ಪತ್ರಿಕಾ ದಿನಾಚರಣೆಯಲ್ಲಿ ಶಾಸಕ
ಕನ್ನಡಪ್ರಭ ವಾರ್ತೆ ಗಂಗಾವತಿಪತ್ರಕರ್ತರು ನೈಜ ವರದಿ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.
ಒಂದು ಮಾಧ್ಯಮ ಬಯಲು ಮಾಡುತ್ತಿರುವ ವರದಿಯಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವೇ ಅಲುಗಾಡುವಂತಾಗಿದೆ. ಹಾಗಾಗಿ ಪತ್ರಕರ್ತರು ಸರ್ಕಾರದ ಸರಿ, ತಪ್ಪುಗಳನ್ನು ಮುಲಾಜಿಲ್ಲದೇ ವರದಿ ಮಾಡುವ ಛಾತಿ ಬೆಳೆಸಿಕೊಳ್ಳಬೇಕು ಎಂದರು.ಇದೇ ವೇಳೆ ಪತ್ರಿಕಾ ಭವನದ ಸಿಬ್ಬಂದಿ ಖಾಜಾಬಿ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.
ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಪ್ರಾಚಾರ್ಯ ಡಾ. ಜಾಜಿ ದೇವೇಂದ್ರಪ್ಪ, ಜಾನಕಿರಾಮ್, ಜಗನ್ನಾಥ ಆಲಂಪಲ್ಲಿ, ರವಿ ಚೇತನರೆಡ್ಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಇಂಗಳಗಿ, ವೆಂಕಟೇಶ ಅಮರಜ್ಯೋತಿ ಇತರರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜ ನಿರ್ವಹಿಸಿದರು. ಪ್ರಸನ್ನ ದೇಸಾಯಿ ಸ್ವಾಗತಿಸಿದರು. ಹರೀಶ ಕುಲಕರ್ಣಿ ಕಾರ್ಡ್ ವಿತರಣೆ ಮಾಡಿದರು. ಶ್ರೀನಿವಾಸ ಎಂ.ಜೆ. ವಂದಿಸಿದರು.
ಸಂಘದ ಉಪಾಧ್ಯಕ್ಷ ಜೋಗದ ಕೃಷ್ಣಪ್ಪ ನಾಯಕ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಿಶ್ವನಾಥ ಬೆಳಗಲ್‌ಮಠ, ಚಂದ್ರು ಮುಕ್ಕುಂದಿ, ಶಿವಪ್ಪ ನಾಯಕ, ಪತ್ರಕರ್ತರಾದ ವಿ.ಎಸ್. ಪಾಟೀಲ್, ಮಂಜುನಾಥ ಹೊಸಕೇರಿ, ಸುದರ್ಶನ ವೈದ್ಯ, ವೆಂಕಟೇಶ ಮಹಾಂತ, ಕೆ.ಎಂ. ಶರಣಯ್ಯಸ್ವಾಮಿ ಸೇರಿದಂತೆ ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.ಟಿಎಂಎಇ ಶಿಕ್ಷಣ ಸಂಸ್ಥೆಗೆ ಶೇ. 100ರಷ್ಟು ಫಲಿತಾಂಶ:
ಕೊಪ್ಪಳ ವಿಶ್ವವಿದ್ಯಾಲಯದ 2023-24ನೇ ಸಾಲಿನ ಬಿಇಡಿ ಪ್ರಥಮ ಸೆಮಿಸ್ಟರ್‌ನ ಫಲಿತಾಂಶ ಪ್ರಕಟಗೊಂಡಿದ್ದು, ಗಂಗಾವತಿ ನಗರದ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ 99 ವಿದ್ಯಾರ್ಥಿಗಳ ಉತ್ತೀರ್ಣದೊಂದಿಗೆ ಶೇ. ನೂರರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಮುತ್ತಮ್ಮ ಶೇ. 91.1, ಮುಸ್ಕಾನ್ ಶೇ. 90.5 ಮತ್ತು ಶೇ. ರತ್ನವ್ವ ಕುರಿ 90 ಅಂಕ ಪಡೆದಿದ್ದಾರೆ. ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಟಿಎಂಎಇ ಸಂಸ್ಥೆಯ ಅಧ್ಯಕ್ಷ ಸದ್ದೋಜಾತ ಮಹಾಸ್ವಾಮಿಗಳು ಮತ್ತು ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ, ಪ್ರಾಚಾರ್ಯ ಡಾ. ಕೆ.ಸಿ ಕುಲಕರ್ಣಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.