ಕನ್ನಡಪ್ರಭ ವಾರ್ತೆ, ತರೀಕೆರೆ
ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ತರೀಕೆರೆ, ಗ್ರಾಮ ಪಂಚಾಯತ್ ಸುಣ್ಣದಹಳ್ಳಿ ಮತ್ತು ಊರ ಮುಂದಿನ ಕೆರೆ (ಗೋಕಟ್ಟೆ )ಕೆರೆ ಅಭಿವೃದ್ಧಿ ಸಮಿತಿ ನಂದಿ ಇವರ ಸಹಕಾರ ದೊಂದಿಗೆ ಸಮೀಪದ ನಂದಿ ಗ್ರಾಮದಲ್ಲಿ ಪುನಶ್ಚೇತನಗೊಂಡ 564 ನೇ ನಮ್ಮೂರು ನಮ್ಮ ಕೆರೆ ನಾಮ ಫಲಕ ಅನಾವರಣ, ಕೆರೆ ಬಾಗಿನ ಅರ್ಪಣೆ, ಕೆರೆಯಂಗಳದಲ್ಲಿ ಗಿಡ ನಾಟಿ, ಕೆರೆ ಸಮಿತಿಯವರಿಗೆ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 3.78 ಲಕ್ಷ ವೆಚ್ಚದಲ್ಲಿ ಕೆರೆ ಹೂಳೆತ್ತಿಸಿ ಸುಂದರವಾಗಿ ರೂಪಿಸಿದ್ದಾರೆ. ಗ್ರಾಮಸ್ಥರು ಕೆರೆಯನ್ನು ಶುಚಿಯಾಗಿಡಬೇಕು. ಕೆರೆ ಸುತ್ತ ಮುತ್ತ ಅರಣ್ಯ ಸಸಿ ನೆಟ್ಟಿದ್ದು ಕಾಪಾಡಿಕೊಳ್ಳಬೇಕು. ಗ್ರಾಮಾಭಿವೃದ್ಧಿ ಯೋಜನೆ ಇಂತಹ ಹತ್ತು ಹಲವು ಕಾರ್ಯಕ್ರಮ ನಡೆಸುತ್ತಾ ಸಮಾಜಕ್ಕೆ ಮಾದರಿಯಾಗಿದೆ. ದೇವಸ್ಥಾನಗಳ ಜೀರ್ಣೋದ್ಧಾರ, ಆರೋಗ್ಯ ಕಾರ್ಯಕ್ರಮ, ಸ್ವ ಸಹಾಯ ಸಂಘಗಳನ್ನು ರಚಿಸಿ ಪೂರಕ ಪ್ರಗತಿ ನಿಧಿ ನೀಡಿ ಕುಟುಂಬ ಅಭಿವೃದ್ಧಿ, ಕೃಷಿ ಕಾರ್ಯಕ್ರಮ ನಡೆಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅಭಿನಂದಿಸಿದರು.ಚಿತ್ರದುರ್ಗ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಅಭಿಯಂತರ ಹರೀಶ್ ನಾಯ್ಕ್ ಮಾತನಾಡಿ ಪ್ರತಿ ವರ್ಷ ತಾಲೂಕಿಗೆ ಒಂದು ಕೆರೆಯಂತೆ ಇದುವರೆಗೂ ರಾಜ್ಯಾದ್ಯಂತ 643 ಕೆರೆಗಳ ಹೂಳೆತ್ತಿಸಿ, ಪುನಶ್ಚೇತನ ಗೊಳಿಸಲಾಗಿದೆ. ಗ್ರಾಮದ ಕುಡಿಯುವ ನೀರಿನ ಮೂಲ ಕೆರೆ. ಆದರೆ ಇಂದು ಕೆರೆಗಳು ನಶಿಸುತ್ತಿವೆ, ನೀರಿನ ಅಭಾವ ಉಂಟಾಗುತ್ತಿದ್ದು ನೀರು ನಮಗೆಲ್ಲರಿಗೂ ಅತ್ಯಮೂಲ್ಯ ಎಂದು ಹೇಳಿದರು.
ತಾಲೂಕು ಕ್ಷೇತ್ರ ಯೋಜನಾಧಿಕಾರಿ ಕೆ. ಕುಸುಮಾಧರ್ ಮಾತನಾಡಿ, ಯೋಜನೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಈ ಕೆರೆ ಹೂಳೆತ್ತಿಸಿ ಪುನಶ್ಚೇತನ ಗೊಳಿಸಿ ನೀಡುತಿದ್ದೇವೆ. ಕೆರೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಸುಣ್ಣದ ಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜಪ್ಪ.ಬಿ. ಮಾತನಾಡಿ ಒಂದು ಗ್ರಾಮದಲ್ಲಿ ಕೆರೆ, ಕುಂಟೆ, ದೇವಸ್ಥಾನಗಳು ಊರಿನ ಆಸ್ತಿ ಅವುಗಳ ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಆದ್ಯ ಕರ್ತವ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಗ್ರಾಮಕ್ಕೆ ಉಪಯುಕ್ತವಾದ ಕೆರೆ ಪುನಶ್ಚೇತನ ಮಾಡಿರುವುದು ಶ್ಲಾಘನೀಯ ಎಂದರು.
ಗ್ರಾಪಂ ಸದಸ್ಯರಾದ ಹರೀಶ್ ಎನ್. ಸಿ ಮತ್ತು ಮಮತ ಸುರೇಶ್, ಗ್ರಾಮದ ಮುಖಂಡರಾದ ಶಂಕರ ಲಿಂಗಪ್ಪ, ಕೆರೆ ಸಮಿತಿ ಸದಸ್ಯರಾದ ಪ್ರಸನ್ನ, ಬಸವರಾಜಪ್ಪ, ಸೇವಾಪ್ರತಿನಿಧಿ ಲೀಲಾ ಮತ್ತು ಆಶಾ, ಕೃಷಿ ಮೇಲ್ವಿಚಾರಕ ಸಂತೋಷ್, ವಲಯದ ಮೇಲ್ವಿಚಾರಕ ಸತೀಶ್, ಕೆರೆ ಸಮಿತಿ ಸದಸ್ಯರು, ಗ್ರಾಮಸ್ಥರು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.24ಕೆಟಿಆರ್.ಕೆ.8ಃ
ಯೋಜನಾಧಿಕಾರಿ ಕೆ.ಕುಸುಮಾಧರ್ ಮತ್ತಿತರರು ಇದ್ದಾರೆ.