ದೆಹಲಿ ಸಿಎಂ ಕೇಜ್ರಿವಾಲ್‌ ಬಂಧನ ಖಂಡಿಸಿ ಧರಣಿ

KannadaprabhaNewsNetwork |  
Published : Apr 08, 2024, 01:04 AM ISTUpdated : Apr 08, 2024, 01:05 AM IST
ಅಅಅ | Kannada Prabha

ಸಾರಾಂಶ

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ಭಾನುವಾರ ಆಪ್ ಕಾರ್ಯಕರ್ತರು ದೇಶಾದ್ಯಂತ ಕರೆ ನೀಡಿದ್ದ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಳಗಾವಿಯಲ್ಲಿ ಆಪ್‌ ಕಾರ್ಯಕರ್ತರು ನಗರದ ಚನ್ನಮ್ಮವೃತ್ತದ ಬಳಿ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ಭಾನುವಾರ ಆಪ್ ಕಾರ್ಯಕರ್ತರು ದೇಶಾದ್ಯಂತ ಕರೆ ನೀಡಿದ್ದ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಳಗಾವಿಯಲ್ಲಿ ಆಪ್‌ ಕಾರ್ಯಕರ್ತರು ನಗರದ ಚನ್ನಮ್ಮವೃತ್ತದ ಬಳಿ ಧರಣಿ ನಡೆಸಿದರು.

ಎಎಪಿ ಜಿಲ್ಲಾಧ್ಯಕ್ಷ ಶಂಕರ ಹೆಗ್ಗಡೆ ಮಾತನಾಡಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಡ ಜನರ ಆಶಾದಾಯಕ ವ್ಯಕ್ತಿ. ದೇಶದ ರಾಜಕಾರಣ ಬದಲಾಯಿಸಿದ ವ್ಯಕ್ತಿ ಅರವಿಂದ ಕೇಜ್ರಿವಾಲ್, ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದ ಒಂದು ದಿನದ ಉಪವಾಸ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು .ಈ ಧರಣಿಯಲ್ಲಿ ರವೀಂದ್ರ ಬೆಲ್ಲದ , ಎಂ.ಕೆ. ಸೈಯದ್ ,ಜುನೈದ್ ಸೈಯದ್ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ‘ಸುಸ್ಥಿರ ಡೇಟಾ ಸೆಂಟರ್‌’
ಉಪ ನೋಂದಣಾಧಿಕಾರಿಗೆ ಧಮ್ಕಿ ಹಾಕಿದ್ದ ಆರೋಪಿ ಸೆರೆ