ಪಟ್ಟಣದಲ್ಲಿ ವೈದ್ಯಕೀಯ ಕಾಲೇಜಿಗೆ ಬೇಕಾಗಿರುವ ಸುಮಾರು ೫೦ ಎಕರೆ ಜಾಗವನ್ನು ಈಗಾಗಲೇ ತಾಲೂಕಿನ ಎರಡು ಕಡೆ ಗುರುತಿಸಿ ಮೀಸಲಿಟ್ಟಿದ್ದೇನೆ. ಈ ಬಗ್ಗೆ ಬುಧವಾರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ಪಟ್ಟಣದಲ್ಲಿ ವೈದ್ಯಕೀಯ ಕಾಲೇಜಿಗೆ ಬೇಕಾಗಿರುವ ಸುಮಾರು ೫೦ ಎಕರೆ ಜಾಗವನ್ನು ಈಗಾಗಲೇ ತಾಲೂಕಿನ ಎರಡು ಕಡೆ ಗುರುತಿಸಿ ಮೀಸಲಿಟ್ಟಿದ್ದೇನೆ. ಈ ಬಗ್ಗೆ ಬುಧವಾರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ಸೋಮವಾರ ನಗರದಲ್ಲಿ ಸುಮಾರು ೧.೨೫ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಖಾಸಗಿ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. ಶಿರಾ ನಗರವು ಶಿಕ್ಷಣ, ಕೈಗಾರಿಕೆ, ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದೆ, ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರಬೇಕೆಂಬ ಗುರಿ ಹೊಂದಿದ್ದೇನೆ. ತಾಲೂಕು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿ ವೈದ್ಯಕೀಯ ಕಾಲೇಜು ಮಾಡಿದರೆ ಈ ಭಾಗದ ಜನತೆಗೂ ಅನುಕೂಲವಾಗಲಿದೆ ಎಂದರು. ಶಿರಾ ನಗರದಲ್ಲಿ ಬಹಳ ದಿನಗಳಿಂದ ಖಾಸಗಿ ಬಸ್ ನಿಲ್ದಾಣ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಸುಮಾರು ೧.೨೫ ಕೊಟಿ ವೆಚ್ಚದಲ್ಲಿ ಅತ್ಯಂತ ಉತ್ತಮ ಗುಣಮಟ್ಟದಲ್ಲಿ ಬಸ್ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗಿದೆ. ಇದನ್ನು ಸಾರ್ವಜನಿಕರು ಇಲ್ಲಿನ ಅಂಗಡಿ ಮಾಲೀಕರುಗಳು, ಬಸ್ ನಿಲ್ದಾಣದ ವ್ಯಾಪಾರಿಗಳು, ಬಸ್ ಮಾಲೀಕರು, ನಿರ್ವಾಹಕರುಗಳು ಇಲ್ಲಿ ಶುಚಿತ್ವ ಕಾಪಾಡಬೇಕು ಎಂದರು.
ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಮಾತನಾಡಿ ಕ್ಷೇತ್ರ ಶಾಸಕರಾದ ಟಿ.ಬಿ.ಜಯಚಂದ್ರ ಹಾಗೂ ನಗರಸಭೆಯ ಸರ್ವ ಸದಸ್ಯರ ಒಪ್ಪಿಗೆ ಸಲಹೆ ಸೂಚನೆ ಮೇರೆಗೆ ಖಾಸಗಿ ಬಸ್ ನಿಲ್ದಾಣವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ನಗರದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಶೀಘ್ರದಲ್ಲಿಯೇ ನಗರದ ಐಡಿಎಸ್‌ಎಂಟಿ ಸ್ಥಳದಲ್ಲಿ ಅಂಗಡಿ ಮಳಿಗೆಗಳು ಹಾಗೂ ಫುಟ್ ಕೋರ್ಟ್ ನಿರ್ಮಾಣ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ನಗರಸಭೆಯ ಎಲ್ಲಾ ಎಂಜಿನಿಯರ್‌ಗಳಿಗೂ ಸನ್ಮಾನಿಸಲಾಯಿತು. ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ನಗರಸಭೆ ಸದಸ್ಯರಾದ ಆರ್ ರಾಮು, ಬುರಾನ್ ಮೊಹಮದ್, ತೇಜು ಬಾನು ಪ್ರಕಾಶ್, ಉಮಾ ವಿಜಯರಾಜ್, ಎಸ್ ಎಲ್ ರಂಗನಾಥ್, ಶಂಕರಪ್ಪ, ಸ್ವಾತಿ ಮಂಜೇಶ್, ಪೂಜಾ ಪೆದ್ದರಾಜು, ಬಿ.ಎಂ ರಾಧಾಕೃಷ್ಣ, ಮಹೇಶ್, ಧ್ರುವ ಕುಮಾರ್, ಸುಶೀಲ ವಿರೂಪಾಕ್ಷ, ಪೌರಾಯುಕ್ತ ರುದ್ರೇಶ್.ಕೆ, ಆರ್.ರಾಘವೇಂದ್ರ, ವಾಜರಹಳ್ಳಿ ರಮೇಶ್, ಜಯಲಕ್ಷ್ಮೀ, ನೂರುದ್ದೀನ್, ಮಂಜುನಾಥ್, ಗುಳಿಗೇನಹಳ್ಳಿ ನಾಗರಾಜ್, ಗುರುಮೂರ್ತಿ ಗೌಡ, ಪಿಬಿ ನರಸಿಂಹಯ್ಯ, ಮಂಜುಳ ಬಾಯಿ, ಮುಖಂಡರಾದ ವಿಜಯಕುಮಾರ್, ಕೋಟೆ ಲೋಕೇಶ್, ಗುತ್ತಿಗೆದಾರ ಕುರುಬರಹಳ್ಳಿ ಚಂದ್ರಣ್ಣ ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.