ರಾಜ್ಯದ ೨೨೩ ಪ್ರದೇಶ ಬರಪೀಡಿತ
ಪಶುಸಂಗೋಪನೆ ಇಲಾಖೆಯವರು ಬರಗಾಲದ ತೀವ್ರತೆಯನ್ನು ಅರಿತು ಜಾನುವಾರು ಹಿತವನ್ನು ಕಾಪಾಡಿ ರೈತರಿಗೆ ರಕ್ಷಣೆ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಿ.ಎಚ್.ನಾರಾಯಣಗೌಡ ಮನವಿ ಮಾಡಿದರು.
ಪಶುಸಂಗೋಪನೆ ಇಲಾಖೆಯವರು ಬರಗಾಲದ ತೀವ್ರತೆಯನ್ನು ಅರಿತು ಜಾನುವಾರು ಹಿತವನ್ನು ಕಾಪಾಡಿ ರೈತರಿಗೆ ರಕ್ಷಣೆ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಿ.ಎಚ್.ನಾರಾಯಣಗೌಡ ಮನವಿ ಮಾಡಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ಕರ್ನಾಟಕ ರಾಜ್ಯದಲ್ಲಿ ೨೦೨೩-೨೪ನೇ ಸಾಲಿನಲ್ಲಿ ರಾಜ್ಯವು ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ರಾಜ್ಯದ ೨೨೩ ಪ್ರದೇಶ ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಬರಗಾಲದಿಂದ ರಾಜ್ಯದಲ್ಲಿರುವ ಅಂದಾಜು ೧ ಕೋಟಿ ೧೫ ಲಕ್ಷ ಇವೆ. ಇವುಗಳಿಗೆ ಮೇವಿನ ಕೊರತೆ, ಹಸಿರು ಮೇವು, ಕುಡಿಯಲು ನೀರು ಬಹಳ ಅವಶ್ಯಕತೆ ಇರುತ್ತದೆ. ಸರ್ಕಾರವು ಹಸಿರು ಮೇವು ಉತ್ಪಾದನೆ ಮಾಡಲು ಮೇವು ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ ಎಂದು ಹೇಳುತ್ತಿದೆ. ಆದರೆ ಈ ಕಾರ್ಯಕ್ರಮವು ಸಮರ್ಪಕವಾಗಿ ಅನುಷ್ಠಾನಗೊಂಡಿರುವುದಿಲ್ಲ’ ಎಂದು ತಿಳಿಸಿದರು.
‘ಜಿಲ್ಲಾ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ರೈತರಿಗೆ ಜಾಗೃತಿ ಮತ್ತು ಮಾಹಿತಿಯನ್ನು ನೀಡಲು ಸಹ ವಿಫಲರಾಗಿರುತ್ತಾರೆ. ಆದ್ದರಿಂದ ನಮ್ಮ ಜಿಲ್ಲೆಯ ಪಶುಸಂಗೋಪನೆ ಇಲಾಖೆಯವರು ಇದರ ತೀವ್ರತೆಯನ್ನು ಮನಗೊಂಡು ಜಾನುವಾರು ಹಿತವನ್ನು ಕಾಪಾಡಿ ಈ ಮೂಲಕ ರೈತರಿಗೆ ರಕ್ಷಣೆ ನೀಡಬೇಕು ಎಂದು ನಾವು ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾದ ಮಹೇಶ್, ಪಾಪಣ್ಣ, ನಟರಾಜು ಇತರರು ಇದ್ದರು.