ಗ್ರಾಮೀಣ ಮಹಿಳೆ ಸಮೂಹದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಆಮೂಲಾಗ್ರಹ ಬದಲಾವಣೆ ತರುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರಾ ಹೇಳಿದರು.
ಕಾರಟಗಿ: ಗ್ರಾಮೀಣ ಮಹಿಳೆ ಸಮೂಹದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಆಮೂಲಾಗ್ರಹ ಬದಲಾವಣೆ ತರುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರಾ ಹೇಳಿದರು.
ತಾಲೂಕಿನ ಮರ್ಲಾನಹಳ್ಳಿಯ ಲಕ್ಷ್ಮೀವೆಂಕಟೇಶ್ವರ ಸಭಾ ಭವನದಲ್ಲಿ ಶನಿವಾರ ನಡೆದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳಾ ಸಮಾವೇಶ ಮತ್ತು ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.
೧೨ ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಗೆ ಪಾದಾರ್ಪಣೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜಿಲ್ಲೆಯಲ್ಲಿ ಇದುವರೆಗೆ ೧೯ ಸಾವಿರ ಸ್ವಸ್ವಹಾಯ ಸಂಘಗಳನ್ನು ಸ್ಥಾಪಿಸಿ ೨ ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.
ಮಹಿಳೆಯರ ಬದುಕು ಬೆಳಗಿಸುವುದೇ ನಮ್ಮ ಉದ್ದೇಶ. ಕೇವಲ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ಕೆಲಸ ನಮ್ಮದಲ್ಲ ಎಂದರು.
ಉದ್ಯಮಿ ಕೆ.ಸಣ್ಣಸೂಗಪ್ಪ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಶಿವರೆಡ್ಡಿ ನಾಯಕ್, ಸಿದ್ದಣ್ಣ ಜಕ್ಕಲಿ, ರಮೇಶ ಕುಲಕರ್ಣಿ ಇವರು ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ, ಶಾಲೆಗಳಿಗೆ ಶಿಕ್ಷಕರ ಒದಗಣೆಯ ಮಂಜೂರಾತಿ ಪತ್ರ, ಆರೋಗ್ಯ ರಕ್ಷಾ ಕ್ಲೇಮ್‌ನ ಫಲಾನುಭವಿಗಳಿಗೆ ಚೆಕ್, ತೋಟಗಾರಿಕೆ, ಪುಷ್ಪ ಕೃಷಿ, ಸಸಿ ನಾಟಿ, ಕೃಷಿಯೇತರ ಸ್ವಉದ್ಯೋಗಿಗಳಿಗೆ ಮಂಜೂರಾದ ಅನುದಾನದ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.
ಶಿಕ್ಷಕಿ ಮೀನಾಕ್ಷಿ ರಾಮಸಿಂಗ್ ಕೌಟುಂಬಿಕ ಸಾಮರಸ್ಯದಲ್ಲಿ ಮಹಿಳೆಯರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ಕಾರಟಗಿ-ಕನಕಗಿರಿ ತಾಲೂಕಾ ಯೋಜನಾಧಿಕಾರಿ ಎಂ.ಕೆ ಕಾಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಗ್ರಾಪಂ ಅಧ್ಯಕ್ಷೆ ಲತಾ ಪ್ರತಾಪ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿ ಸುಬ್ಬಾರಾವ್, ಸೋಮನಾಥ್ ದೊಡ್ಡಮನಿ, ರೇಣುಕಾ ಜಗದೀಶ ಹೊಸಮನಿ, ಜ್ಞಾನ ವಿಕಾಸ ಕೇಂದ್ರಗಳ ಸಮನ್ವಯಾಧಿಕಾರಿ ಮಂಜುಳಾ, ಸುರೇಶ್, ವಿನಯ್, ನೂರು ಅಹ್ಮದ್, ತಾಲೂಕು ನೋಡಲ್ ಅಧಿಕಾರಿ ರಂಗಪ್ಪ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿಯರು ಮತ್ತು ಸದಸ್ಯರು, ಸೇವಾ ಪ್ರತಿನಿಧಿಗಳು ಮತ್ತು ಸಂಘಗಳ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.