ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

KannadaprabhaNewsNetwork |  
Published : Apr 11, 2025, 12:31 AM IST
10ಎಚ್ಎಸ್ಎನ್5 : ಸಕಲೇಶಪುರ ತಾಲೂಕಿನ ಮಡಬಲು ಸಮೀಪ ವಶಪಡಿಸಿಕೊಳ್ಳಲಾದ ಗೋವುಗಳು | Kannada Prabha

ಸಾರಾಂಶ

ಸಿನಿಮೀಯ ಮಾದರಿಯಲ್ಲಿ ಅಕ್ರಮವಾಗಿ ಗೋ ಸಾಗಾಣೆ ಮಾಡುತ್ತಿದ್ದ ವಾಹನವೊಂದನ್ನು ಬೆನ್ನಟ್ಟಿ ಗೋವುಗಳನ್ನು ಹಿಂದೂ ಕಾರ್ಯಕರ್ತರು ಪೊಲೀಸರ ನೆರವಿನೊಂದಿಗೆ ರಕ್ಷಣೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡಾಗ ವಾಹನದಲ್ಲಿ ಸುಮಾರು ೧೦ ಗೋವುಗಳನ್ನು ಅಮಾನುಷವಾಗಿ ಕಟ್ಟಿಹಾಕಿರುವುದು ಕಂಡುಬಂದಿದೆ. ಆಲೂರು ತಾಲೂಕು ತಿಮ್ಮನಹಳ್ಳಿಯ ದೇವರಿಗೆ ಬಿಟ್ಟಿದ್ದ ಬಸವನನ್ನು ಕದ್ದು ತುಂಬಿದ್ದ ಗೋಕಳ್ಳ ತನ್ನದೇ ಊರಿನಿಂದ ಗೋವುಗಳನ್ನ ಕದ್ದು ತುಂಬಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸಿನಿಮೀಯ ಮಾದರಿಯಲ್ಲಿ ಅಕ್ರಮವಾಗಿ ಗೋ ಸಾಗಾಣೆ ಮಾಡುತ್ತಿದ್ದ ವಾಹನವೊಂದನ್ನು ಬೆನ್ನಟ್ಟಿ ಗೋವುಗಳನ್ನು ಹಿಂದೂ ಕಾರ್ಯಕರ್ತರು ಪೊಲೀಸರ ನೆರವಿನೊಂದಿಗೆ ರಕ್ಷಣೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ಅತಿವೇಗವಾಗಿ ಹೋಗುತಿದ್ದ ವಾಹನ ವಾಹನದಲ್ಲಿ ಅಕ್ರಮವಾಗಿ ಗೋ ಸಾಗಾಣಿಕೆ ಮಾಡುತ್ತಿರುವ ಕುರಿತು ರಾಮಧೂತ ಗಣಪತಿ ಸಮಿತಿ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಪಾಸಣೆ ಮಾಡಲು ಮುಂದಾದಾಗ ವಾಹನ ಚಾಲಕ ನಿಲ್ಲಿಸದೆ ಅಲ್ಲಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಹೋಗಿದ್ದಾನೆ. ಪೊಲೀಸರ ಜೊತೆ ಹಿಂದೂ ಕಾರ್ಯಕರ್ತರು ಸಹ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿದ್ದು ಆದರೂ ಸಹ ಚಾಲಕ ಸಿನಿಮೀಯ ಮಾದರಿಯಲ್ಲಿ ಅತಿ ವೇಗವಾಗಿ ತನ್ನ ವಾಹನವನ್ನು ಓಡಿಸಿಕೊಂಡು ಹೋಗಿದ್ದಾನೆ.

ನಂತರ ಹಿಂಬಾಲಿಸಿಕೊಂಡು ಹೋದಾಗ ಮಡಬಲು ಸಮೀಪ ಮುಂದೊಂದು ವಾಹನ ಹೋಗುತ್ತಿದ್ದರಿಂದ ಮುಂದೆ ಹೋಗಲಾಗದೆ ವಾಹನವನ್ನು ಸ್ಥಳದಲ್ಲೇ ತನ್ನ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡಾಗ ವಾಹನದಲ್ಲಿ ಸುಮಾರು ೧೦ ಗೋವುಗಳನ್ನು ಅಮಾನುಷವಾಗಿ ಕಟ್ಟಿಹಾಕಿರುವುದು ಕಂಡುಬಂದಿದೆ. ಆಲೂರು ತಾಲೂಕು ತಿಮ್ಮನಹಳ್ಳಿಯ ದೇವರಿಗೆ ಬಿಟ್ಟಿದ್ದ ಬಸವನನ್ನು ಕದ್ದು ತುಂಬಿದ್ದ ಗೋಕಳ್ಳ ತನ್ನದೇ ಊರಿನಿಂದ ಗೋವುಗಳನ್ನ ಕದ್ದು ತುಂಬಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗೋಸಾಗಾಟ ಮಾಡುತ್ತಿದ್ದ ಅಶೋಕ್ ಲೇಲ್ಯಾಂಡ್ ಬಾಸ್‌ ವಾಹನ ಮಾಲೀಕ ಪ್ರವೀಣ್ ಮತ್ತು ವಾಹನ ಚಾಲಕ ಸ್ಥಳದಿಂದ ಓಡಿ ಹೋಗಿದ್ದು, ವಾಹನ ಸಹಿತ ಗೋವುಗಳ ಸಂರಕ್ಷಣೆ ಮಾಡಲಾಗಿದೆ. ಇದೇ ಸಂರ್ಧಭದಲ್ಲಿ ಗೋವುಗಳನ್ನು ಬೇರೆಡೆಗೆ ಸಾಗಿಸಲು ಮತ್ತೊಂದು ವಾಹನ ಬಂದಿದ್ದು ಇದರ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕೆಂದು ರಾಮಧೂತ ಗಣಪತಿ ಸೇವಾ ಸಮಿತಿ ಕಾರ್ಯಕರ್ತರು ಮನವಿ ಮಾಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ