ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಪ್ರವಾಸಿಮಂದಿರವು ೧೯೬೩ರಲ್ಲಿ ನಿರ್ಮಾಣವಾಗಿದ್ದು, ಹಳೆಯ ಕಟ್ಟಡವಾಗಿದೆ. ಈ ಪ್ರವಾಸಿ ಮಂದಿರವು ನೆಲಮಹಡಿ, ಮೊದಲನೇ ಮಹಡಿಯನ್ನು ಒಳಗೊಂಡಿದ್ದು, ವಿಐಪಿ-೩, ವಿವಿಐಪಿ-೧ ಹಾಗೂ ಇತರೆ ೧೫ ಕೊಠಡಿಗಳನ್ನು ಹೊಂದಿದೆ. ನಗರವು ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರು-ಮೈಸೂರು ಮಾರ್ಗ ಮಧ್ಯೆ ಇರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿಗೆ ಹೆಚ್ಚಾಗಿ ಬರುತ್ತಿದ್ದಾರೆ. ಪ್ರವಾಸಿಮಂದಿರವು ತುಂಬಾ ಹಳೆಯದಾಗಿರುವ ಕಾರಣ ಇಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಹೊಸ ಪ್ರವಾಸಿ ಮಂದಿರದ ವಿವರಗಳು:ಪ್ರವಾಸಿಮಂದಿರ ನಿವೇಶನದ ವಿಸ್ತೀರ್ಣ ೨ ಎಕರೆ ೩೦ ಗುಂಟೆ. ಹೊಸ ಪ್ರವಾಸಿಮಂದಿರವನ್ನು ಹಾಲಿ ಇರುವ ಪ್ರವಾಸಿ ಮಂದಿರದ ಮುಂದಿರುವ ಖಾಲಿ ಜಾಗದಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ನೆಲಮಹಡಿ ೫೨೦೦ ಚ.ಮೀ., ವಿವಿಐಪಿ ಕೊಠಡಿ-೨, ಸಾಮಾನ್ಯ ಕೊಠಡಿ-೨, ಕಚೇರಿ ಕೊಠಡಿ-೧, ಸಭಾಂಗಣ-೧. ಮೊದಲನೇ ಮಹಡಿ ೫೩೫ ಚ.ಮೀ. ವಿವಿಐಪಿ ಕೋಣೆ-೧, ವಿವಿಐಪಿ ಕೊಠಡಿ-೧, ಸಾಮಾನ್ಯ ಕೊಠಡಿ-೨, ನಿರೀಕ್ಷಣಾ ಕೊಠಡಿ, ಸಭಾಂಗಣ-೧. ಎರಡನೇ ಮಹಡಿ ೫೦೦ ಚ.ಮೀ., ೩ ವಿವಿಐಪಿ ಕೊಠಡಿ, ೧ ಕೊಠಡಿ- ನಿರೀಕ್ಷಣಾ ಕೊಠಡಿ. ಪೀಠೋಪಕರಣಗಳು, ಒಳಾಂಗಣ ರಸ್ತೆ, ಆವರಣ ಗೋಡೆ.