ಬಹುತ್ವದ ಪ್ರತಿಪಾದಕ ಬರಗೂರು ರಾಮಚಂದ್ರಪ್ಪ: ಡಾ. ನಿಂಗಪ್ಪ

KannadaprabhaNewsNetwork | Published : Mar 19, 2024 12:52 AM

ಸಾರಾಂಶ

ಕನ್ನಡ ಸಾಹಿತ್ಯದ ಸಾಂಪ್ರದಾಯಕತೆಯನ್ನು ಮೀರಿ ನಿಂತವರು ದಲಿತ-ಬಂಡಾಯದ ಲೇಖಕರು. ಹೊಸದೊಂದು ಬದುಕು ಕಟ್ಟಿಕೊಡುವಲ್ಲಿ ಅಕ್ಷರ ದುಡಿಸಿಕೊಂಡವರಲ್ಲಿ ಬರಗೂರು ರಾಮಚಂದ್ರಪ್ಪ ಪ್ರಮುಖರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕನ್ನಡ ಸಾಹಿತ್ಯದ ಸಾಂಪ್ರದಾಯಕತೆಯನ್ನು ಮೀರಿ ನಿಂತವರು ದಲಿತ-ಬಂಡಾಯದ ಲೇಖಕರು. ಹೊಸದೊಂದು ಬದುಕು ಕಟ್ಟಿಕೊಡುವಲ್ಲಿ ಅಕ್ಷರ ದುಡಿಸಿಕೊಂಡವರಲ್ಲಿ ಬರಗೂರು ರಾಮಚಂದ್ರಪ್ಪ ಪ್ರಮುಖರು ಎಂದು ಡಾ. ಮುದೇನೂರು ನಿಂಗಪ್ಪ ಅಭಿಪ್ರಾಯಪಟ್ಟರು.

ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಹಮ್ಮಿಕೊಂಡ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪನವರ ಸಾಹಿತ್ಯ ಕುರಿತು ಮಾತನಾಡಿದರು.

ಬರಗೂರು ರಾಮಚಂದ್ರಪ್ಪ ಅವರು ದಲಿತ, ಸಮುದಾಯ, ಸಮಾಜ, ಕಾರ್ಮಿಕರ ದನಿಯಾಗಿ ಕಳೆದ ಐವತ್ತು ವರ್ಷಗಳಿಂದ ದುಡಿಯುತ್ತಿದ್ದಾರೆ. ಕನ್ನಡ, ಕನ್ನಡ ಸಂಸ್ಕೃತಿಯಲ್ಲದೆ ಬೆವರೇ ನನ್ನ ದೇವರು ಎಂದು ಹೆಳಿದ್ದಲ್ಲದೆ. ದೂರದ ಗಂಧದ ಮರ ನನಗೇ ಬೇಕಿಲ್ಲ. ನನ್ನ ಹಟ್ಟಿಯಲ್ಲಿರುವ ಜಾಲ ಮರವೇ ನನಗೆ ಗಂಧದ ಮರವಿದ್ದಂತೆ. ಕಾಗೆ ಕಾರುಣ್ಯವನ್ನು ಪ್ರತಿಪಾದಿಸಿದ ಬರಗೂರ ಬ್ರಹ್ಮಪುತ್ರ, ಗಂಗಾ ನದಿಗಳು ಶ್ರೇಷ್ಠ ಯಾಕೆ ನನ್ನೂರಿನ ಹಳ್ಳಕೊಳ್ಳಗಳೇ ಶ್ರೇಷ್ಠ ಎಂದು ಪ್ರತಿಪಾದಿಸಿದ ಬಹುದೊಡ್ಡ ಕವಿಯಾಗಿದ್ದಾರೆ. ಅಲ್ಲದೆ ಕನ್ನಡ ಸಾಹಿತ್ಯವನ್ನು ಶೂದ್ರ, ದಲಿತ ಕಣ್ಣಿನಿಂದ ನೋಡುವ ಮೂಲಕ ತಳವರ್ಗದ ತಾಯಿಯಾಗುವ ಗುಣ ಬರಗೂರರ ಬರೆಹದಲ್ಲಿ ಎದ್ದ ಕಾಣುತ್ತದೆ ಎಂದರು.

ಭೋಗದ ಲಾಲಸೆ ಹೆಣ್ಣು, ಹಸಿವುಗಳನ್ನು ಅಪಮಾನಗೊಳಿಸುತ್ತದೆ. ಇದನ್ನು ಮೀರಿ ಲೇಖಕ ಬರೆಯಬೇಕು ಬೆಳೆಯ ಬೇಕು ಎಂದು ಮುದೇನೂ ನಿಂಗಪ್ಪ ಹೇಳಿದರು. ಕೋಗಿಲೆ ಮಾತ್ರ ಶ್ರೇಷ್ಠವಲ್ಲ ಕಾಗೆಯೂ ಶ್ರೇಷ್ಠ ಯಾಕೆಂದರೆ ಕಾಗೆ ಅದು ಬಹುಸಂಸ್ಕøತಿಯನ್ನು ಪ್ರತಿಪಾದಿಸುದೆ. ಶ್ರಮವೇ ಸಂಸ್ಕøತಿ ಎಂಬುದು ಬರಗೂರ ಬಹು ಮುಖ್ಯ ಆಶಯವಾಗಿದೆ ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದ ಡಾ. ನಾಗೇಂದ್ರ ಮಸೂತಿ ಅವರು ಕಾವ್ಯ ಸೃಜಿಸುವುದು ಬಹಳ ಸುಲಭವಲ್ಲ ಅದೊಂದು ತಪಸ್ಸು ಎಂದರು. ಮುಂದುವರೆದು ನಾನು ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು ಇದೇ ವೇದಿಕೆಯಲ್ಲಿ ನನಗೆ ಸನ್ಮಾನ ದೊರೆತಿರುವುದು ತುಂಬ ಸಂತಸವನ್ನುಂಟು ಮಾಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಅಕ್ಷರದ ಮೂಲಕ ಜನರ ಬದುಕನ್ನು ಬದಲಿಸುವ ಕನಸು ಕಂಡವರು ಬರಗೂರ ರಾಮಂಚ್ರಪ್ಪ. ಸಾಹಿತ್ಯ ಸಂಸ್ಕೃತಿ ಚಿಂತಕರಾಗಲು ಸುಲಭ ಮಾರ್ಗ ಯಾವುದು ಇಲ್ಲ, ಅದೇನಿದ್ದರು ತಪ್ಪಸ್ಸು ಮಾಡಿದಾಗ ಮಾತ್ರ ಎಲ್ಲವೂ ದೊರೆಯಲು ಸಾಧ್ಯವೆಂದರು. ಡಾ. ಕುರುಣಾ ಜಮದರಖಾನಿ ನಿರೂಪಿಸಿದರು, ಡಾ. ಶಿವಶರಣ್ಪ ಕೋಡ್ಲಿ ಸ್ವಾಗತಿಸಿದರು, ಡಾ. ಪ್ರೇಮಾ ಅಪಚಂದ ವಂದಿಸಿದರು.

Share this article