ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಶಾಲಾ ವತಿಯಿಂದ ನಡೆದ ವಿಶ್ವ ಓಜೋನ್ ದಿನದ ನಿಮಿತ್ತ ವಿದ್ಯಾರ್ಥಿಗಳ ಮೂಲಕ ಸಸ್ಯ ಸಾಕ್ಷರತಾ ಆಂದೋಲನಾ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಸಸ್ಯ ಸಂಕುಲವು ಪ್ರಕೃತಿಯ ನಿಜವಾದ ಸಂಪತ್ತು. ಇದರ ಉಳಿವು ಮತ್ತು ಬೆಳವಣಿಗೆ ಜೊತೆಗೆ ಮನುಕುಲದ ರಕ್ಷಣೆ ಸಾಧ್ಯ. ನೀರು ಮತ್ತು ಸಸ್ಯ ಮಾನವ ಕುಲಕ್ಕೆ ಒದಗಿಬಾರದಿದ್ದರೆ ಮನುಕುಲದ ಅಸ್ತಿತ್ವವೇ ಹೋಗುತಿತ್ತು. ಈ ಸಂಪತ್ತನ್ನು ಮುಂದಿನ ತಲೆಮಾರಿಗೆ ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ವಿದ್ಯಾರ್ಥಿ ಮೇಲಿದೆ ಎಂದು ಹೇಳಿದರು.ಸಸ್ಯ ಎನ್ನುವುದು ಸರಳ ಸಾಕ್ಷರತೆ. ಪೂರ್ವಿಕರು ನೆಡುತೋಪು ಮತ್ತು ಗುಂಡು ತೋಪುಗಳಲ್ಲಿ ಸಸ್ಯ ಸಂರಕ್ಷಿಸಿ ಅತಿ ಹೆಚ್ಚು ಆಮ್ಲಜನಕವನ್ನು ಪಡೆದುಕೊಳ್ಳುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಆಮ್ಲಜನಕವನ್ನು ದುಡ್ಡುಕೊಟ್ಟು ಪಡೆಯುವಂತಹುದ್ದನ್ನು ಬೇರೆ ಬೇರೆ ರಾಷ್ಟ್ರಗಳಲ್ಲಿ ಕಾಣಬಹುದು.
ಪರಿಸರ ನಾಶದ ಮೂಲಕ ವಾತಾವರಣವನ್ನು ಅನೇಕ ಬಗೆಯಲ್ಲಿ ಕಲುಷಿತಗೊಳಿಸುತ್ತಿರುವ ನಾವು ಭೂಮಿ ಸುತ್ತಲೂ ರಕ್ಷಾ ಕವಚದಂತಿರುವ ಓಜೋನ್ ಪದರವನ್ನು ಶಿಥಿಲಗೊಳಿಸುತ್ತಿದ್ದೇವೆ. ಇವುಗಳೆಲ್ಲದರ ಪರಿಣಾಮವೇ ತಾಪಮಾನದ ಏರಿಕೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಭವ್ಯ ಅವರು ಸಸಿಗಳನ್ನು ವಿತರಿಸಿದರು. ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ವಿದ್ಯಾರ್ಥಿಗಳ ಮೂಲಕ ಸಸ್ಯಸಾಕ್ಷರತಾ ಕಾರ್‍ಯಕ್ರಮಗಳ ಮಾಹಿತಿ ನೀಡಿ, ಪ್ರತಿ ವರ್ಷ ಸಸಿಗಳನ್ನು ನೆಟ್ಟು ಬೆಳೆಸಿದ ವಿದ್ಯಾರ್ಥಿಗಳಿಗೆ 6 ಸಾವಿರ ನಗದನ್ನು ನೀಡಿ ಪುರಸ್ಕರಿಸಿದರು.
ವಿಶ್ವ ಓಜೋನ್ ದಿನದ ನಿಮಿತ್ತ ಚಿತ್ರಕಲಾ ಸ್ಪರ್ಧೆ, ವಿಜೇತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ, ಸಸಿ ವಿತರಣೆ ಮತ್ತು ಸಸಿಗಳನ್ನು ನೆಡಲಾಯಿತು.