ಕನ್ನಡಪ್ರಭ ವಾರ್ತೆ ಹಾವೇರಿ
ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು.ಪ್ರತಿ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್ ಹೇಳಿದರು.ನವದೆಹಲಿ ಕೈಲಾಸ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಹಾಗೂ ಚೈತನ್ಯ ರೂರಲ್ ಡೆವಲಪಮೆಂಟ್ ಸೊಸೈಟಿ ವತಿಯಿಂದ ಕರ್ಜಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಜರುಗಿದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲ್ಯ ವಿವಾಹ ಮುಕ್ತ ಭಾರತದ ಜತೆಗೆ ಬಾಲ್ಯ ವಿವಾಹ ಮುಕ್ತ ಹಾವೇರಿಯನ್ನಾಗಿ ಮಾಡಲು ಎಲ್ಲರೂ ಸಂಕಲ್ಪಮಾಡೋಣ.ಮದುವೆ ಮಾಡಲು ಯುವತಿಗೆ ೧೮ ವರ್ಷ ಹಾಗೂ ಯುವಕರಿಗೆ ೨೧ವರ್ಷ ಆಗಿರಬೇಕು. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ ಎಂದರು.ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಹಯಾತ್ ದಖನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಲಯ ಮೇಲ್ವಿಚಾರಕಿ ರೇಣುಕಾ ತಳವಾರ ಉಪಸ್ಥಿತರಿದ್ದರು. ಮಕ್ಕಳ ಸಹಾಯವಾಣಿಯ ಆಪ್ತ ಸಮಾಲೋಚಕ ರಮೇಶ್ ನಾಯಕ ಸ್ವಾಗತಿಸಿದರು.ಪ್ರವೀಣ ಗೊಡ್ಡೆಮ್ಮೆ ವಂದಿಸಿದರು.ಸಂಯೋಜಕ ನಾಗರಾಜ ಕುರಿ ನಿರೂಪಿಸಿದರು.