ಹಿರಿಯೂರು: ಮುಖ್ಯಮಂತ್ರಿಗಳು ತಮ್ಮ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ಮಾದಿಗ ಸಮುದಾಯದ ವಕೀಲರ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡದಿದ್ದಲ್ಲಿ ಇಲ್ಲವೇ ಅನಗತ್ಯ ಕಾರಣಗಳನ್ನು ನೀಡಿ ಜಾರಿ ವಿಳಂಬ ಮಾಡಿದರೆ ಸರ್ವೋಚ್ಚ ನ್ಯಾಯಾಲಯದ ಸಂವಿಧಾನಿಕ ಪೂರ್ಣ ಪೀಠದ ತೀರ್ಪನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕಾನೂನು ರೀತ್ಯಾ ಹೋರಾಟ ಮಾಡಲು ಮಾದಿಗ ಸಮುದಾಯ ಸಿದ್ಧವಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾದಿಗ ವಕೀಲರ ವೇದಿಕೆಯ ಟಿ.ದ್ರುವಕುಮಾರ್, ನಾಗರಾಜ್ ಮಾಳಗೊಂಡನಹಳ್ಳಿ, ತಿಪ್ಪೇಸ್ವಾಮಿ ಮಲ್ಲಪ್ಪನಹಳ್ಳಿ, ಕೆ.ರಾಜಪ್ಪ ಮಸ್ಕಲ್, ಮರಡಿಹಳ್ಳಿ ರಮೇಶ್, ಕೆ.ಪಿ.ರಾಘವೇಂದ್ರ ಸ್ವಾಮಿ, ರಂಗಸ್ವಾಮಿ ಬಬ್ಬೂರು, ಎಂ.ಬಿ.ರವಿ, ಅಕ್ಷತಾ, ಪ್ರಕಾಶ್ ಮುಂತಾದವರು ಹಾಜರಿದ್ದರು.