ಪ್ರಾಜೆಕ್ಟ್ ನನ್ನೀರ್: ಮೂರು ಜಲಮೂಲಗಳ ಅಭಿವೃದ್ಧಿ

KannadaprabhaNewsNetwork |  
Published : Oct 02, 2026, 02:15 AM IST
 | Kannada Prabha

ಸಾರಾಂಶ

ಸುರಿದ ನೀರು ಅಂತರ್ಜಲ ಸೇರುವಂತೆ ಮಾಡುವಲ್ಲಿನ ಸೀಮಿತ ಸಾಮರ್ಥ್ಯ, ಸುರಿದ ನೀರು ಹರಿದುಹೋಗುವ ಕಾರಣಗಳಿಂದಾಗಿ ಹಳಿಯಾಳವು ಕಾಲಕಾಲಕ್ಕೆ ನೀರಿನ ಕೊರತೆ ಎದುರಿಸುತ್ತದೆ.

ಕಾರವಾರ: ಜಲಮೂಲಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಎಂಎಂ ಪ್ರತಿಷ್ಠಾನ ತನ್ನ ಪ್ರಾಜೆಕ್ಟ್ ನನ್ನೀರ್ ಯೋಜನೆಯ ಮೂಲಕ ಹಳಿಯಾಳದ ಮೂರು ಜಲಮೂಲಗಳನ್ನು ಪುನರುಜ್ಜೀವನ ಮಾಡಿದೆ,

ಹಳಿಯಾಳ ತಾಲೂಕಿನ ಮೂರು ಪ್ರಮುಖ ಜಲಮೂಲಗಳಾದ ತೇರಗಾಂವ ಗ್ರಾಮದ ಕುಂಬಾರಕೆರೆ, ಅಲ್ಲೋಳಿ ಹೊಂಡ ಮತ್ತು ಹನುಮಂತ ಹೊಂಡವನ್ನು ಅಭಿವೃದ್ಧಿಪಡಿಸಿ ಜಲ ಭದ್ರತೆಗೆ ಬಲ ತಂದುಕೊಟ್ಟಿದೆ ಹಾಗೂ ಸ್ಥಳೀಯ ಸಮುದಾಯಗಳಿಗೆ ಸುಸ್ಥಿರವಾದ ಜೀವನೋಪಾಯಕ್ಕೆ ನೆರವು ಒದಗಿಸಿದೆ ಎಂದು ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್ ಕಂಪನಿಯ ಸಿಇಒ ಹಾಗೂ ಪ್ರಾಜೆಕ್ಟ್ ನನ್ನೀರ್‌ನ ಅಧ್ಯಕ್ಷ ಮುತ್ತು ಮುರುಗಪ್ಪನ್ ಹೇಳಿದ್ದಾರೆ.

ನೈಋತ್ಯ ಮುಂಗಾರಿನ ಅವಧಿಯಲ್ಲಿ ವಾರ್ಷಿಕ 1,500 ಮಿಮೀಗಿಂತ ಹೆಚ್ಚು ಮಳೆ ಸುರಿದರೂ ಹಳಿಯಾಳ ತಾಲೂಕು ಆ ನೀರನ್ನು ಉಳಿಸಿಕೊಳ್ಳುವಲ್ಲಿ ಸವಾಲು ಎದುರಿಸುತ್ತಿದೆ. ಸುರಿದ ನೀರು ಅಂತರ್ಜಲ ಸೇರುವಂತೆ ಮಾಡುವಲ್ಲಿನ ಸೀಮಿತ ಸಾಮರ್ಥ್ಯ, ಸುರಿದ ನೀರು ಹರಿದುಹೋಗುವ ಕಾರಣಗಳಿಂದಾಗಿ ಹಳಿಯಾಳವು ಕಾಲಕಾಲಕ್ಕೆ ನೀರಿನ ಕೊರತೆ ಎದುರಿಸುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ರೂಪಿಸಲಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಇದರಿಂದಾಗಿ ಅಂದಾಜು 243 ಕುಟುಂಬಗಳಿಗೆ ಪ್ರಯೋಜನ ಆಗಲಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಈ ಕ್ರಮಗಳಿಂದಾಗಿ ಕೃಷಿ ಉದ್ದೇಶಗಳು ಹಾಗೂ ನಿತ್ಯದ ಅಗತ್ಯಗಳಿಗೆ ನೀರಿನ ಲಭ್ಯತೆ ಸುಧಾರಣೆ ಕಂಡು, 370ಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲ ಆಗಲಿದೆ ಎಂದು ಪಿಶುನಾಥ ದೇವೇಂದ್ರ ಮಿರಾಶಿ ಹಾಗೂ ನಾಗಪ್ಪ ಶಾಂತಪ್ಪ ಕಕ್ಕೇರಿ ಸಂತಸ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿ: ವೇದಮೂರ್ತಿ ಬಿ.ಎಸ್.
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ