ದಲಿತ ಮುಖಂಡರು ಪಿಎಸ್‌ಐ ಅವರನ್ನು ತಕ್ಷಣದಿಂದ ಸೇವೆಯಿಂದ ವಜಾಗೊಳಿ ದಲಿತರಿಗೆ ನ್ಯಾಯ ನೀಡಬೇಕು
ಕುಕನೂರು: ಕುಟುಂಬದ ಕಲಹ ಬಗೆಹರಿಸಲು ಬಂದ ನನಗೆ ಪಿಎಸ್‌ಐ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಹಿನ್ನೆಲೆ ಗಾಳೆಪ್ಪ ಹಿರೇಮನಿ ಎನ್ನುವರು ಕುಕನೂರು ಪೊಲೀಸ್ ಠಾಣೆಯ ಎದುರು ದಲಿತ ಸಂಘಟನೆಯೊಂದಿಗೆ ಮಂಗಳವಾರ ರಾತ್ರಿ ಧಿಡೀರ್ ಪ್ರತಿಭಟನೆ ನಡೆಸಿದರು.
ನನ್ನ ಸಂಬಂಧಿಕರಾದ ಕುಕನೂರು ತಾಲೂಕಿನ ತಳಕಲ್ ಗ್ರಾಮದ ದಂಪತಿಗೆ ಸಂಬಂಧಿಸಿದಂತೆ ಜಗಳ ಬಗೆಹರಿಸಲು ಪೊಲೀಸ್ ಠಾಣೆಗೆ ತೆರಳಿದ್ದು, ಅವರ ನಡುವೆ ನಡೆದ ವಿಷಯಗಳ ಬಗ್ಗೆ ಪಿಎಸ್‌ಐ ಅವರಿಗೆ ಹೇಳಲಾಗುತ್ತಿತ್ತು. ಆದರೆ, ನಾನು ಮುಂದುವರೆದೂ ಮಾತನಾಡಿ,ಈ ದಂಪತಿಗಳ ಜಗಳದ ವಿಷಯದಲ್ಲಿ ಗಂಡನಿಗೆ ಸಲ್ಪ ಬುದ್ಧಿ ಹೇಳಿ ಕಳಿಸಿ ಎಂದು ಹೇಳಿದೆ. ಇದಕ್ಕೆ ತಕ್ಷಣ ಸಿಟ್ಟಿಗೆ ಬಂದ ಪಿಎಸ್‌ಐ ಟಿ. ಗುರುರಾಜ ನನಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದು, ದಲಿತರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಜತೆಗೆ ಹಲ್ಲೆ ಮಾಡಿದ್ದಾರೆ. ಕೂಡಲೇ ನನಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಹಲವು ದಲಿತ ಮುಖಂಡರು ಪಿಎಸ್‌ಐ ಅವರನ್ನು ತಕ್ಷಣದಿಂದ ಸೇವೆಯಿಂದ ವಜಾಗೊಳಿ ದಲಿತರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಮಾತನಾಡಿ, ನಿಮ್ಮ ದೂರನ್ನು ಆಧರಿಸಿ,ಎಸ್ಪಿ ಅವರೊಂದಿಗೆ ಚರ್ಚೆ ನಡೆಸಿ ಪಿಎಸ್‌ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ವಕೀಲ ಎಂ.ಎಚ್. ಉಜ್ಜಮ್ಮನವರ, ಮಹಾಂತೇಶ ಬೂದಗುಂಪ, ಮಲ್ಲು ಪೂಜಾರ, ಪ್ರಕಾಶ ಹೊಳೆಪ್ಪನವರ, ನಿಂಗಜ್ಜ ಶಹಪೂರ, ಸಿದ್ದು ಮಣ್ಣಿನವರ್, ಚಂದ್ರಕಾಂತ ಗುಡಿಮನಿ, ಲಕ್ಷ್ಮಣ ಬಾರಿಗಿಡ, ಪ್ರಕಾಶ ಹಿರೇಮನಿ, ಬಸವರಾಜ ಬೂದಗುಂಪಿ, ಮುತ್ತಣ್ಣ ರ‍್ಯಾವಣಕಿ, ನಿಂಗು ಬೆಣಕಲ್ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.