ಕೂಡಲೇ ವೇತನ ಪಾವತಿ: ಅತಿಥಿ ಉನ್ಯಾಸಕರಿಗೆ ನೂತನ ಕುಲಪತಿ ಭರವಸೆ

KannadaprabhaNewsNetwork | Published : Mar 8, 2024 1:48 AM

ಸಾರಾಂಶ

ಮಂಗಳೂರು ವಿಶ್ವ ವಿದ್ಯಾನಿಲಯದ ನೂತನ ಕುಲಪತಿ ಪ್ರೊ. ಪಿ. ಎಲ್ ಧರ್ಮ ಅವರು ಗುರುವಾರ ಮಡಿಕೇರಿಯ ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಸಮಸ್ಯೆಗಳನ್ನು ಆಲಿಸಿದ ಅವರು, ಆದಷ್ಟು ಬೇಗ ವೇತನ ಪಾವತಿಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಆದರೆ ಉಪನ್ಯಾಸ ಸ್ಥಗಿತಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಮಡಿಕೇರಿ

ವೇತನ ಪಾವತಿಗಾಗಿ ಆಗ್ರಹಿಸಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಅತಿಥಿ ಉಪನ್ಯಾಸಕರ ಧರಣಿ ಗುರುವಾರವೂ ಮುಂದುವರಿದಿದ್ದು, ಏಳನೆ ದಿನ ಪೂರೈಸಿತು.

ಮಂಗಳೂರು ವಿಶ್ವ ವಿದ್ಯಾನಿಲಯದ ನೂತನ ಕುಲಪತಿ ಪ್ರೊ. ಪಿ. ಎಲ್ ಧರ್ಮ ಅವರು ಪ್ರತಿಭಟನಾ ನಿರತ ಉಪನ್ಯಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಸಮಸ್ಯೆಗಳನ್ನು ಆಲಿಸಿದ ಅವರು, ಆದಷ್ಟು ಬೇಗ ವೇತನ ಪಾವತಿಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ ಧರಣಿ ಹಿಂತೆಗೆದುಕೊಳ್ಳಲು ಮನವಿ ಮಾಡಿದರು. ನಂತರ ಮನವಿ ಬಗ್ಗೆ ಚರ್ಚೆ ನಡೆಸಿದ ಉಪನ್ಯಾಸಕರು, ವೇತನ ಪಾವತಿ ವ್ಯವಸ್ಥೆಯಲ್ಲಿ ಹಲವು ಗೊಂದಲಗಳು ಇರುವುದರಿಂದ, ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುವ ಅಧಿಕಾರಿಗಳೊಂದಿಗೆ ಮಾತುಕತೆಯ ಮೂಲಕ ಮಾತ್ರ ಒಂದು ನಿರ್ಧಾರಕ್ಕೆ ಬರಲು ಸಾಧ್ಯ ಎನ್ನುವ ಕಾರಣದಿಂದ ಪ್ರತಿಭಟನೆ ಮುಂದುವರಿಸಿದರು. ವಿದ್ಯಾರ್ಥಿಗಳು ತರಗತಿಗಳು ನಡೆಯದೇ ಇರುವುದರಿಂದ ಚಿಂತಿತರಾಗಿ ಗುರುವಾರ ಉಪನ್ಯಾಸಕರ ಜೊತೆಯಲ್ಲಿ ಮಾತನಾಡಿ ಅವರ ಸಂಕಷ್ಟಗಳನ್ನು ಆಲಿಸಿ ಧರಣಿಗೆ ಬೆಂಬಲ ಸೂಚಿಸಿದರು.ಮಡಿಕೇರಿ: ಆರನೇ ದಿನಕ್ಕೆ ಅತಿಥಿ ಉಪನ್ಯಾಸಕರ ಪ್ರತಿಭಟನೆಬುಧವಾರ ನಡೆದ ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ‌. ಮಾಧವ ಆಗಮಿಸಿ ಬೆಂಬಲ ಸೂಚಿಸಿದರು.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ನೇಮಕಗೊಂಡ ಕುಲಪತಿಗಳಿಗೆ ಸಂಘದ ಪರವಾಗಿ ಗುರುವಾರ ಮನವಿ ಸಲ್ಲಿಸಲಾಗುವುದು. ಆದಷ್ಟು ಬೇಗ ವೇತನ ಬಿಡುಗಡೆಗೆ ಒತ್ತಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಅತಿಥಿ ಉಪನ್ಯಾಸಕರು ತಿಳಿಸಿದರು.ನವೆಂಬರ್ ತಿಂಗಳ ಸಂಬಳ ಬುಧವಾರ ನಮ್ಮ ಖಾತೆಗೆ ಜಮೆ ಆಗಿದೆ. ನಮ್ಮ ಬೇಡಿಕೆ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದೇವೆ. ಉಳಿದ ತಿಂಗಳ ವೇತನ ಪಾವತಿ ಆಗುವವರೆಗೂ ಧರಣಿ ಮುಂದುವರಿಯುತ್ತದೆ. ಕೊರೋನಾ ಅವಧಿಯ 3 ತಿಂಗಳ ವೇತನವನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕೊಡಬೇಕು ಎಂದು ಲಿಖಿತರೂಪದ ಭರವಸೆ ಬಯಸಿದ್ದೇವೆ ಎಂದು ಅತಿಥಿ ಉಪನ್ಯಾಸಕರು ತಿಳಿಸಿದ್ದಾರೆ.ಅತಿಥಿ ಉಪನ್ಯಾಸಕರು ಕಳೆದ ಆರು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಕ್ಷೇತ್ರದ ಶಾಸಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಿಲ್ಲ. ಇತ್ತೀಚೆಗೆ ಸಂಸದ ಪ್ರತಾಪ ಸಿಂಹ ಭೇಟಿ ನೀಡಿದ್ದರು.

Share this article