೂಮಿಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಎಂದು ಕೇರಳದ ರಂಗ ನಿರ್ದೇಶಕ, ಕಲಾವಿನ್ಯಾಸಕ ಪ್ರೊ. ದೀಪನ್ ಶಿವರಾಮನ್ ತಿಳಿಸಿದರು.
ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ರಂಗಭೂಮಿ- ತತ್ವಜ್ಞಾನ, ತಂತ್ರಜ್ಞಾನ ಮತ್ತು ಅವುಗಳ ಸಾಂಸ್ಕೃತಿಕ ಪ್ರಭಾವ ಕುರಿತು ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ರಂಗಭೂಮಿ ಮತ್ತು ತಂತ್ರಜ್ಞಾನ ಗೋಷ್ಠಿಯಲ್ಲಿ ಮಾತನಾಡಿದರು.ರಂಗಭೂಮಿಯಲ್ಲಿ ತಂತ್ರಜ್ಞಾನ ಬಳಕೆ ಈಚೆಗೆ ಅಳವಡಿಸಿ ಕೊಂಡಿರುವುದಲ್ಲ, ಗ್ರೀಕ್ ಕಾಲದ ನಾಟಕಗಳಿಂದಲೂ ತಂತ್ರಜ್ಞಾನ ಬಳಕೆಯಾಗುತ್ತಿದೆ. ಈಗ ಹೊಸ ಅವಿಷ್ಕಾರಗಳೊಂದಿಗೆ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ರಂಗಭೂಮಿಯೆಂದರೆ ಹೀಗೆ ಇರಬೇಕು ಎಂಬ ಮನಸ್ಥಿತಿವುಳ್ಳವರು ತಂತ್ರಜ್ಞಾನ ಬಳಕೆಯ ಅಸಮಾಧಾನವಿದೆ. ಹೀಗಾಗಿ ರಂಗಭೂಮಿ ಮೂಲ ಸಂಪ್ರದಾಯಕ್ಕೆ ಧಕ್ಕೆಯಾಗಲಿದೆ ಎಂಬುದು ಅವರು ವಾದವಾಗಿದೆ ಎಂದು ಅವರು ಹೇಳಿದರು.
ಸಿನಿಮಾ ನೇರ ಪ್ರಸಾರದ ಮನರಂಜನೆ ಕಾರ್ಯಕ್ರಮವಲ್ಲ. ರಂಗಭೂಮಿಯಲ್ಲಿ ನೇರ ಪ್ರಸಾರವಾದದ್ದು. ಹೀಗಾಗಿ, ಇಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿಲು ತಂತ್ರಜ್ಞಾನ ಅವಶ್ಯ. ಹೀಗಾಗಿ, ತಂತ್ರಜ್ಞಾನವು ರಂಗಭೂಮಿ ಅವಿಭಾಜ್ಯವಾಗಿದೆ. ಕಳೆದ ಒಂದು ದಶಕದಲ್ಲಿ ರಂಗಭೂಮಿಯಲ್ಲಿ ಹೆಚ್ಚು ಬದಲಾವಣೆಯಾಗಿದೆ. ಅಂತರ್ಜಾಲ ಬಳಕೆಯಿಲ್ಲದೆ ಈಗೀನ ಜನ ಸಾಮಾನ್ಯರ ಜನರ ಜೀವನವಿಲ್ಲ ಎಂಬಂತೆ ರಂಗಭೂಮಿಯಲ್ಲಿ ತಂತ್ರಜ್ಞಾನವು ಬೆಸೆದುಕೊಂಡಿದೆ. ಮೊದಲು ನಾಟಕಗಳಲ್ಲಿ ಹೇಳಿದ್ದನ್ನೆ ಸತ್ಯವೆಂದು ನಂಬುತ್ತಿದ್ದರು. ನಾಟಕಕಾರರು ತತ್ವಜ್ಞಾನಿಗಳೆಂದು ನಂಬುತ್ತಿದ್ದರು. ಆದರೆ, ಈಗ ಅವರನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ರಂಗ ನಿರ್ದೇಶಕ ಸುರೇಶ್ ಅನಗಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿನ್ಯಾಸಕಾರ ಶಶಿಧರ ಅಡಪ, ರಂಗ ನಿರ್ದೇಶಕ, ನಟ ಶಕೀಲ್ ಅಹಮ್ಮದ್ ಇದ್ದರು.