ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಕುಮ್ಮೂರು ಗ್ರಾಮದಲ್ಲಿ ಸೋಮವಾರ ಶ್ರೀ ಆಂಜನೇಯ ಮತ್ತು ಬಸವೇಶ್ವರ ದೇವರ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಮಾರುತಿ ಬಯಲಾಟ ಮಂಡಲಿ ಏರ್ಪಡಿಸಿದ್ದ ಭೀಮಾರ್ಜುನರ ಕಾಳಗ ದೊಡ್ಡಾಟದ ಭಾಗವತಿಗೆ ನಡೆಸಿ ಅವರು ಮಾತನಾಡಿದರು.
ಕಲೆ, ಕಲಾವಿದ ಉಳಿಯಬೇಕು. ಈ ನಿಟ್ಟಿನಲ್ಲಿ ಬೆಳೆಸಿ, ಪ್ರೋತ್ಸಾಹಿಸುವ ಹೃದಯ ಶ್ರೀಮಂತಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ಜನಪದೀಯ ಮೂಲಬೇರು ಗ್ರಾಮೀಣ ಭಾಗದಲ್ಲಿ ಅಡಗಿದೆ. ಅದನ್ನು ಆಹ್ವಾದಿಸುವ ಮನಸ್ಸುಗಳು ಆಧುನಿಕತೆಯ ನೆಪದಲ್ಲಿ ಕವಲು ದಾರಿಯಲ್ಲಿ ಹೊರಳಿವೆ. ಹಳೇ ತಲೆಮಾರು ಮರೆಯಾಗುವ ಮುನ್ನ ಯುವಜನತೆ ಗ್ರಾಮೀಣ ಕಲೆಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.ತಂದೆ ಕುಮ್ಮೂರು ರಂಗಪ್ಪ ಅವರ ಸಮಕಾಲೀನ ಅನೇಕರು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕೆಲವರಿಗೆ ರಾಜ್ಯಮಟ್ಟದ ಪುರಸ್ಕಾರವೂ ದೊರೆತಿದೆ. ಒಂದು ಕಾಲದಲ್ಲಿ ಈ ನೆಲೆಯ ಸಂಸ್ಕೃತಿಯ ಛಾಪು ಮೂಡಿಸಿದ್ದ ಬಯಲಾಟಕ್ಕೆ ಈಗಿನ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.
ದೊಡ್ಡಾಟದ ಮ್ಯಾನೇಜರ್ ಶಿವುಕುಮಾರ್ ಗೌಡ, ಸಂಘದ ಅಶೋಕ್, ಸಹಾಯಕ ಶಿವು ಮತ್ತು ಸೋಮು ಗೌಡ, ಗ್ರಾಮಸ್ಥರು ಹಾಜರಿದ್ದರು.
ಸೊರಬ ತಾಲೂಕಿನ ಕುಮ್ಮೂರು ಗ್ರಾಮದಲ್ಲಿ ಶ್ರೀ ಆಂಜನೇಯ ಮತ್ತು ಬಸವೇಶ್ವರ ದೇವರ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಮಾರುತಿ ಬಯಲಾಟ ಮಂಡಲಿ ಏರ್ಪಡಿಸಿದ್ದ ಭೀಮಾರ್ಜುನರ ಕಾಳಗ ದೊಡ್ಡಾಟ ಪ್ರದರ್ಶನಗೊಂಡಿತು.