ಗೋಕರ್ಣ: ಸಮುದ್ರದಲ್ಲಿ ಈಜಾಡಲು ತೆರಳಿ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ವಿದೇಶಿ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಬುಧವಾರ ಸಂಜೆ ಕುಡ್ಲೆ ಕಡಲತೀರದಲ್ಲಿ ನಡೆದಿದೆ.
ಇಟಲಿಯ ಜಾರ್ಜ್(೮೩) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗ. ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಕುರ್ಲೆ, ಪ್ರದೀಪ ಅಂಬಿಗ, ಮೈಸ್ಟಿಕ್ ವಾಟರ್ ಸ್ಪೋರ್ಟ್ಸ್‌ನ ಜಸ್ಟಸ್ಕಿ ಹಾಗೂ ಬೋಟ್‌ಗಳ ಸಹಾಯದೊಂದಿಗೆ ರಕ್ಷಣಾ ಕಾರ್ಯ ಮಾಡಿದ್ದು, ಇವರಿಗೆ ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಸಹಕರಿಸಿದ್ದಾರೆ.೨೧ರಂದು ಜಿಲ್ಲಾ ಮಟ್ಟದ ಫೈಝಾನೆ ಮದೀನಾ ಸಮಾವೇಶದಾಂಡೇಲಿ: ಸುಭಾಸ ನಗರದಲ್ಲಿರುವ ನೂರ್ ಇಸ್ಲಾಂ ರಿಲಿಜಿಯಸ್ ಮತ್ತು ಎಜುಕೇಶನ್ ಟ್ರಸ್ಟ್‌ನ ಆಶ್ರಯದಡಿ ಡಿ. ೨೧ರಂದು ಮುಸ್ಲಿಂ ಧರ್ಮದವರಿಂದ ಫೈಝಾನೆ ಮದೀನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಇಕ್ಬಾಲ್ ಶೇಖ್ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಮಾವೇಶವನ್ನು ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ. ಡಿ. ೨೧ರಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ನಂತರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಧರ್ಮಗುರು, ಉತ್ತರ ಪ್ರದೇಶದ ಸಯ್ಯದ ಜಮಿ ಅಶ್ರಫ, ಅಲಹಾಬಾದ್‌ನ ಗುಲಾಮ ರಬ್ಬಾನಿ ನಸ್ತರ, ಬೆಂಗಳೂರಿನ ನಜೀರ ರಜಾಕ್ ಖಾನ ಅವರು ಪ್ರವಚನವನ್ನು ನೀಡಲಿದ್ದಾರೆ ಎಂದರು.
ಶಾಸಕ, ರಾಜ್ಯ ಆಡಳಿತ ಸುಧಾರಣಾ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಹೆಸ್ಕಾಂ ಅಧ್ಯಕ್ಷ ಅಜೀಮ್ ಪೀರ ಖಾದ್ರಿ, ವಕ್ಫ್ ಬೋರ್ಡ್ ಸದಸ್ಯ ಅನ್ವರ ಪಾಶಾ, ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನ ಮಂಡಳಿಯ ರಾಜ್ಯ ನಿರ್ದೇಶಕ ಮಹಮ್ಮದ ರಸೀದ ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ದಾಂಡೇಲಿ ನಗರಸಭೆಯ ಅಧ್ಯಕ್ಷ ಅಷ್ಫಾಕ್ ಶೇಖ್, ಪ್ರಮುಖರಾದ ಗೌಸ ಖತಿಬ್, ನವಾಜ ಕರೀಮ ಖಾನ, ಮಜೀದ ಸನದಿ, ಮೌಲಾಲಿ ಮುಲ್ಲಾ, ದಾದಾಪೀರ ನದಿಮುಲ್ಲಾ, ರಫೀಕ ಖಾನ್, ರಾಜಾಸಾಬ ಸುಂಕದ, ಇಮ್ತಿಯಾಜ ಅತ್ತಾರ, ತೌಸೀಫ್ ಪಟೇಲ್, ಸರ್ಫರಾಜ ಮುಲ್ಲಾ, ಉಬೇದ ಖಾನ, ಬಾಬುಲಾಲ ಪೀಜಾದೆ, ರಫೀಕ್ ಹುದ್ದಾರ, ಕರೀಮ ಗೌಸ್ ಖತಿಬ, ಆರ್.ಎ. ಖಾನ ಇತರರು ಇದ್ದರು.