ಕನ್ನಡಪ್ರಭ ವಾರ್ತೆ ಲೋಕಾಪುರ
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಭೂಸ್ವಾಧೀನಕ್ಕೆ ಸೂಕ್ತ ಬೆಲೆ ಘೋಷಿಸುವ ಮೂಲಕ ಸಿಎಂ ಸಿದ್ದರಾಮಯ್ಯನವರು ನುಡಿದಂತೆ ನಡೆದು ರೈತರ ಹಿತ ಕಾಪಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಲೋಕಾಪುರ, ಲಕ್ಷ್ಯಾನಟ್ಟಿ ಹಾಗೂ ಮಲ್ಲಾಪುರ ಕ್ರಾಸ್‌ನಲ್ಲಿ ರೈತರಿಂದ ಹಾಗೂ ಮುಳುಗಡೆ ಸಂತ್ರಸ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಸಚಿವ ಎಚ್.ಕೆ.ಪಾಟೀಲ ಸಹಕಾರದಿಂದ ಮತ್ತು ಶಾಸಕ ಜೆ.ಟಿ. ಪಾಟೀಲ, ಕೃಷ್ಣಾ ಮೇಲ್ದಂಡೆ ಯೋಜನೆ ಮುಳಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯವರ ಶಾಂತ ರೀತಿಯ ಹೋರಾಟಕ್ಕೆ ಪ್ರತಿಫಲ ದೊರೆತಿದೆ. ಸ್ವಾಧೀನಕ್ಕೆ ₹೭೦ ಸಾವಿರ ಕೋಟಿ ಹೊಂದಿಸಲು ಸಿಎಂ ಮತ್ತು ಡಿಸಿಎಂ ಅವರು ಎಲ್ಲ ಕೆಲಸ ಬದಿಗೊತ್ತಿಯಾದರೂ ಮತ್ತು ಇಲಾಖೆಗಳ ಅನುದಾನ ಕಡಿಮೆ ಮಾಡಿಯಾದರೂ ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ನ್ಯಾಯಾಲಯಕ್ಕೆ ಹೋಗದಂತೆ ರೈತರಿಗೆ ತಿಳಿಹೇಳುವ ಕೆಲಸ ಆಗಬೇಕು. ವಿರೋಧ ಪಕ್ಷದವರು ರೈತರನ್ನು ತಪ್ಪು ದಾರಿಗೆ ಎಳೆದು ತಂದು ರಾಜಕಾರಣ ಮಾಡಬೇಡಿ. ಇದರಿಂದ ರೈತರಿಗೆ ಹಾನಿಯಾಗುತ್ತದೆ ವಿನಃ ಯಾರಿಗೂ ಅನುಕೂಲ ಆಗುವುದಿಲ್ಲ ಎಂದು ಕಿವಿಮಾತು ಹೇಳಿದರು.ಮುಧೋಳ ಮತಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಿ ಶಕ್ತಿ ಮತ್ತು ಅಧಿಕಾರ ಕೊಟ್ಟಿದ್ದೀರಿ. ನಾನು ನಿಮ್ಮ ಸೇವಕನಾಗಿ ಕೆಲಸ ಮಾಡಿದ್ದೇನೆ. ರೈತರಿಗೆ ಮತ್ತು ಹೋರಾಟಗಾರರಿಗೆ ನ್ಯಾಯ ಕೊಡಿಸುವುದು ನನ್ನ ಜವಾಬ್ದಾರಿ ಪೂರ್ಣ ಮಾಡಿದ್ದೇನೆ. ನನಗೆ ಯಾವುದೇ ಕ್ರೆಡಿಟ್ ಬೇಡ ಎಂದು ಹೇಳಿದರು.
ಮುಳಗಡೆ ಸಂತ್ರಸ್ತ ಹೊಂದುವ ಗ್ರಾಮಗಳಾದ ಭಂಟನೂರ, ಬದ್ನೂರ, ಜುನ್ನೂರ, ಚಿಕ್ಕೂರ, ಚಿತ್ರಭಾನುಕೋಟಿ, ಹೆಬ್ಬಾಳ, ತಿಮ್ಮಾಪುರ, ಗುಲಗಾಲಜಂಬಗಿ ಕೆ.ಡಿ.ಬುದ್ನಿ, ಗಣಿ, ಅಂಬಲಝರಿ, ಕೊಲೂರ, ರಬಕವಿ, ಬೀಳಗಿ, ಬಾಗಲಕೋಟ ಮತ್ತು ಮುಧೋಳ ತಾಲೂಕಿನ ರೈತರು ಸಚಿವರನ್ನು ಸನ್ಮಾನಿಸಿ ಅಭಿನಂದಿಸಿದರು.ಮುಖಂಡರಾದ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಶಿವಾನಂದ ಉದಪುಡಿ, ಎಲ್.ಎಸ್. ತಳೇವಾಡ, ಗುರುರಾಜ ಉದಪುಡಿ, ಉದಯಸಿಂಗ್ ಪಡತಾರೆ, ವೆಂಕಪ್ಪ ಗಿಡ್ಡಪ್ಪನವರ, ಸಂಜಯ ತಳೇವಾಡ, ಭೀಮನಗೌಡ ಪಾಟೀಲ, ಕೆ.ಎನ್.ಪರಡ್ಡಿ, ರಾಜುಗೌಡ ನ್ಯಾಮಗೌಡ, ರಫೀಕ ಭೈರಕದಾರ, ಹೊಳಬಸು ದಂಡಿನ, ಮಹಾದೇವ ಹೊಸಟ್ಟಿ, ವೆಂಕಣ್ಣ ಅಂಕಲಗಿ, ಕೆ.ಡಿ.ಪಾಟೀಲ, ಸತೀಶಗೌಡ ನ್ಯಾಮಗೌಡ, ಮಹಾಂತೇಶ ಕಮತಗಿ, ಲಕ್ಷ್ಮಣ ಮಾಲಗಿ, ಹಣಮಂತ ಅಮ್ಮಲಝರಿ, ಮೊಹನ ಸೊನ್ನದ, ಲಕ್ಷ್ಮಣ ಸೊನ್ನದ, ಯಲ್ಲಪ್ಪ ಬಸುನಾಯಕ, ಲಕ್ಷö್ಮಣ ಬಸುನಾಯಕ, ಬೀರಪ್ಪ ಮಾಯಣ್ಣವರ, ಲೋಕಣ್ಣ ಉಳ್ಳಾಗಡ್ಡಿ, ಲೋಕಣ್ಣ ಪೂಜಾರ, ಕೃಷ್ಣಾ ಬಟಕುರ್ಕಿ, ಮುತ್ತಪ್ಪ ಚೌಧರಿ ವಿವಿಧ ಗ್ರಾಮಗಳ ರೈತರು, ಮುಳಗಡೆ ಸಂತ್ರಸ್ತರು, ಪಟ್ಟಣದ ಮುಖಂಡರು ಇದ್ದರು.
ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿದ್ದು, ನಾವು ಮುಳುಗುವುದರಿಂದ ₹5 ಲಕ್ಷ ಹೇಕ್ಟರ್ ಭೂಮಿ ನೀರಾವರಿಗೆ ಒಳಪಡುತ್ತದೆ. ಇದರಿಂದ ದೇಶಕ್ಕೆ ಆರ್ಥಿಕವಾಗಿ ಒಳ್ಳೆಯದಾಗುತ್ತದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ನಮ್ಮ ಪರವಾಗಿ ತೀರ್ಪು ಬಂದು ಹಲವಾರು ವರ್ಷಗಳಾಗಿವೆ. ಇದನ್ನು ಗೆಜೆಟ್ ಹೋರಡಿಸಬೇಕು ಎಂದು ಒತ್ತಾಯಿಸಿದರು.- ಆರ್.ಬಿ. ತಿಮ್ಮಾಪುರ ಜಿಲ್ಲಾ ಉಸ್ತುವಾರಿ ಸಚಿವರು