ಚಂದ್ರಶೇಖರಯ್ಯ ಹೇಳಿಕೆ । ಕಸಾಪ ನೂತನ ಪದಾಧಿಕಾರಿಗಳ ಪದಗ್ರಹಣಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಹುಳಿಯಾರು ರಸ್ತೆ ಬಳಿಯಿರುವ ವೀನಸ್ ಹಾಲ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭ ಏರ್ಪಡಿಸಲಾಗಿತ್ತು.ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಎಚ್.ಟಿ.ಚಂದ್ರಶೇಖರಯ್ಯ ಉದ್ಘಾಟಿಸಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಬೆಳೆದಿರುವ ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ತಂತ್ರಜ್ಞಾನವು ಸಹ ಅಗಾಧವಾಗಿ ಬೆಳೆಯುತ್ತಾ ಬಂದಿದೆ. ಕನ್ನಡ ತುಂಬಾ ಪ್ರಾಚೀನವಾದ ಹಾಗೂ ಸುಲಲಿತವಾದ ಭಾಷೆಯಾಗಿದೆ. ಪ್ರತಿಯೊಬ್ಬರೂ ಕನ್ನಡ ನಾಡು ನುಡಿಯ ರಕ್ಷಣೆಯನ್ನು ಕರ್ತವ್ಯವೆಂದು ಭಾವಿಸಬೇಕು ಎಂದರು.
ಕಸಾಪ ಮಾಜಿ ಅಧ್ಯಕ್ಷ ಧನಂಜಯ ಕುಮಾರ್ ಮಾತನಾಡಿ, ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಬೆಳೆಸಬೇಕು. ಉತ್ತಮ ಕನ್ನಡ ಬರವಣಿಗೆ ತಿಳಿಸಿಕೊಡಬೇಕು. ಭಾಷೆಯ ಉಳಿವು ಮತ್ತು ಬೆಳವಣಿಗೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಹಾಗಾದಲ್ಲಿ ಮಾತ್ರ ಕನ್ನಡದ ತೇರು ಸುಸೂತ್ರವಾಗಿ ಸಾಗಬಲ್ಲುದು ಎಂದು ಹೇಳಿದರು.ನೂತನ ಅಧ್ಯಕ್ಷರಾಗಿ ರಾಮಚಂದ್ರಪ್ಪ, ಗೌರವ ಕೋಶಾಧ್ಯಕ್ಷರಾಗಿ ಜಿ.ಪ್ರೇಮ್ ಕುಮಾರ್, ಕಸಬಾ ಹೋಬಳಿ ಅಧ್ಯಕ್ಷರಾಗಿ ಹುಚ್ಚವ್ವನಹಳ್ಳಿ ಪ್ರಸನ್ನ, ಗೌರವ ಕಾರ್ಯದರ್ಶಿಗಳಾಗಿ ಎಚ್.ಕೃಷ್ಣಮೂರ್ತಿ ಮತ್ತು ಜೆ.ನಿಜಲಿಂಗಪ್ಪ, ಜೆಜಿ ಹಳ್ಳಿ ಹೋಬಳಿ ಅಧ್ಯಕ್ಷರಾಗಿ ರಾಮಣ್ಣ, ಮಹಿಳಾ ಪ್ರತಿನಿಧಿಯಾಗಿ ವೇದಾ, ಪುಷ್ಪ, ಶಿಲ್ಪ ಜಗದೀಶ್, ಪರಿಶಿಷ್ಟ ಘಟಕದ ಪ್ರತಿನಿಧಿಯಾಗಿ ರವಿಚಂದ್ರನಾಯ್ಕ್, ದಿವಾಕರ್ ನಾಯಕ, ಅಲ್ಪಸಂಖ್ಯಾತ ಘಟಕದ ಪ್ರತಿನಿಧಿಯಾಗಿ ಅಸ್ಗರ್ ಅಹಮದ್, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ. ಬಸವರಾಜ್, ಸಂಘಟನಾ ಕಾರ್ಯದರ್ಶಿಗಳಾಗಿ ಗಡಾರಿ ಕೃಷ್ಣಪ್ಪ ಮತ್ತು ಮಹಮ್ಮದ್ ಫಕ್ರುದ್ದೀನ್ ಪ್ರಮಾಣವಚನ ಸ್ವೀಕರಿಸಿದರು.
ಈ ವೇಳೆ ಪ್ರೇಮ್ ಕುಮಾರ್, ಆಲೂರು ಹನುಮಂತ ರಾಯಪ್ಪ, ಕಸಾಪ ಮಾಜಿ ಅಧ್ಯಕ್ಷ ವಿ.ಎಂ.ನಾಗೇಶ್, ಹರ್ತಿಕೋಟೆ ಮಹಾಸ್ವಾಮಿ, ಶಶಿಕಲಾ ರವಿಶಂಕರ್, ಎಂ.ಕಿರಣ್ ಮಿರಜ್ಕರ್, ಪಿ.ಆರ್.ಸತೀಶ್ ಬಾಬು, ಮಹೇಶ್, ರೇವಣ್ಣ ಸಿದ್ದಪ್ಪ ಮುಂತಾದವರು ಹಾಜರಿದ್ದರು.