ಹಡಪದ ಅಪ್ಪಣ್ಣ ಸಮುದಾಯ ಭವನಕ್ಕೆ ಅನುದಾನದ ಭರವಸೆ

KannadaprabhaNewsNetwork |  
Published : Jul 23, 2024, 12:32 AM ISTUpdated : Jul 23, 2024, 12:33 AM IST
ಪಟ್ಟಣದ ತಹಶೀಲ್ದಾರ ಸಭಾ ಭವನದಲ್ಲಿ ತಾಲೂಕ ಆಡಳಿತ ಕಾರ್ಯಾಲಯದಲ್ಲಿ ತಾಲೂಕಾ ಆಡಳಿತ ನವಲಗುಂದ ವತಿಯಿಂದ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ ಜಯತ್ಯೊಂತ್ಸವ  ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವ ಮೂಲಕ ಶಾಸಕ ಎನ್ ಹೆಚ್ ಕೋನರಡ್ಡಿ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಸಣ್ಣ ಸಣ್ಣ ಸಮುದಾಯದ ಕೆಲಸ ಮಾಡುವುದು ನನ್ನ ಧರ್ಮ ಹಾಗೂ ಕರ್ತವ್ಯ. ತಮ್ಮ ಕುಲಕಸುಬನ್ನು ಕೆಲವರು ಮುಂದುವರಿಸಿದರೆ, ಉಳಿದವರು ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ.

ನವಲಗುಂದ:

ಹಡಪದ ಅಪ್ಪಣ್ಣನವರ ಸಮುದಾಯ ಭವನ ನಿರ್ಮಿಸುವ ತಮ್ಮ ಗುರಿಗೆ ನಾನು ಸಾತ್ ನೀಡುತ್ತೇನೆ. ಅದರ ಕಾಗದ ಪತ್ರ ಸರಿಪಡಿಸಿಕೊಂಡು ಬನ್ನಿ, ಅನುದಾನ ಕೊಡಿಸುವ ಜವಾಬ್ದಾರಿ ನನ್ನದು ಎಂದು ಶಾಸಕ ಎನ್‌.ಎಚ್. ಕೋನರಡ್ಡಿ ಭರವಸೆ ನೀಡಿದರು.

ಪಟ್ಟಣದ ತಹಸೀಲ್ದಾರ್‌ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಣ್ಣ ಸಣ್ಣ ಸಮುದಾಯದ ಕೆಲಸ ಮಾಡುವುದು ನನ್ನ ಧರ್ಮ ಹಾಗೂ ಕರ್ತವ್ಯ. ತಮ್ಮ ಕುಲಕಸುಬನ್ನು ಕೆಲವರು ಮುಂದುವರಿಸಿದರೆ, ಉಳಿದವರು ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡಿ ಎಂದು ಕರೆ ನೀಡಿದರು.

ಗವಿಮಠದ ಶ್ರೀಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಸುಧೀರ್ ಸಾವಕಾರ, ಇಒ ಭಾಗ್ಯಶ್ರೀ ಜಾಗೀರದಾರ, ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಹಡಪದ ಸಮಾಜದ ಅಧ್ಯಕ್ಷ ಈರಣ್ಣ ಹಡಪದ, ಸುರೇಶ ಹಡಪದ, ಮಲ್ಲಪ್ಪ ಕುರಹಟ್ಟಿ, ಅರುಣಕುಮಾರ ಮಜ್ಜಗಿ, ಬಿ.ಟಿ. ಹಡಪದ, ಎಸ್‌.ಟಿ. ಹಡಪದ, ಪರಶುರಾಮ, ಮಹಾಲಿಂಗಪ್ಪ ಹಡಪದ, ಬಸಪ್ಪ ಹಡಪದ, ಶಿವಪುತ್ರಪ್ಪ ಹಿಂದಿನಮನಿ, ಮಲ್ಲಪ್ಪ ಹಡಪದ, ಅರ್ಜುನ ಹಡಪದ, ತಿಪ್ಪಣ್ಣ ಹಡಪದ, ಉಳವಪ್ಪ ಹಡಪದ, ಹನುಮಂತಪ್ಪ ಇಟಗಿ, ವಸಂತ ಹಡಪದ, ವನಕೆರಪ್ಪ ಹಡಪದ, ಕಲ್ಲಪ್ಪ ಹಡಪದ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ